ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, April 28, 2012

ದ್ವಂದಾತ್ಮದ ವ್ಯಸನ - ಪರಮಾತ್ಮ

***********************************************************************************************


ನಿನ್ನಯ ಕದನವೆಂಬ ಆಟಕೆ
ಈ ಜಡ -ಜಟಿಲವೆಂಬ
ಶಾರೀರವ ಮಾಡಿ ,
ಸಕಲ ಇಂದ್ರಿಯಗಳನಿತ್ತು
ಅವ ಮೂದಲಿಸಿ ,
ಲಾಲಿಸಿ -ಪಾಲಿಸಿ ,
ಕುಣಿಸಿ -ದಣಿಸಿ ,
ನೋವು-ನಲಿವೆಂಬ
ಕಷ್ಟ - ಕಾರ್ಪಣ್ಯಗಳನಿತ್ತು ,
ಕೊನೆಗೆ ಸಾಯಿಸಿ ಪರಾರಿಯಾಗುವ
ದುರಾತ್ಮವೆ, ಈ ಕದನಕೆ
ನೀನಿತ್ತಿದ್ದು ,ಏಕಾತ್ಮವಲ್ಲ !
ದ್ವಂದಾತ್ಮ !!
ಆಟದಿ ಸೋಲುಣಿಸಲಿತ್ತ
ಪ್ರೇತಾತ್ಮ ಒಂದಾದರೆ,
ಅದರೆದುರು ನೀ ಗೆಲ್ಲಲಿತ್ತ
ಆತ್ಮವೇ ಪರಮಾತ್ಮ !!!
ನಡುವೆ ನರಳುತಿಹುದು
ಎನ್ನಯ ಜೀವಾತ್ಮ ! :(:(

-@(-ಗಣಿ -)@-
***********************************************************************************************

Friday, April 20, 2012

ಮಧುರವಾದ ಮುಸ್ಸಂಜೆ ಕಾರ್ಮೋಡದ ಸಿಡಿಲಿಗೆ

***********************************************************************************************

ಆ ಒಂದು ಮುಸ್ಸಂಜೆಯಲಿ,
ತಂಪಾದ ಗಾಳಿಯಲಿ
ಜಿನುಗುತಿರುವ ಚಿಟಪಟ ಮಳೆಯಲಿ
ನನ್ನ ಪ್ರೇಮವು
ನನಗೆ ಸಿಕ್ಕ ಹರುಷದಲಿ
ನಾ ಮುಳುಗಿ ಹೋಗಿದ್ದೆ
ನನ್ನ ಪ್ರೀತಿಯ ಒಡನಾಟದಲಿ!

ಓ ಪ್ರೀತಿಯೇ ನೀನೆಷ್ಟು ಸುಂದರ

ಮರು ಮುಸ್ಸಂಜೆಯಲಿ ಮತ್ತೆ
ಸಾಗಿತ್ತು ನಮ್ಮಿಬ್ಬರ ಪ್ರೀತಿಯ ಒಡನಾಟ
ಅದು ಹಸಿದಿದ್ದ ಜನರ
ಬಾಯಿಗೆ ಆಗಿತ್ತು ಭೋಜನ ಕೂಟ
ನಮಗೆ ತಿಳಿಯದೆ ಜನರು
ನಡೆಸಿದ್ದರು ನಮ್ಮ ಜೀವನದಲ್ಲಿ ದೊಂಬರಾಟ
ನನಗರಿವಾಯಿತು ನಮ್ಮ ಪ್ರೀತಿಗೊಂದು
ದಿನ ಬೀಳುವುದು ಬಗುನೀ ಗೂಟ

ಓ ಪ್ರೀತಿಯೇ ನೀನೆಷ್ಟು ನಟಭಯಂಕರ

ಅದೇ ಆ ಮುಸ್ಸಂಜೆ
ನಾ ಹೊರಟಿದ್ದೆ ಎನ್ನ
ಪ್ರೇಯಸಿಯ ಕಾಣಲೆಂದು
ನನಗರಿಯದೆ ಪ್ರೇಯಸಿಯ ಅಣ್ಣನ
ಆಗಮನವಾಗಿತ್ತು ನನಗೆ
ಎಚ್ಚರಿಕೆಯ ಘಂಟೆ ಭಾರಿಸಲೆಂದು
ನಾನೆಂದೆ ! ನನಗೆ ಯಾವ
ಭಯವೂ ಇಲ್ಲವೆಂದು
ನಾ ಕೆಚ್ಚೆದೆಯ ಭಂಟನೆಂದು!

