Search This Blog
Wednesday, May 16, 2012
ಬೆಪ್ಪತಕಡಿ
***********************************************************************************************
ನಿನ್ನ ಹೊಂಡವ ನೀನಲ್ಲದೆ
ಮತ್ಯಾರು ತೆಗೆಯಲಿಲ್ಲ
ಅದರಲ್ಲಿ ಬಿದ್ದೆದ್ದು ಕೇಳುವ
ಈ ಹುಚ್ಚು-
ಮನವ ಕಂಡು
ನಗಬೇಕೋ -ಅಳಬೇಕೋ
ತಿಳಿಯುತ್ತಿಲ್ಲ -ಶಂಭುಲಿಂಗ
-ಗಣಿ
***********************************************************************************************
ಆಹ್ವಾನದ ಕವಿತೆಗೊಂದು ಪ್ರತ್ಯುತ್ತರ
***********************************************************************************************
ಬರುತಿಹೆನು ಗೆಳೆಯ
ನಿನ್ನಯ ಆಹ್ವಾನದ ಕೂಟಕೆ ,
ಚಪ್ಪರಿಸಿ ತಿಂದು ತೇಗಲು
ಕಾಯುತಿಹುದು ನನ್ನ ಹೊಟ್ಟೆ
ನೀ ಮಾಡಿಟ್ಟ ಊಟಕೆ ,
ಹಸಿರೊತ್ತ ಭೂ ತಾಯಿಯ
ಹಾಸಿಗೆ ಸಾಕು ,
ತಂಪು - ಇಂಪಾಗಿ ಹಾಡುವ
ಸವಿಯಾದ ಗಾಳಿ ಬೇಕು .
ಎಲ್ಲವನು ಉಣಬಡಿಸುವ
ನೀ ಇತ್ತ ಈ ಪ್ರೀತಿಯ
ಕವಿತೆ ಸಾಕು !

Tuesday, May 15, 2012
ಮೂಕವೇದನೆ
ವಿಸ್ಮಯ ಜಗದಿ ಅಳಲಾಡುವ
ಬರಡು ದೇಹವೇ,
ನಿನ್ನೊಳಗಿನ ಆತ್ಮಕೆ
ಇಷ್ಟೊಂದು ತಳಮಳವೇಕೆ ?
ಬೆಂಬಿಡದ ಬೇತಾಳನ
ಹಾಗೆ ಕಾಡುವೆ ಏಕೆ ?
ಈ ಮೂಕ ವೇದನೆ
ನಾ ತಾಳಲಾರೆ
ತಾಳಲಾರೆ !!
-@(-ಗಣಿ -)@-
***********************************************************************************************
***********************************************************************************************
Monday, May 14, 2012
ಪ್ರೀತಿಸುವ ಹೃದಯಕೆ
***********************************************************************************************
ಪ್ರೇಯಸಿಯ ಒಲಿಸಲು
ಪ್ರಾಣವ ಬಿಡದೆ
ನಿನ್ನ ಪ್ರೀತಿಯು
ಅಚಲವಾದರೆ
ಅದಕಿಲ್ಲ ಸಾವು ,
ಪ್ರಜ್ಞೆ ತಪ್ಪಿದರೆ
ನೀ ಸಹಿಸಲಾರೆ
ಅದಕಾಗುವ ನೋವು ,
ಭಕ್ತಿಯನೊತ್ತ ಪ್ರೇಮ
ಪೂಜಾರಿಯಾಗು ಮನವೇ
ಭಕ್ತಿಯ ಮೆಚ್ಚಿ ಒಲಿಯದೆ
ಆ ಪ್ರೇಮದೇವತೆ ಇರಳು!!
