***********************************************************************************************
ನಾ ಕಂಡ ಲೂಸಿಯ!
________________
ನಾ ನೋಡಲು ಹೋಗಿದ್ದೆ ಲೂಸಿಯ
ಹೇಳಲಿರುವದರೊಳಗಿರುವ ವಿಷಯ!
ಅದಕಾಗಿ ಬರೆಯಲು ನಾ
ಹೊರಟಿರುವೆ ಒಂದು ಕವಿತೆಯ!
ಕನಸಿನ ಲೋಕಕೆ ಕರೆದೊಯ್ಯುತಿರುವೆ
ಇರುವನು ಜೊತೆಗೆ ಲೂಸಿಯ
ಬರುವುದಾದರೆ ಬನ್ನಿ ಅದಕೆ ತೆತ್ತಬೇಕು
ನಿಮ್ಮ ಅಮೂಲ್ಯವಾದ ಸಮಯ!
ನೀವೆನ್ನುವಿರಿ..........!
ಬರೀ ಕುಯ್ಯಬೇಡವೋ ಗೆಳೆಯ!
ಹೇಳುವೆಯಾ ನೀ ಕತೆಯ!
ನಾ ನುಡಿಯುವೆನು,
ಆಯಿತಪ್ಪ ಮಹರಾಯ ........!
ಬರೆಯಲು ನಾ ತೆಗೆಯುತಿರುವೆ
ಎನ್ನ ಮನದ ಲೇಖನಿಯ!
ತೆರೆಯಿರಿ ನಿಮ್ಮೊಳಗಿನ ಆಂತರ್ಯ!
ಬದುಕಲ್ಲಿ ಎಲ್ಲವೂ ಇರುವವನ ಕತೆಯ!
ಎಲ್ಲವೂ ಇದ್ದು ಇಲ್ಲದಿರೆ ಚೆನ್ನ ಎನ್ನುವವನ ವ್ಯಥೆಯ!
ಬಿಡಿಸಲಾಗದ ಕಗ್ಗಂಟೋ ಪ್ರೇಮವೆಂಬ ಮಾಯೆಯ
ಹೇಗೆ ತೋರಲಿ ಅದರಿಂದ ನೀ ಪಡುತಿರುವ ಯಾತನೆಯ!
ಸುಂದರ ಸಾಲುಗಳಿವು ಒಮ್ಮೆ ಓದಿ ಕಳಚೋ ನಿನ್ನ ವಿಷದ ಪೊರೆಯ!
------------------------------------
ನೀ ಮಾಯೆಯೊಳಗೊ... ಮಾಯೆ ನಿನ್ನೊಳಗೊ...
ನೀ ದೇಹದೊಳಗೊ... ದೇಹ ನಿನ್ನೊಳಗೊ...
ನೀ ಕನಸಿನೊಳಗೊ... ಕನಸು ನಿನ್ನೊಳಗೊ...
ನೀ ಅಮಲಿನೊಳಗೊ... ಅಮಲು ನಿನ್ನೊಳಗೊ...
ಮನಸು ದೇಹಗಳೆರಡು ಸೆಳೆಯುವ
ಸುಳಿಯಂತಿರುವ ಪ್ರೇಮದೊಳಗೊ...
---------------------------------------
ನೀವು ಇದನು ತಿಳಿಯಲಾಗದಿದ್ದರೆ ನಿಮಗೆ ಬೇಕಾಗಬಹುದು ಲೂಸಿಯ! ಅದಕ್ಕಾಗಿ ಮತ್ತೆ ಮತ್ತೆ ವೀಕ್ಷಿಸಿ ಲೂಸಿಯ! ಲೂಸಿಯ!
-----
ನಿತ್ಯವೂ ಬದುಕುತ್ತಿರುವ ನಾವು ನಮ್ಮ ಆಲೋಚನೆಗಳು, ಅಲೆಯಂತೆ ಒಂದರ ಹಿಂದೆ ಮತ್ತೊಂದು ಹೊಡೆಯುತ್ತಲೇ ಇರುತ್ತದೆ. ಎಚ್ಚರವಾಗಿದ್ದೂ ಕನಸು ಕಾಣುವ ಆಸೆ, ಆಸೆಗಾಗಿ ನಿದ್ರಿಸುವಾಸೆ, ಆಸೆಯೆಂಬ ಮಾಯೆಯ ಬಣ್ಣಿಸುವುದು ಬಲು ಕಷ್ಟ ಎಲ್ಲಿಂದ ಶುರು ಮಾಡಿದರೂ ಮತ್ತೆ ಅಂತ್ಯವಾಗುವುದು ಅಲ್ಲಿಯೇ. ಇಂತಹ ಕ್ಲಿಷ್ಟವಾದ ಮನೋವೈಜ್ಞಾನಿಕ ವಿಷಯವನ್ನು ಇಟ್ಟುಕೊಂಡು ಅದನ್ನು ಜನರಿಗೆ ಅರ್ಥೈಸುವುದು ಅಷ್ಟು ಸುಲಭದ ಮಾತಲ್ಲ, ಚಿತ್ರ ಸಂಪೂರ್ಣ ಗೊಂದಲಮಯವೆನಿಸಿದರೂ ಕನಸು-ವಾಸ್ತವದ ನಡುವಿನ ಯುದ್ದ ಮುಗಿದು ವಾಸ್ತವದಿ ಸಾಮಾನ್ಯ ಮನುಷ್ಯನಂತೆ ಬದುಕುತ್ತ ಎಲ್ಲರೊಡಗೂಡಿ ಬಾಳುವ ಆಸೆಯೇ ನಮ್ಮ ಲೂಸಿಯ! ಕಥೆಗಳು ಕಪ್ಪು-ಬಿಳುಪು ಮತ್ತು ಬಣ್ಣದಿಂದ ಕೂಡಿದ್ದರೂ ಕೊನೆಗೆ ಅವೆರಡಕ್ಕೂ ಸುಂದರ ಅಂತ್ಯ ಕೊಟ್ಟು ಚಿತ್ರಕಥೆಯನ್ನು ಅಂತ್ಯವಾಗಿಸುವುದು ನಿಜಕ್ಕೂ ಶ್ಲಾಘನೀಯ. ಅಂತಹ ಪರಿಶ್ರಮಕ್ಕೆ ನನ್ನ ಸಲಾಂ. ಪ್ರತಿಯೊಬ್ಬ ನವ ಯುವ ಪ್ರತಿಭೆಗಳ ಪರಿಶ್ರಮದ ಹೂರಣವೇ ಈ ಲೂಸಿಯ! ಯಾರಿಗೆ ಇಷ್ಟವಾಯಿತೋ ಬಿಡ್ತೋ ಬೇಕಿಲ್ಲ ಸಿನೆಮಾ ನೋಡಿ ನನಗೆ ಬೇಕಾದದ್ದು ನಾನು ತೆಗೆದುಕೊಂಡಿದ್ದೇನೆ.
***********************************************************************************************