ಓ ಪ್ರೀತಿಯೇ ನೀನೆಷ್ಟು ಅಭಯಂಕರ
ಅದೊಂದು ಕಾಡಿದ ಮುಸ್ಸಂಜೆ ,
ನನ್ನ ನಾ ಕಳೆದುಹೋದೆ ಮರುಗುತ
ನಮ್ಮ ಪ್ರೇಮದ ಕೊಂಡಿಯ ಅಲುಗಾಡಿಸಿತ್ತು
ಜಾತಿಯೆಂಬ ಪಾರಂಗತ ,
ನಿನ್ನ ಪರಿವಾರ ನಿನ್ನ ಮಾಡಿತ್ತು ಭೂಗತ
ನಿನ್ನ ಕಳೆದುಕೊಂಡು ನಾನು ಅಸ್ತಂಗತ
ಓ ಪ್ರೀತಿಯೇ ನೀನೆಷ್ಟು ಮಾಯಾಂಕುರ

ಮತ್ತದೇ ಮುಸ್ಸಂಜೆ
ನಿನ್ನ ಕಳೆದುಕೊಂಡ ಒಂದು
ವರುಷದ ಮರುಕದಲಿ
ನನ್ನ ಮೈಯನು ಒಡ್ಡಿದೆ
ಭೋರ್ಗರೆವ ಆ ಮಳೆಯಲಿ
ಮತ್ತೆ ನನ್ನ ಮನವು ಮುಳುಗಿತು
ನಿನ್ನ ಮಾಸದ ಪ್ರೀತಿಯಲಿ
ಹೊರಹೊಮ್ಮಿತು ಪ್ರೇಮದ ಹನಿಗಳು
ನನ್ನ ಕಂಗಳಲಿ

ಓ ಪ್ರೀತಿಯೇ ನೀನೆಷ್ಟು ದುಃಖಕರ

ಅದು ಕೊನೆಯ ಮುಸ್ಸಂಜೆ
ನಾ ಚೀರಿದೆ, ಓ ಪ್ರೀತಿಯೇ
ನಿನಗೆ ಉಳಿಗಾಲವಿಲ್ಲವೆಂದು,
ಭುವಿಗೆ ರೋಷದಿ ಗುದ್ದಿದೆ,
ಪ್ರೇಯಸಿ , ನಿನ್ನ ಮರೆಯಲಾಗದೆಂದು!
ಆಗಸದಿ ಮೋಡವು ಗುಡುಗಿತು
ನೀ ನನಗೆ ಸಿಗಲಿಲ್ಲವೆಂದು ,
ನನ್ನ ನೋವಿನ ಆಕ್ರನಾದ ಮುಗಿಲು
ಮುಟ್ಟುತ ಹೇಳಿತು ಜಗದಲಿ
ಜಾತಿಯೇ ಇರಬಾರದಾಗಿತ್ತೆಂದು,
ಕಾರ್ಮೋಡದ ಸಿಡಿಲಿಗೆ ನನ್ನ
ಪ್ರಾಣಪಕ್ಷಿ ಹಾರಿ ಬರುತಿದೆ
ನಿನ್ನ ಸೇರಲೆಂದು!