-ಗಣಿ
***********************************************************************************************
***********************************************************************************************
ಓ ಮನಸೇ

ಓ ಮನಸೇ,
ನೀ ಕಲ್ಲೆಂದು ತಿಳಿದಿದ್ದೆ
ಆದರದು ಕರಗಿ ನೀರಾಯ್ತು
ನಿನ್ನ ಮರೆಯಬೇಕೆಂದಿದ್ದೆ
ಆದರೆನ್ನ ಮನದಲಿ
ಕವನ ಶುರವಾಯ್ತು
ನಿನ್ನ ಅಂದು ನಾ ಜರಿದಿದ್ದೆ,
ಆದರಿಂದು ,
ನನ್ನ ಏಕಾಂತವ ಮರೆಸಲು
ನೀ ಸವಿ ನೆನಪುಗಳ ಉಳಿಸಿದ್ದೆ !

Thursday, May 10, 2012
ನನ್ನ ಅಪ್ಪಾಜಿ
***********************************************************************************************
-@(-ಗಣಿ -)@-
ಅಪ್ಪಾಜಿ ನಿಮ್ಮ ೫೦ನೇ ಹುಟ್ಟು ಹಬ್ಬಕ್ಕೆ ನನ್ನ ಪ್ರೀತಿಯ ಉಡುಗೊರೆ :):)
ಶುಭಾಶಯ ನಿಮಗೆ
ಶುಭಾಶಯ ನಿಮಗೆ
ಜನುಮ ದಿನದ ಶುಭಾಶಯ
ಅರ್ಧ ಶತಕವ ಭಾರಿಸಿ
ನೋವು - ನಲಿವೆಂಬ
ಅಳಲಿನ ಜೀವನವ ಕಳೆದು
ಮತ್ತೆ ಶತಕದ ಹಾದಿಯೂ
ಹರಸಿ ಬರಲಿ ಎಂದಾಶಿಸುತ್ತ
ಬಣ್ಣಿಸುತಿಹೆನು ನಿಮ್ಮಯ
ಹುಟ್ಟು ಶ್ರಮ ಜೀವಿ ನಮ್ಮ ಅಪ್ಪಾಜಿ
ಪರರ ಸಹಾಯ ಬಯಸದ ಸ್ವಾಭಿಮಾನಿ
ಹೆಚ್ಚು ಓದಿ ತಿಳಿದವರಲ್ಲ , ಆದರೆ
ಬದುಕು ಕಲಿಸಿದ ಪಾಠವ ತಿಳಿಯದೆ ಬಿಟ್ಟವರಲ್ಲ ,
ಹುಟ್ಟು ರೈತನಾಗಿ , ತಂದೆಯಿತ್ತ ಭೂತಾಯಿಯ
ಮಗನಾಗಿ , ಸತಿಗೆ ತಕ್ಕ ಪತಿಯಾಗಿ
ಸಾಗಿತ್ತು ಬದುಕು ನಿರಂತರವಾಗಿ ,
ಅಲ್ಪ ವಿದ್ಯೆಗರಸಿಬಂತು ಪೋಲಿಸ್ ಪೇದೆಯ ಹುದ್ದೆ ,
ಶಿಸ್ತಿನ ಸಿಪಾಯಿಯಂತೆ ಮನ ತುಂಬ ಹರುಷ ತುಂಬಿದ್ದೆ ,
ಮಕ್ಕಳಿಗೆ ತಕ್ಕ ತಂದೆಯಾಗಿ ,
ಪರರಿಗೆ ಹಿತ ಬಯಸುವ ಸ್ನೇಹಿತನಾಗಿ ,
ಸಂಸಾರವೆಂಬ ರಥವನೋಡಿಸುವ
ಸಾರಥಿಯಾಗಿ ಮೆರದಿದ್ದ ಛಲಗಾರ .
