ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, May 10, 2012

ನನ್ನ ಅಪ್ಪಾಜಿ

***********************************************************************************************
ಅಪ್ಪಾಜಿ ನಿಮ್ಮ  ೫೦ನೇ  ಹುಟ್ಟು ಹಬ್ಬಕ್ಕೆ ನನ್ನ  ಪ್ರೀತಿಯ  ಉಡುಗೊರೆ :):)
ಶುಭಾಶಯ ನಿಮಗೆ 
ಜನುಮ ದಿನದ ಶುಭಾಶಯ
ಅರ್ಧ ಶತಕವ ಭಾರಿಸಿ
ನೋವು - ನಲಿವೆಂಬ 
ಅಳಲಿನ ಜೀವನವ  ಕಳೆದು 
ಮತ್ತೆ ಶತಕದ ಹಾದಿಯೂ 
ಹರಸಿ ಬರಲಿ ಎಂದಾಶಿಸುತ್ತ
ಬಣ್ಣಿಸುತಿಹೆನು ನಿಮ್ಮಯ 
ವ್ಯಕ್ತಿತ್ವದ ಗುಣಗಾನ !!ಹುಟ್ಟು ಶ್ರಮ ಜೀವಿ ನಮ್ಮ ಅಪ್ಪಾಜಿ 
ಪರರ ಸಹಾಯ ಬಯಸದ ಸ್ವಾಭಿಮಾನಿ 
ಹೆಚ್ಚು ಓದಿ ತಿಳಿದವರಲ್ಲ , ಆದರೆ 
ಬದುಕು ಕಲಿಸಿದ ಪಾಠವ ತಿಳಿಯದೆ ಬಿಟ್ಟವರಲ್ಲ ,
ಹುಟ್ಟು ರೈತನಾಗಿ , ತಂದೆಯಿತ್ತ ಭೂತಾಯಿಯ 
ಮಗನಾಗಿ , ಸತಿಗೆ ತಕ್ಕ ಪತಿಯಾಗಿ 
ಸಾಗಿತ್ತು ಬದುಕು ನಿರಂತರವಾಗಿ ,
ಅಲ್ಪ ವಿದ್ಯೆಗರಸಿಬಂತು ಪೋಲಿಸ್ ಪೇದೆಯ ಹುದ್ದೆ ,
ಶಿಸ್ತಿನ ಸಿಪಾಯಿಯಂತೆ ಮನ ತುಂಬ ಹರುಷ ತುಂಬಿದ್ದೆ ,
ಮಕ್ಕಳಿಗೆ ತಕ್ಕ ತಂದೆಯಾಗಿ ,
ಪರರಿಗೆ ಹಿತ ಬಯಸುವ ಸ್ನೇಹಿತನಾಗಿ ,
ಸಂಸಾರವೆಂಬ ರಥವನೋಡಿಸುವ 
ಸಾರಥಿಯಾಗಿ ಮೆರದಿದ್ದ ಛಲಗಾರ .
ಕಿಸೆಗೆ ಸಿಕ್ಕ ಹಣವ ಅನ್ಯಥಾ ವ್ಯರ್ಥ 
ಮಾಡದ ಸದ್ಗುಣ-ಸಂಪನ್ನ ,
ಕೇಳಿದನೆಲ್ಲ ಕಷ್ಟವಾದರೂ  ವರದಂತೆ ನೀಡುವ ದೇವ,
ತಂಬಾಕು- ಸಾರಾಯಿಗಳ ಸಹವಾಸವಿಲ್ಲದ 
ಸನ್ನಡತೆಯ ಸಿಪಾಯಿ ,
ಪರರಿಂದ ಅಪೇಕ್ಷಿಸದೆ ಕೈ ನೀಡುವ ನಿಸ್ವಾರ್ಥಿ ,
ಒಮ್ಮೊಮ್ಮೆ ಕೆರಳಿದರೆ ಉಗ್ರನರಸಿಂಹನಂತೆ ,
ನಕ್ಕು - ನಗಿಸುವಾಗ ಮುಗ್ದ ಮಗುವಿನಂತೆ ,
ಮನದೊಳಗೆ ಕೆಂಡವ ಹೊತ್ತಿದ್ದರೂ 
ಹೊರಗೆ ಹೊಗೆಯೂ ಸುಳಿಯದಂತೆ 
ಹೊಸಕು-ಹಾಕುವ ನಿಸ್ಸೀಮ,
ಮಕ್ಕಳಿಗಾಗಿ ಎಲ್ಲ, ತನಗಾಗಿ ಏನೂ ಇಲ್ಲ ,
ತಪ್ಪು -ತಿದ್ದಲು ಮಕ್ಕಳ ದಂಡಿಸಿ ಹೋದರೆ 
ಬಡಿದನೆಂದು ತಾನೇ ಅಳುವ 
ಹೆಣ್ಣು ಮನಸಿನ ಭಾವ ಜೀವಿ ,
ಬಡವರೆಂಬ ಭಾವತರಿಸದೇ , ಶ್ರೀಮಂತರಾಗುವ 
ಮದವ ಬೆಳಸದೆ , ಇದ್ದ ಕೈ ಬರಿ ಮಾಡಿಕೊಳ್ಳದೆ ,
ಕೊಡುವವನು ಕೊಡುತಾನೆ , 
ದುಡಿದು ತಿನ್ನುವುದು ಸರಿತಾನೆ ,
ಪರರ ನೋಯಿಸದ ಸಹೃದಯಿಯಾಗು 
ಗುರು ಹಿರಿಯರಲ್ಲಿ ವಿನಯನಾಗು 
ಅನ್ಯರು ಬೊಟ್ಟು ಮಾಡಿ ತೋರಿಸುವ 
ಕೆಟ್ಟ ಹುಳು ನೀನಾಗದಿರು ಎಂದು ನಿಮ್ಮದೇ ಧಾಟಿಯಲಿ 
ಹೇಳುವ ಅಪ್ಪಾಜಿ ಇದೋ ನಿಮ್ಮ ಪಾದಪದ್ಮಂಗಳಕೆ ನನ್ನ 
ಭಕ್ತಿಪೂರ್ವಕ ನಮನಗಳು !!!!

