ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, May 5, 2012

ಹನಿಗವನದ ಮುನ್ನುಡಿ ಬರೆದವರು

***********************************************************************************************


ಕಾಲಹರಣಕೆಂದು ಬಂದ 
ಕೈಗಳಿಗೆ  ಹುಚ್ಚೆಬ್ಬಿಸಿ ,
ಕಾವೇರಿಸಿತ್ತು ಜಡವಾಗಿದ್ದ 
ಕಬ್ಬಿಣದ ಮನಕೆ,
ಕಾದಿದ್ದ ಆ ಕಬ್ಬಿಣಕೆ
ನಿಮ್ಮಯ ಅನುಭವದ 
ಕವನವೆಂಬ ಸುತ್ತಿಗೆಯನಿತ್ತು ,
ಕವಿಯೊಳಗೊಬ್ಬ ಕವಿಯಾಗಿ 
ಹನಿಗವನವ ಬರೆಯಲು
ಮುನ್ನುಡಿ ಇತ್ತವರೇ,
ಇದೋ ! ನಿಮಗೆ ವಿಶ್ವಾಸದ 
ಸ್ಪೂರ್ತಿಗವನಗಳ  ಮಾಲೆಯನು ತೊಡಿಸುತಿಹೆ!!!
ಹಾರೈಸಿ, ಮನಪೂರಕ ಹರಸಿ :):):)


ಮಾತಿಗಿಳಿದರೆ ಹರಟೆಮಲ್ಲನಂತೆ ಮಾತಿಗೆ ಮರು ಮಾತು ಸೇರಿಸುವೆನೆಂದು ನನ್ನ ಒಡನಾಡಿಗಳು ಹೇಳಿದ್ದರು , ಆದರೆ ಕವನಕೆ ಮರು ಕವನವ ತರಿಸುವಷ್ಟು ನಿಮ್ಮ ಕವಿತೆಗಳು ಸ್ಫೂರ್ತಿ ನೀಡಿವೆ ಎಂದರೆ ನನಗೆ ನಂಬಲಾಗುತ್ತಿಲ್ಲ :) ಹನಿಗವನವ ನಾ ಹಿಂದೆ ಕೇಳಿದ್ದೆ ಮೆಚ್ಚಿದ್ದೆ ,  ಮತ್ತೆ  ಈಗಿನ ದಿನಗಳಲಿ ಕೇಳುತಿರುವೆ   ಆದರೆ ಮೆಚ್ಚಿ ನಿಮಗೆ ಇತ್ತ ಅಭಿಲಾಷೆಯ  ಜೊತೆಗೆ  ನನಗೆ ಕಾಣದ ಹಾಗೆ ನನ್ನೊಳಗಿನ ಕವಿಯನೆಬ್ಬಿಸಿ ಹನಿಗವನಗಳ ಸರಮಾಲೆಯ ತರಿಸಿದ  ಎಲ್ಲ ಕನ್ನಡ ಬ್ಲಾಗಿನ ಸ್ಪೂರ್ತಿಯ ಕವಿತೆಗಳಿಗೆ ಮತ್ತು ಅದರ ಕರ್ತೃಗಳಿಗೆ ಈ  ಮುಂದೆ  ಬರೆವ  ಮತ್ತು ನಿಮ್ಮ ಕವಿತೆಗಳಿಗೆ ಬರೆದ  ನನ್ನ  ಎಲ್ಲ   ಆಶು ಕವನಗಳು  ಸಮರ್ಪಿಸುತ್ತಿದ್ದೇನೆ   .ಇಲ್ಲಿ  ಆ ಹನಿಗವನ  ಮತ್ತು ಆಶು ಕವನಗಳಿಗೆ - "ಸ್ಪೂರ್ತಿಗವನಗಳು" ಎಂದು ನಾಮಕರಣ ಮಾಡಿದ್ದೇನೆ :)
*********************************************************************************************** 

No comments:

Post a Comment