ಕಿಸೆಗೆ ಸಿಕ್ಕ ಹಣವ ಅನ್ಯಥಾ ವ್ಯರ್ಥ
ಮಾಡದ ಸದ್ಗುಣ-ಸಂಪನ್ನ ,
ಕೇಳಿದನೆಲ್ಲ ಕಷ್ಟವಾದರೂ ವರದಂತೆ ನೀಡುವ ದೇವ,
ತಂಬಾಕು- ಸಾರಾಯಿಗಳ ಸಹವಾಸವಿಲ್ಲದ
ಸನ್ನಡತೆಯ ಸಿಪಾಯಿ ,
ಪರರಿಂದ ಅಪೇಕ್ಷಿಸದೆ ಕೈ ನೀಡುವ ನಿಸ್ವಾರ್ಥಿ ,
ಒಮ್ಮೊಮ್ಮೆ ಕೆರಳಿದರೆ ಉಗ್ರನರಸಿಂಹನಂತೆ ,
ನಕ್ಕು - ನಗಿಸುವಾಗ ಮುಗ್ದ ಮಗುವಿನಂತೆ ,
ಮನದೊಳಗೆ ಕೆಂಡವ ಹೊತ್ತಿದ್ದರೂ
ಹೊರಗೆ ಹೊಗೆಯೂ ಸುಳಿಯದಂತೆ
ಹೊಸಕು-ಹಾಕುವ ನಿಸ್ಸೀಮ,
ಮಕ್ಕಳಿಗಾಗಿ ಎಲ್ಲ, ತನಗಾಗಿ ಏನೂ ಇಲ್ಲ ,
ತಪ್ಪು -ತಿದ್ದಲು ಮಕ್ಕಳ ದಂಡಿಸಿ ಹೋದರೆ
ಬಡಿದನೆಂದು ತಾನೇ ಅಳುವ
ಹೆಣ್ಣು ಮನಸಿನ ಭಾವ ಜೀವಿ ,
ಬಡವರೆಂಬ ಭಾವತರಿಸದೇ , ಶ್ರೀಮಂತರಾಗುವ
ಮದವ ಬೆಳಸದೆ , ಇದ್ದ ಕೈ ಬರಿ ಮಾಡಿಕೊಳ್ಳದೆ ,
ಕೊಡುವವನು ಕೊಡುತಾನೆ ,
ದುಡಿದು ತಿನ್ನುವುದು ಸರಿತಾನೆ ,
ಪರರ ನೋಯಿಸದ ಸಹೃದಯಿಯಾಗು
ಗುರು ಹಿರಿಯರಲ್ಲಿ ವಿನಯನಾಗು
ಅನ್ಯರು ಬೊಟ್ಟು ಮಾಡಿ ತೋರಿಸುವ
ಕೆಟ್ಟ ಹುಳು ನೀನಾಗದಿರು ಎಂದು ನಿಮ್ಮದೇ ಧಾಟಿಯಲಿ
ಹೇಳುವ ಅಪ್ಪಾಜಿ ಇದೋ ನಿಮ್ಮ ಪಾದಪದ್ಮಂಗಳಕೆ ನನ್ನ
ಭಕ್ತಿಪೂರ್ವಕ ನಮನಗಳು !!!!
-@(-ಗಣಿ -)@-
---------------------------------------------------------------------------------------------------------------
ನಾವೆಲ್ಲರೂ ಯಾವುದಾದರು ಕಾರಣಕ್ಕಾಗಿ ಅಪ್ಪ - ಅಮ್ಮನನ್ನು ದೂಷಿಸುವುದು ಸರ್ವೇ -ಸಾಮಾನ್ಯ , ಅದರಲ್ಲೂ ಅಪ್ಪನನ್ನು ಅಪರಾಧಿಯನ್ನಾಗಿ ಮಾಡಿ ನೀವು ನನಗೆ ಅದು ಕೊಡಿಸಲಿಲ್ಲ -ಇದು ಕೊಡಿಸಲಿಲ್ಲ , ನೀವು ಹಾಗೆ ಮಾಡಬಹುದಿತ್ತು -ಹೀಗೆ ಮಾಡಬಹುದಿತ್ತು , ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ . ಎಂದು ಜರಿಯುವುದು ಕಟು- ಸತ್ಯ .ಅದು ನಮ್ಮ -ನಿಮ್ಮ ತಪ್ಪಲ್ಲ ಬಿಡಿ , ಬಾಹ್ಯ - ಲೋಕದ ವ್ಯಾಮೋಹಕ್ಕೆ ಸಿಕ್ಕು ಈ ರೀತಿ ಅಪ್ಪ- ಅಮ್ಮಂದಿರೊಂದಿಗೆ ಕಸಿ -ವಿಸಿ , ಮನಸ್ತಾಪ ಮಾಡಿಕೊಳ್ಳುತ್ತಲೇ ಇರುತ್ತೇವೆ .