-@(-ಗಣಿ -)@-
---------------------------------------------------------------------------------------------------------------
        ನಾವೆಲ್ಲರೂ ಯಾವುದಾದರು ಕಾರಣಕ್ಕಾಗಿ ಅಪ್ಪ - ಅಮ್ಮನನ್ನು ದೂಷಿಸುವುದು ಸರ್ವೇ -ಸಾಮಾನ್ಯ , ಅದರಲ್ಲೂ ಅಪ್ಪನನ್ನು ಅಪರಾಧಿಯನ್ನಾಗಿ ಮಾಡಿ ನೀವು ನನಗೆ ಅದು ಕೊಡಿಸಲಿಲ್ಲ -ಇದು ಕೊಡಿಸಲಿಲ್ಲ , ನೀವು ಹಾಗೆ ಮಾಡಬಹುದಿತ್ತು -ಹೀಗೆ ಮಾಡಬಹುದಿತ್ತು , ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ . ಎಂದು ಜರಿಯುವುದು ಕಟು- ಸತ್ಯ .ಅದು ನಮ್ಮ -ನಿಮ್ಮ ತಪ್ಪಲ್ಲ ಬಿಡಿ , ಬಾಹ್ಯ - ಲೋಕದ ವ್ಯಾಮೋಹಕ್ಕೆ ಸಿಕ್ಕು ಈ ರೀತಿ ಅಪ್ಪ- ಅಮ್ಮಂದಿರೊಂದಿಗೆ ಕಸಿ -ವಿಸಿ , ಮನಸ್ತಾಪ ಮಾಡಿಕೊಳ್ಳುತ್ತಲೇ ಇರುತ್ತೇವೆ . 
        ಆದರೆ ನಾವೆಷ್ಟೇ ತಪ್ಪು ಮಾಡಿದರು ಅದನ್ನು ಕ್ಷಮಿಸಿ , ತಿದ್ದು -ಬುದ್ದಿ ಹೇಳುವ ಅಧಿಕಾರ ಅಪ್ಪಂದಿರಗಲ್ಲದೆ ಮತ್ಯಾರಿಗಿದೆ ನೀವೇ ಹೇಳಿ . ತಪ್ಪನ್ನು ತಪ್ಪೆಂದು ಹೇಳದೆ , ಮಗ/ಮಗಳಲ್ಲಿ ಸದ್ಗುಣವ ಬೆಳೆಸದಿರೆ ಅಪ್ಪನ ಸ್ಥಾನಕ್ಕೆ ಬೆಲೆಯಲ್ಲಿ ?
ಬುದ್ದಿ ಬಲಿಯುವತನಕ ಕೊಂಕು ಮಾತನಾಡಿ ಈ ಮಾಯಲೋಕದಿಂದ  ತಿರಸ್ಕೃತಗೊಂಡಾಗ  ಎದೆ ಬಿಚ್ಚಿ ತಬ್ಬಿಕೊಂಡು ಬೆಂಬಲಿಸುವರೇ ಅಪ್ಪ , ತಂದೆಯ ಮಾತುಗಳು ಕಾರವಾದರೂ ಅದರೊಳಗಿನ ಸತ್ವವನ್ನು ತಿಳಿಯಲು ಯತ್ನಿಸುತ್ತಾ ಹೋದರೆ ನೀವು ಕಲಿತ ವಿದ್ಯೆಗೆ ಮತ್ತು ಕಲಿಸಲು ಶ್ರಮಿಸಿದ ತಂದೆಗೆ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ . ನಾವೆಷ್ಟೇ ಬೆಳೆದರು ಮಕ್ಕಳಂತೆ ಸಾಕಿ - ಸಲಹಿದ ಹೆತ್ತೆವರನ್ನು ; ನಾವು ಬೆಳದಂತೆ ಅವರನ್ನು ಮಕ್ಕಳ ಭಾವನೆಯಿಂದ ನೋಡಿದರೆ ಮಾತ್ರ ಸಂಸಾರದ ಸಾರ ಅಳಿಯದೆ ಉಳಿಯುವುದು :):):)
***********************************************************************************************

No comments:

Post a Comment