ಓ ಪ್ರೀತಿಯೇ ನೀನೆಷ್ಟು ಕ್ರೂರಾಂಕುರ


-@(-ಗಣಿ -)@-

ಇದು ಕಥೆ-ಕಾವ್ಯವಾಣಿಗೆ ಸೇರದ ಒಂದು ಸಣ್ಣ ಕಾಲ್ಪನಿಕ ಹಾಗೂ ಭಾವುಕತೆಗೆ ಒತ್ತು ನೀಡಿ ಬರೆದಿರುವ ಸಾಕ್ಸ್ಯಚಿತ್ರ . ಪ್ರೀತಿಯ ಅಮಲಿನಲ್ಲಿ ಸಿಕ್ಕಿ ಪ್ರೀತಿಯಿಂದ ಲೋಕವನ್ನು ಮರೆತವನು ಕೊನೆಗೆ ವಿರಹಿಯಾದ ಪ್ರಿಯಕರನ ಗೋಳಿನ ವ್ಯಥೆ , ಪ್ರೀತಿಯ ಧಕ್ಕಿಸಿಕೊಳ್ಳಲಾಗದೆ ಜೀವನದುದ್ದಕ್ಕೂ ಮರುಗಿ ಪ್ರೀತಿಗಾಗಿ ಪ್ರಾಣ ಕಳೆದುಕೊಳ್ಳುವವರ , ಹತಾಷೆಯಿಂದು ಬೆಂದು ಬೆಂಗಾಡಿನ ಹಾದಿ ಹಿಡಿಯುವವರ , ಕಾದ ಎಣ್ಣೆಯಲಿ ಶರೀರವ ಅದ್ದಿದಾಗ ಆಗುವ ಸಂಕಟದಂತೆ ,ಪ್ರೀತಿಯ ನೋವಿನಲಿ ಮುಳುಗಿ ಅನುಭವಿಸುವ ಆ ಗೋಳಾಟವನ್ನು ಕಂಡು ಕೇಳಿರಬಹುದು . ಮನುಕುಲಕ್ಕಂಟಿರುವ ಈ ಜಾತೀಯತೆ ನಿರ್ಮೂಲನೆ ಮಾಡಿ ಲೋಕದಲ್ಲಿರುವುದೆರೆಡೇ ಜಾತಿ ಗಂಡು-ಹೆಣ್ಣು ಎಂಬುದು . ನಿಷಲ್ಮಶ ಪ್ರೀತಿಗೆ ಮುನ್ನುಡಿ ಬರೆದು ಅದಕ್ಕೊಂದು ಬುನಾದಿಯ ಹಾಕೋಣ .

***********************************************************************************************

"ಮತ್ತೆ ಬಾ ಗೆಳತಿ ಸ್ನೇಹದ-ಕಡಲನುಳಿಸಲು"

***********************************************************************************************


ಪ್ರೀತಿಯ ಬಂಧನದಿ ನೊಂದು ,

ಬೆಂದು , ಹೊರಬಂದು ,

ನನ್ನ ಜೀವನ ಸಾರ್ಥಕವಾಯಿತೆಂದು

ನಿನ್ನ ಸ್ನೇಹ - ಪ್ರೇಮವೆಂಬ ದ್ವಂದಯರಲಿ

ಯಾವುದು ಬೇಕೆಂದು

ಪರದಾಡಿದ

ನೋವಿನ ಕಥೆಯ

ನಿನಗೆ ಉಣಬಡಿಸಲೆಂದು

ಗೆಳತಿ ಬರೆಯುತಿರುವೆ ಈ ದಿನದಂದು

ಪ್ರೀತಿಯ ಓಲೆಯೊಂದು .