ಆದರೆ ನಾವೆಷ್ಟೇ ತಪ್ಪು ಮಾಡಿದರು ಅದನ್ನು ಕ್ಷಮಿಸಿ , ತಿದ್ದು -ಬುದ್ದಿ ಹೇಳುವ ಅಧಿಕಾರ ಅಪ್ಪಂದಿರಗಲ್ಲದೆ ಮತ್ಯಾರಿಗಿದೆ ನೀವೇ ಹೇಳಿ . ತಪ್ಪನ್ನು ತಪ್ಪೆಂದು ಹೇಳದೆ , ಮಗ/ಮಗಳಲ್ಲಿ ಸದ್ಗುಣವ ಬೆಳೆಸದಿರೆ ಅಪ್ಪನ ಸ್ಥಾನಕ್ಕೆ ಬೆಲೆಯಲ್ಲಿ ?
ಬುದ್ದಿ ಬಲಿಯುವತನಕ ಕೊಂಕು ಮಾತನಾಡಿ ಈ ಮಾಯಲೋಕದಿಂದ ತಿರಸ್ಕೃತಗೊಂಡಾಗ ಎದೆ ಬಿಚ್ಚಿ ತಬ್ಬಿಕೊಂಡು ಬೆಂಬಲಿಸುವರೇ ಅಪ್ಪ , ತಂದೆಯ ಮಾತುಗಳು ಕಾರವಾದರೂ ಅದರೊಳಗಿನ ಸತ್ವವನ್ನು ತಿಳಿಯಲು ಯತ್ನಿಸುತ್ತಾ ಹೋದರೆ ನೀವು ಕಲಿತ ವಿದ್ಯೆಗೆ ಮತ್ತು ಕಲಿಸಲು ಶ್ರಮಿಸಿದ ತಂದೆಗೆ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ . ನಾವೆಷ್ಟೇ ಬೆಳೆದರು ಮಕ್ಕಳಂತೆ ಸಾಕಿ - ಸಲಹಿದ ಹೆತ್ತೆವರನ್ನು ; ನಾವು ಬೆಳದಂತೆ ಅವರನ್ನು ಮಕ್ಕಳ ಭಾವನೆಯಿಂದ ನೋಡಿದರೆ ಮಾತ್ರ ಸಂಸಾರದ ಸಾರ ಅಳಿಯದೆ ಉಳಿಯುವುದು :):):)
***********************************************************************************************
***********************************************************************************************
Tuesday, May 8, 2012
ಮೊದಲು ಮಾನವನಾಗು
***********************************************************************************************
ನಿನ್ನ ಮನದ
ಕಸವ ರಸವಾಗಿಸುವ
ಕಾರ್ಯದಲಿ ನೀ
ತೊಡಗು ,
ನಿನ್ನ ಭಕ್ತಿಯೆಂಬ
ಭಾವದಲಿ ನೀ
ಮುಳುಗು ,
ನಿನ್ನ ನೀ
ಅರಿಯಲು
ಮುಂದಾಗು,
ಮೊದಲು ಮಾನವನಾಗು !!
