ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, May 16, 2012

ಆಹ್ವಾನದ ಕವಿತೆಗೊಂದು ಪ್ರತ್ಯುತ್ತರ

***********************************************************************************************
ಬರುತಿಹೆನು ಗೆಳೆಯ
ನಿನ್ನಯ ಆಹ್ವಾನದ ಕೂಟಕೆ ,
ಚಪ್ಪರಿಸಿ ತಿಂದು ತೇಗಲು
ಕಾಯುತಿಹುದು ನನ್ನ ಹೊಟ್ಟೆ
ನೀ ಮಾಡಿಟ್ಟ ಊಟಕೆ ,
ಹಸಿರೊತ್ತ ಭೂ ತಾಯಿಯ
ಹಾಸಿಗೆ ಸಾಕು ,
ತಂಪು - ಇಂಪಾಗಿ ಹಾಡುವ
ಸವಿಯಾದ ಗಾಳಿ ಬೇಕು .
ಎಲ್ಲವನು ಉಣಬಡಿಸುವ
ನೀ ಇತ್ತ ಈ ಪ್ರೀತಿಯ
ಕವಿತೆ ಸಾಕು !
                    -ಗಣಿ 
***********************************************************************************************

No comments:

Post a Comment