ಮತ್ತೆ ಬಾ ಗೆಳತಿ ಸ್ನೇಹದ-ಕಡಲನುಳಿಸಲು


ಮತ್ತೆ ಬಾ ಗೆಳತಿ,

ನನ್ನ ಸ್ನೇಹದ ಕಡಲನುಳಿಸಲು,

ನನಗಾಗಿ ನಾ ಮೌನಿಯಾಗಲಿಲ್ಲ ,

ನಿನ್ನ ಒಳಿತಿಗಾಗಿ ಎಲ್ಲ ,

ಪ್ರೇಮದ ಅಮಲಿನಲ್ಲಿ ಮುಳುಗಿಸದೆ ,

ದ್ವೇಷವ ನಾ ಮೂಡಿಸಿದ್ದೆ ,

ದುಷ್ಟ ಸ್ನೇಹಿತ ನಾನಲ್ಲ ,

ನಿನ್ನ ಪ್ರೇಮಕೆ ಮನ್ನಣೆ ಕೊಡುವ

ಶಕ್ತಿ ನನಗಿರಲಿಲ್ಲ ,

ಸಾತ್ವಿಕನೆಂಬ ನಟನೆ ಮಾಡುತ್ತಿಲ್ಲ ,

ವಾಸ್ತವದ ಸತ್ಯ ನಿನಗೆ ತಿಳಿಸದೇ

ನನಗೆ ಬೇರೆ ದಾರಿ ಕಾಣಲೇ ಇಲ್ಲ ,

ಕ್ಷಮೆ ಯಾಚಿಸುವ ಪರಿಯು ನನಗೆ

ತಿಳಿಯದೆ ಹೋಯಿತಲ್ಲ ,

ಒಡೆದು ಹೋದ ಕನ್ನಡಿಯ

ಮತ್ತೆ ಜೋಡಿಸಲು ಸಾಧ್ಯವಿಲ್ಲ ,

ನನಗಿಂತ ನೀ ಎನ್ನ ಬಲ್ಲೆಯಲ್ಲ ,

ಮೌನದಿ ನಾ ನಿನ್ನನೂ ಅರಿತಿದ್ದೆನಲ್ಲ ,

ನೀ ಆಡಿಸಿದ ಹಾಗೆ ನಾ ಕುಣಿಯಲಿಲ್ಲವೇ,

ಪರರಂತೆ ಪಿಜ್ಜಾ - ಬರ್ಗರ್ ತಿನ್ನಿಸುವ

ಹವ್ಯಾಸ ನನ್ನದಲ್ಲ ,

ನಿಷ್ಠೆಯಿಂದ ನಿನ್ನ ನಂಬಿದ್ದೆನಲ್ಲ ,

ನನ್ನ ಪ್ರೀತಿಯ ಸ್ನೇಹದ ಪರಿಯ

ನೀ ಅರಿಯದೆ ನನ್ನ ಮರೆತುಬಿಟ್ಟೆಯಲ್ಲ ,

ನಾನಿತ್ತ ಮಮತೆ ನಿನಗೆ ಕಾಣದೆ ಹೋಯಿತಲ್ಲ ,ಚಿಂತಿಸಬೇಡ ಗೆಳತಿ ,

ನೀನು ನನ್ನಂತೆಯೇ ಸಹೃದಯಿಯಲ್ಲವೇ?

ಅದು ಬಂದದ್ದು ನಿನ್ನಿಂದಲ್ಲವೇ?

ನೀ ನನ್ನ ಜೀವದ ಗೆಳತಿ , ಪ್ರೀತಿಯ ಗೆಳತಿ

ತಾಯಿಯ ಮಮತೆ ತೋರುವ ಭಾಗ್ಯವ ಕೊಟ್ಟೆ ,

ಮಾತೆಯ ನೋವನೇನೆಂಬುದ ತಿಳಿಸಿಕೊಟ್ಟೆ,

ತಂದೆಯ ಹೊಣೆಯ ಬುದ್ದಿಗೆ ಜ್ನಾಪಿಸಿಕೊಟ್ಟೆ,

ನನ್ನ ನಾ ಅರಿಯುವಂತೆ ಮಾಡಿಬಿಟ್ಟೆ ,

ನನ್ನ ಕಣ್ಣಿಗೆ ಹತ್ತಿದ್ದ ಪೊರೆಯ ತೆಗೆದು ಆಶಾವಾದಿ

ಎಂದು ಬೀಘುವ ಮನೋಲ್ಲಾಸವ

ನೀ ತರಿಸಿಬಿಟ್ಟೆ !

ಮತ್ತೆ ಬಾ ಗೆಳತಿ ನನ್ನ ಸ್ನೇಹದ-ಕಡಲನುಳಿಸಲು...........

-@(-ಗಣಿ -)@-

ಓ ಪ್ರೀತಿಯೇ ನಿನಗೆ ನನ್ನ ಕೋಟಿ- ಕೋಟಿ ನಮನ
***********************************************************************************************

ಸ್ನೇಹನಾ?=ಪ್ರೇಮನಾ? >ದ್ವಂದದಲಿ < ಬರೀ ನೋವೆನಾ?