-@(-ಗಣಿ -)@-
-@(-ಗಣಿ -)@-
***********************************************************************************************
Saturday, May 5, 2012
ಕಲೆಯ ಭಕ್ತಿ
***********************************************************************************************
ನಾ ಚಿತ್ರಗಾರನಲ್ಲ,
ಆದರೂ ಚಿತ್ರ ಬರೆಯುವೆ !
ನಾ ಕವಿಯಲ್ಲ ,
ಆದರೂ ಕವನ ಬರೆಯುವೆ !
ಚಿತ್ರ ಬಿಡಿಸಿ ,ಅದಕೆ
ಕವನ ಪೋಣಿಸಿ ಹೇಳುವ
ಪರಿಯಂತೂ ನನಗೆ
ತಿಳಿದೇ ಇಲ್ಲ !! ಆದರೂ
ಆ ಪ್ರಯತ್ನವ ನಾ
ಮಾಡದೆ ಬಿಡೆನು!
-@(-ಗಣಿ -)@-
-@(-ಗಣಿ -)@-
***********************************************************************************************
ವಿಪರ್ಯಾಸ

ಮನದೊಳು ಏಳುವ
ಅಲೆಯ ರಭಸಕೆ
ತಡೆಯೊಡ್ಡುವ ನಾವಿಕ
ನೀನಾಗ ಬಯಸಿದರೆ,
ನಿನ್ನಿಂದಾದ ಅಲೆಯು,
ಅಪ್ಪಳಿಸದೇ ಮುದ್ದಿಸುವುದೇ !!
-@(-ಗಣಿ -)@-
***********************************************************************************************
ಪ್ರೀತಿಯ ಅಮಲು
***********************************************************************************************
ಒಂದು ಆತ್ಮದಲ್ಲಿ
ನೀ ಬಿತ್ತ ಪ್ರೀತಿಯ
ಬೀಜವ ನೋಡೋ ,
ಬೀಜ ಮೊಳೊಕೆಯೊಡೆದು
ಸಸಿಯಾಗಿ ಹೊರ ಬರುತಿರುವ
ಪರಿಯ ನೋಡೋ,
ಸಸಿಯಾಗಿ ಹೂವಿತ್ತು
ಬೇಡಿ ಅರ್ಧನಾರೀಶ್ವರ-
ನಾಗಬೇಕೆಂಬ ಬಯಕೆಯ
ಒಮ್ಮೆ ನೀ ನೋಡೋ -ಶಂಭುಲಿಂಗ

ಮೌನ ಬೇಡ ಮನವೆ
***********************************************************************************************
ಏಳುವ ಅಲೆಯ ರಭಸದ
ಒಡೆತಕೆ ಸಿಗದೇ ನಿಲ್ಲಲು
ಒಮ್ಮೆ ನೀ ಮಾತಾಡು ಮನವೆ !!
ಏಕಾಂತವು ಕಾಡುವ ಮುನ್ನ ,
ಬಾಳು ಗೋಳೆಂದು
ಕೂರುವ ಮುನ್ನ ,
ಹೀಗೆ ಕಲ್ಪನೆಯ ಬೆನ್ನಟ್ಟಿ
ಹೊರಡುವ ಮುನ್ನ ,
ಒಮ್ಮೆ ನೀ ಮಾತಾಡು ಮನವೆ!!

ಪ್ರೇಯಸಿಯ ಪ್ರೇಮ
***********************************************************************************************
ಒಲುಮೆ ಸಿರಿಯಾ ಉಂಡು
ಇನಿಯನಂತರಾಳದಲಿ
ಮಿಂದು
, ವಿರಹದ ಬೇಗೆಯಲಿ
ಬೆಂದು
, ಮೂಡುತಿಹುದು
ಮತ್ತೆ ಪ್ರೀತಿಯ - ಉನ್ಮಾದದ ,
ಸೆಲೆಯ ಬೆಂಕಿ ಚೆಂಡು ,
ಅದನು ಸ್ಪರ್ಶಿಸಿ ನಲಿವಾಸೆ ,
ಇನಿಯನ ಕಂಗಳಲ್ಲಿ
ಕಳೆದು ಹೋಗುವ ಆಸೆ ,
ಆಹಾ ! ಪ್ರಿಯೆ , ಈ ನಿನ್ನ ಪ್ರೇಮದ
ಪರಿಯ ಕಂಡು ,ನನಗೆ
ಅದ ಕೊಂಡಾಡುವ ಆಸೆ !!
