ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, July 28, 2013

ಪ್ರಾರ್ಥನೆ!

***********************************************************************************************
ರವಿಯೆಂಬ ಜ್ಞಾನಜ್ಯೋತಿಯು 
ನಶಿಸಿದೊಡೆ;
ನೆರಳಿನಂತಿರ್ಪ ಮನವು 
ಪೂರ್ಣ ಶರೀರವ ಆವರಿಪುದು! 

ಕಾಣದಿಹುದೋ ಎನ್ನ ಛಾಯೆ
ಸುತ್ತಲೂ ಬರೀ ಕಗ್ಗತ್ತಲು!
ಬೆಳಕ ಅನುಗ್ರಹಿಸೋ ತಂದೆ 
ಆತ್ಮಜ್ಯೋತಿಯ ಉರಿಸಲು 
ಎನ್ನ ಅಸ್ತಿತ್ವವ ಬೆಳೆಸಲು!

ಕೊಳಕು ದೇಹದ ಹೊಲಸು
ಭಾವವನೆಂದಿಗೂ
ಸುಳಿಯಗೊಡದಿರು!
ಆತ್ಮಸ್ಥೈರ್ಯವೆಂಬ ತೈಲವ 
ನೀ ನನ್ನಲ್ಲುಳಿಸೋ ಭವ ಹರನೇ 
ಸದಾ ನಿನ್ನ ನಾಮವ ಜಪಿಸುವೆನು!

ಮಣ್ಣಲಿ ಮಣ್ಣಾಗುವ ಮುನ್ನ
ಈ ದೇಹದಲೊಮ್ಮೆಯಾದರೂ
ಬಂದು ನೆಲೆಸೋ ದೇವಾ; 
ಈ ದೇಹಾತ್ಮಕೆ ಪರಿಪೂರ್ಣತೆಯ 
ಕರುಣಿಸೋ ಮಹಾದೇವ!

~ ಜಿ.ಪಿ.ಗಣಿ~


***********************************************************************************************

No comments:

Post a Comment