***********************************************************************************************

ಕಾಣದ ಪ್ರೀತಿಯ ನಾ ಹುಡುಕ ಹೊರಟಿದ್ದೆ ,

ವಿಧಿಯ ಮಾಯೆಯೋ ನೀ ನನಗೆ ದೊರಕಿದ್ದೆ,

ಕಲಿಗಾಲದ ಮೇಘ-ಸಂದೇಶವ ಮೊಬೈಲ್ನಲ್ಲಿ ನಾ ಕಳುಹುಸಿದ್ದೆ,

ನಿನ್ನ ಪ್ರತ್ಯುತ್ತರ ಕಂಡು ಮನ ಕುಣಿದು ನನ್ನ ಬಯೋಡೇಟಾ ಬಿಚ್ಚಿಟ್ಟಿದ್ದೆ ,

ನಿನ್ನ ಸ್ನೇಹಕಾಗಿ ಹಂಬಲದಿ ನಿನ್ನ ಮನ್ನಣೆಗೆಂದು ಕಾದು ಕುಳಿತಿದ್ದೆ ,

ನೀನಿತ್ತ ಹಸಿರು ನಿಶಾನೆಯಿಂದ ಹರ್ಷೋದ್ಗಾರದಿ ಕುಣಿದು ನಲಿದಿದ್ದೆ ,

ಯಾರೇ ನೀ ಚೆಲುವೆ ಚಿತ್ರದ ಪರಿಯ ನೆನಪು ಮಾಡಿದ್ದೆ ,

ನನ್ನ ಪ್ರೀತಿಯ ಮಾತುಗಳಿಂದ ನಿನ್ನ ಆಕರ್ಷಿಸಿದ್ದೆ,

ಸ್ನೇಹದ ಸೆಲೆಯಲ್ಲಿ ನಿನ್ನ ನಾ ಬಂಧಿಸಿದ್ದೆ ,

ಸ್ನೇಹಮಯ ಪ್ರೀತಿಯ ಕಂಡು ನೀ ಮಾರುಹೋಗಿದ್ದೆ ,

ಒಮ್ಮೊಮ್ಮೆ ನೀ ಕೋಪಗೊಂಡಾಗ ತಾಯಂತೆ ನಿನ್ನ ಲಾಲಿಸಿದ್ದೆ , ಪಾಲಿಸಿದ್ದೆ ,

ಮತ್ಯಾವ  ಮಾಯಯೋ  ಏನೋ ನಾನಿನ್ನ ಪ್ರೇಮಿಸಲು ಶುರು ಮಾಡಿದ್ದೆ ,

ಸ್ನೇಹವೋ -ಪ್ರೇಮವೋ ನಾನರಿಯದೇ ನಿನ್ನ ಗುಂಗಲ್ಲಿ ಕಳೆದು ಹೋಗಿದ್ದೆ ,

ಓದುವ ಹವ್ಯಾಸ ನಾ ಬದಿಗಿತ್ತು ಉದಾಸೀನ ಮಾಡಿಬಿಟ್ಟಿದ್ದೆ ,

ನಿನ್ನ ಒಂದು ಸಂದೇಶದ ಬರುವಿಕೆಗೆ ಹತ್ತು ಸಂದೇಶವ ಕಳುಹಿಸುತಿದ್ದೆ ,

ಅದೇನೂ ಕಾಣೆ ನನ್ನ ಸಂದೇಶದ ಸಾಗರದಲ್ಲಿ ನಿನ್ನ ತೇಲಿಸಿದ್ದೆ ,

ತಾಯಿ-ತಂದೆ ಮಮತೆ ತಿಳಿಯದೆ ನಾ ಸೋಮಾರಿಯಾಗಿದ್ದೆ ,

ಅರಿವಿಲ್ಲದೆ ನಾ ತೋಡಿರುವ ಗುಂಡಿಗೆ ನಾನೆ ಬೀಳಲು ಹೊರಟಿದ್ದೆ ,

ಹೃದಯದ ನೆಂಟು ಕಂಡು ನನ್ನ ಕಾಣಬೇಕೆಂಬ ತವಕ ನೀ ಹೆಚ್ಚಿಸಿಕೊಂಡಿದ್ದೆ ,

ಸ್ನೇಹವ ಕಳೆದುಕೊಳ್ಳುವೆನೆಂಬ ಭೀತಿಯಿಂದ ಪ್ರೇಮವ ಮರೆಯಲು ನಾ ಯತ್ನಿಸಿದ್ದೆ ,

ನಾ ಹಾಕಿಕೊಂಡ ಸ್ನೇಹದ ಬಂಧದಿ ತಾಯಿಯಗುಣವನೇನೆಂದು ಅರಿತುಕೊಂಡಿದ್ದೆ ,

ತಂದೆಯ ಮೂಕವೇದನೆಯ ನಾ ಹರಗಿಸಿಕೊಂಡಿದ್ದೆ ,