-@(-ಗಣಿ -)@-
***********************************************************************************************
ತೆನ ವಿನ ತೃಣ ಮಪಿ ನ ಚಲತಿ
***********************************************************************************************
ನಾನು ನಾನೆಂಬ
ಅಂಧಕಾರದಲಿ
ಪರಿತಪಿಸದೆ,
ಪರಬ್ರಹ್ಮಾದಿ ಅಂಶದಿ
ಜನಿಸಿದ ನೀನು ,
ಅಣು - ಅಣುವಿನಲ್ಲು
ದೈವತ್ವವ ಕಾಣೋ-ಶಂಭುಲಿಂಗ
-ಗಣಿ
***********************************************************************************************
ಯಶಸ್ಸು

ಅದು ನಮ್ಮ ಕಪಿ
ಮುಷ್ಟಿಯಲ್ಲಿದ್ದರೆ
ಹೆಚ್ಚಾಗುವುದು
ನಮ್ಮಯ ವರ್ಚಸ್ಸು ,
ಇಲ್ಲವಾದರೆ ಮತ್ತೆ
ಮಾಡ ಬೇಕಾದೀತು ತಪಸ್ಸು!!
-@(-ಗಣಿ -)@-
***********************************************************************************************
ಕನಸು

ಅದು ನನಸಾದರೆ
ಆಹಾ !ಎಂತಹ
ಸೊಗಸು ,
ಆಹಾ !ಎಂತಹ
ಸೊಗಸು ,
ನನಸಾಗಾದೆ
ಹಾಗೆ ಉಳಿದರೆ
ಹಾಗೆ ಉಳಿದರೆ
ಜೀವನವಿಡೀ
ಬರಿ ಮುನಿಸು!
***********************************************************************************************
ಹನಿಗವನದ ಮುನ್ನುಡಿ ಬರೆದವರು
***********************************************************************************************
ಕಾಲಹರಣಕೆಂದು ಬಂದ
ಕೈಗಳಿಗೆ ಹುಚ್ಚೆಬ್ಬಿಸಿ ,
ಕಾವೇರಿಸಿತ್ತು ಜಡವಾಗಿದ್ದ
ಕಬ್ಬಿಣದ ಮನಕೆ,
ಕಾದಿದ್ದ ಆ ಕಬ್ಬಿಣಕೆ
ನಿಮ್ಮಯ ಅನುಭವದ
ಕವನವೆಂಬ ಸುತ್ತಿಗೆಯನಿತ್ತು ,
ಕವಿಯೊಳಗೊಬ್ಬ ಕವಿಯಾಗಿ
ಹನಿಗವನವ ಬರೆಯಲು
ಮುನ್ನುಡಿ ಇತ್ತವರೇ,
ಇದೋ ! ನಿಮಗೆ ವಿಶ್ವಾಸದ
ಸ್ಪೂರ್ತಿಗವನಗಳ ಮಾಲೆಯನು ತೊಡಿಸುತಿಹೆ!!!
