ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, May 5, 2012

ಕಬ್ಬಿಗನ ಅಂತರಾಳ

***********************************************************************************************

ಬರೆಯುವ ಕೈಗಳಿರುವಾಗ,
ಬರೆಸಲು  ಮಾಸದ ನೆನಪಿರುವಾಗ,
ಬರಹಗಳ ಓದುವ ಮನಸುಗಳು  ಇಲ್ಲದಿರೆ   ,
ಬರೆದು ಎನ್ನ ನೋವೇಕೆ ಹೆಚ್ಚಿಸಿಕೊಳ್ಳಲಿ?
ಇಲ್ಲ!  ಇಲ್ಲ !!ನಾ ಬರೆಯ ಬೇಕೆಂದುಕೊಂಡೆ 
ಏಕಾಂತದಲ್ಲಿರುವಾಗ  , ನನಗೆ ನಾ ಬೆಂಬಲಿಸದೇ 
ಪರರ ಬೆಂಬಲಿಸಲೆಂಬುದು , ಎಷ್ಟು ಸರಿ?
ಪರರೂ ನನ್ನಂತೆಯೇ ಅಲ್ಲವೇ !
ಅವರೂ ಮನುಜರಲ್ಲವೆ !
ಅವರಿಗೂ ನೋವಿದೆಯಲ್ಲವೇ !!
ಅವರ ನೋವ ಮರೆಸುವ ಕವಿತೆ ನಾ ಬರೆವೆ ,
ನನ್ನ ನೋವನೂ  ಅದರಲಿ ನಾ ಮರೆವೆ 
ಕವಿಯೊಳಗೊಬ್ಬ ಕವಿ ನಾನಾಗುವೆ ,
ಪರರ ಕವಿತೆಯಲ್ಲಿ ನನ್ನ ಅನುಭವವ ಕಾಣುವೆ, 
ಅವರ ನೋವಿನ ಸೆಳೆಯ ಬಿಡಿಸಿ ಆಳದಲಿ ಮಿಂದು 
ನನ್ನ ನೋವ ತೆಗೆಯುವೆ !
ಅವರು ಕಾಣ ಬಯಸುವ  ನಗುಮುಖವ ತೋರಿಸುವ  
ಕನ್ನಡಿಯಾಗುವೆ !! ನಾ ನಕ್ಕು ಪರರ ನಗಿಸುವೆ ,
ಓದುಗನಾಗಿ ಅವರ ಕವಿತೆಗೆ ಮೆಚ್ಚುಗೆಯ ತಿಳಿಸುವೆ !
ನಾ ಬಯಸುವ ಪರಿಯಂತೆ ಅವರ ಪರಿಯು ಇರುವುದಲ್ಲವೇ ?
ಏಕೆಂದರೆ ,ಅವರು ನನ್ನ ಹಾಗೆ ಮನುಜರಲ್ಲವೆ ?
ಏ , ಹುಚ್ಚು ಮನವೇ , ಬದುಕೇ ಕನ್ನಡಿಯಂತಲ್ಲವೇ !
ನೀ ನಕ್ಕರೆ, ಅದು ನಗುವುದು , ನೀ ಅತ್ತರೆ ಅದಳುವುದು 
ಕೊಟ್ಟರೆ ,ಅದು ನೀ ಕೇಳದಿರೂ ನೀಡುವ ದಾನಿಯಾಗುವುದು.
ಹಾಗಾದರೆ, ಇದು ಕೊಟ್ಟು ತೆಗೆದು ಕೊಳ್ಳುವ ಮಾರುಕಟ್ಟೆಯೇ 
ಹೌದು!!! ಬೇಡುವ ಕೈ ಇಲ್ಲದಿರೆ ಕೊಡುವ ಕೈಗೆಲ್ಲಿ ಬೆಲೆ ಇದೆ ?
ಹುಹ್ , ಬದುಕೆಂಬ ಮಾರಾಟಕ್ಕೆ , ಮಾರಾಟದ ವಸ್ತುವಾಗಿಸಿ 
ಮಾರಾಟಗಾರರ ನಡುವೆ ಬೆಂದು ಬಸವಳಿವ ಪರಿಯ ಕಂಡು 
ಅಣಕ ಮಾಡುತ್ತಿರುವೆಯಲ್ಲೋ - ಶಂಭುಲಿಂಗ .

-@(-ಗಣಿ -)@-
***********************************************************************************************

No comments:

Post a Comment