ಓದುವುದರಲ್ಲಿ ಮುಂದಿದ್ದ ನಾನು ಕಾಣಲಾರದಷ್ಟು ಹಿಂದೆ ಸರಿದಿದ್ದೆ,

ಜೀವನದ ಪ್ರಮುಖ ಪಾಠವ ನೀ ಕಲಿಸಿಕೊಟ್ಟಿದ್ದೆ ,

ನಾನು ನೊಂದರೂ ಪರರ ನೋಯಿಸದ ಸಹೃದಯಿಯಾಗಲು ನಾ ತೀರ್ಮಾನಿಸಿದ್ದೆ

ಮೌನಿಯಾಗದೆ ನನಗೆ ಬೇರೆ ದಾರಿಯಿಲ್ಲದಂತೆ ಮಾಡಿದ್ದೆ ,

ನಿನ್ನ ಸ್ನೇಹವಲ್ಲದೆ ಮತ್ತೇನು ಬೇಡವೆಂದು ನಿರ್ಧರಿಸಿದ್ದೆ ,

ಆ ದ್ವಂದದಿಂದ ಹೊರಬರುವಷ್ಟರಲಿ ನೀ ನನ್ನ ಸ್ನೇಹವ ಬಿಟ್ಟು ಮೂಕವಾಗಿಬಿಟ್ಟಿದ್ದೆ,

ಮತ್ತೆ ನೋವೆ ಎಂದು ನನ್ನ ಮನದಲ್ಲಿ ಮರುಕ ಹುಟ್ಟಿಸಿ ನೀ ದೂರವಾಗಿದ್ದೆ.


                                                    -ಗಣಿ


ಗಂಡು-ಹೆಣ್ಣ ನಡುವೆ ಸ್ನೇಹವು ಸದಾಕಾಲವಿರುವುದಿಲ್ಲವೇ , ನೀ ನೋಡುವ ಪರಿಯ ಒಮ್ಮೆ ತಿದ್ದಿ ಮತ್ತೆ ನನ್ನ ನೋಡುವ ಪ್ರಯತ್ನ ಮಾಡು, ಸ್ನೇಹವೇನೆಂದು ನಾ ಅರಿತೆ , ಮೋಹಕ್ಕೆ ಆಹ್ವಾನವಿತ್ತು ಪ್ರೇಮದ ಬಂಧನಕ್ಕೆ ಒಳಗಾದೆ ಈ ಹುಚ್ಚು ಪ್ರೀತಿಯೇ ಹೀಗೆ , ಸಿಕ್ಕಷ್ಟು ,, ಮತ್ತಷ್ಟು ,ಮಗದಷ್ಟು ಎನ್ನುವ ಜಾಯಮಾನವ ಹೊಂದಿರುವುದು . ಗೆಳೆತನ ಗಂಡು-ಗಂಡುವಿನ ನಡುವೆ ಪ್ರಭಲವಾಗಿರದೆ , ಗಂಡು-ಹೆಣ್ಣಿನಲ್ಲೂ ಅಪ್ರತಿಮವಾಗಿರುತ್ತದೆಯಂದು ನಿರೂಪಿಸುವ ಕಾರ್ಯದಲಿ ತೊಡಗುವಂತೆ ನನ್ನ ನಾ ಬದಲಿಸಿಕೊಂಡೆ.


ಬರೀ ಸುತ್ತಾಡಿಸಿ , ಹೊಗಳಿ , ನಿನ್ನ ವೈಯಾರಕೆ ಮಾರು ಹೋಗುವ ದಾಸ ನಾನಲ್ಲ , ನನಗೆ ಬೇಕಾದ ಸ್ನೇಹವು ಅದಲ್ಲ. ಕಣ್ಣಿಗೆ ಕಾಣುವ ಶಾರೀರವು ಬರೀ ಆಕರ್ಷಣೆಗಷ್ಟೇ ಹೊರತು ಮನಸ್ಸಿನ ಹೊಂದಾಣಿಕೆಗಲ್ಲ. ಹಾಗಾದರೆ ಅದು ಸ್ನೇಹವೋ- ಮೋಹವೋ  ನೀನೆ ನಿರ್ಧರಿಸು. ನಿಷ್ಕಲ್ಮಶ ಪ್ರೀತಿಯು ಈ ಜಗದಲ್ಲಿ ಇನ್ನು ಉಳಿದಿದೆಯಲ್ಲ ಅದ ನೀನೇಕೆ ತಿಳಿಯುತ್ತಿಲ್ಲ!


ಸ್ನೇಹನಾ?=ಪ್ರೇಮನಾ? >ದ್ವಂದದಲಿ < ಬರೀ ನೋವೆನಾ?
***********************************************************************************************