ಹಾರೈಸಿ, ಮನಪೂರಕ ಹರಸಿ :):):)
ಕಾಲಹರಣಕೆಂದು ಬಂದ
ಕೈಗಳಿಗೆ ಹುಚ್ಚೆಬ್ಬಿಸಿ ,
ಕಾವೇರಿಸಿತ್ತು ಜಡವಾಗಿದ್ದ
ಕಬ್ಬಿಣದ ಮನಕೆ,
ಕಾದಿದ್ದ ಆ ಕಬ್ಬಿಣಕೆ
ನಿಮ್ಮಯ ಅನುಭವದ
ಕವನವೆಂಬ ಸುತ್ತಿಗೆಯನಿತ್ತು ,
ಕವಿಯೊಳಗೊಬ್ಬ ಕವಿಯಾಗಿ
ಹನಿಗವನವ ಬರೆಯಲು
ಮುನ್ನುಡಿ ಇತ್ತವರೇ,
ಇದೋ ! ನಿಮಗೆ ವಿಶ್ವಾಸದ
ಸ್ಪೂರ್ತಿಗವನಗಳ ಮಾಲೆಯನು ತೊಡಿಸುತಿಹೆ!!!
ಹಾರೈಸಿ, ಮನಪೂರಕ ಹರಸಿ :):):)
ಮಾತಿಗಿಳಿದರೆ ಹರಟೆಮಲ್ಲನಂತೆ ಮಾತಿಗೆ ಮರು ಮಾತು ಸೇರಿಸುವೆನೆಂದು ನನ್ನ ಒಡನಾಡಿಗಳು ಹೇಳಿದ್ದರು , ಆದರೆ ಕವನಕೆ ಮರು ಕವನವ ತರಿಸುವಷ್ಟು ನಿಮ್ಮ ಕವಿತೆಗಳು ಸ್ಫೂರ್ತಿ ನೀಡಿವೆ ಎಂದರೆ ನನಗೆ ನಂಬಲಾಗುತ್ತಿಲ್ಲ :) ಹನಿಗವನವ ನಾ ಹಿಂದೆ ಕೇಳಿದ್ದೆ ಮೆಚ್ಚಿದ್ದೆ , ಮತ್ತೆ
ಈಗಿನ ದಿನಗಳಲಿ ಕೇಳುತಿರುವೆ ಆದರೆ ಮೆಚ್ಚಿ ನಿಮಗೆ ಇತ್ತ ಅಭಿಲಾಷೆಯ ಜೊತೆಗೆ ನನಗೆ ಕಾಣದ ಹಾಗೆ ನನ್ನೊಳಗಿನ ಕವಿಯನೆಬ್ಬಿಸಿ ಹನಿಗವನಗಳ ಸರಮಾಲೆಯ ತರಿಸಿದ ಎಲ್ಲ ಕನ್ನಡ ಬ್ಲಾಗಿನ ಸ್ಪೂರ್ತಿಯ ಕವಿತೆಗಳಿಗೆ ಮತ್ತು ಅದರ ಕರ್ತೃಗಳಿಗೆ ಈ ಮುಂದೆ ಬರೆವ ಮತ್ತು ನಿಮ್ಮ ಕವಿತೆಗಳಿಗೆ ಬರೆದ ನನ್ನ ಎಲ್ಲ ಆಶು ಕವನಗಳು
ಸಮರ್ಪಿಸುತ್ತಿದ್ದೇನೆ .ಇಲ್ಲಿ ಆ ಹನಿಗವನ ಮತ್ತು ಆಶು ಕವನಗಳಿಗೆ - "ಸ್ಪೂರ್ತಿಗವನಗಳು" ಎಂದು ನಾಮಕರಣ ಮಾಡಿದ್ದೇನೆ :)
***********************************************************************************************
***********************************************************************************************
ಕಬ್ಬಿಗನ ಅಂತರಾಳ
***********************************************************************************************
ಬರೆಯುವ ಕೈಗಳಿರುವಾಗ,
ಬರೆಸಲು ಮಾಸದ ನೆನಪಿರುವಾಗ,
ಬರಹಗಳ ಓದುವ ಮನಸುಗಳು
ಇಲ್ಲದಿರೆ ,
ಬರೆದು ಎನ್ನ ನೋವೇಕೆ ಹೆಚ್ಚಿಸಿಕೊಳ್ಳಲಿ?
ಇಲ್ಲ! ಇಲ್ಲ !!ನಾ ಬರೆಯ ಬೇಕೆಂದುಕೊಂಡೆ
ಏಕಾಂತದಲ್ಲಿರುವಾಗ , ನನಗೆ ನಾ ಬೆಂಬಲಿಸದೇ
ಪರರ ಬೆಂಬಲಿಸಲೆಂಬುದು , ಎಷ್ಟು ಸರಿ?
ಪರರೂ ನನ್ನಂತೆಯೇ ಅಲ್ಲವೇ !
ಅವರೂ ಮನುಜರಲ್ಲವೆ !
ಅವರಿಗೂ ನೋವಿದೆಯಲ್ಲವೇ !!
ಅವರ ನೋವ ಮರೆಸುವ ಕವಿತೆ ನಾ ಬರೆವೆ ,
ನನ್ನ ನೋವನೂ ಅದರಲಿ ನಾ ಮರೆವೆ
ಕವಿಯೊಳಗೊಬ್ಬ ಕವಿ ನಾನಾಗುವೆ ,
ಪರರ ಕವಿತೆಯಲ್ಲಿ ನನ್ನ ಅನುಭವವ ಕಾಣುವೆ,
ಅವರ ನೋವಿನ ಸೆಳೆಯ ಬಿಡಿಸಿ ಆಳದಲಿ ಮಿಂದು
ನನ್ನ ನೋವ ತೆಗೆಯುವೆ !
ಅವರು ಕಾಣ ಬಯಸುವ ನಗುಮುಖವ ತೋರಿಸುವ
ಕನ್ನಡಿಯಾಗುವೆ !! ನಾ ನಕ್ಕು ಪರರ ನಗಿಸುವೆ ,
ಓದುಗನಾಗಿ ಅವರ ಕವಿತೆಗೆ ಮೆಚ್ಚುಗೆಯ ತಿಳಿಸುವೆ !
ನಾ ಬಯಸುವ ಪರಿಯಂತೆ ಅವರ ಪರಿಯು ಇರುವುದಲ್ಲವೇ ?
ಏಕೆಂದರೆ ,ಅವರು ನನ್ನ ಹಾಗೆ ಮನುಜರಲ್ಲವೆ ?
ಏ , ಹುಚ್ಚು ಮನವೇ , ಬದುಕೇ ಕನ್ನಡಿಯಂತಲ್ಲವೇ !
ನೀ ನಕ್ಕರೆ, ಅದು ನಗುವುದು , ನೀ ಅತ್ತರೆ ಅದಳುವುದು
ಕೊಟ್ಟರೆ ,ಅದು ನೀ ಕೇಳದಿರೂ ನೀಡುವ ದಾನಿಯಾಗುವುದು.
ಹಾಗಾದರೆ, ಇದು ಕೊಟ್ಟು ತೆಗೆದು ಕೊಳ್ಳುವ ಮಾರುಕಟ್ಟೆಯೇ
ಹೌದು!!! ಬೇಡುವ ಕೈ ಇಲ್ಲದಿರೆ ಕೊಡುವ ಕೈಗೆಲ್ಲಿ ಬೆಲೆ ಇದೆ ?
ಹುಹ್ , ಬದುಕೆಂಬ ಮಾರಾಟಕ್ಕೆ , ಮಾರಾಟದ ವಸ್ತುವಾಗಿಸಿ
ಮಾರಾಟಗಾರರ ನಡುವೆ ಬೆಂದು ಬಸವಳಿವ ಪರಿಯ ಕಂಡು
ಅಣಕ ಮಾಡುತ್ತಿರುವೆಯಲ್ಲೋ - ಶಂಭುಲಿಂಗ .
-@(-ಗಣಿ -)@-
***********************************************************************************************
Subscribe to:
Posts (Atom)