ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, December 22, 2013

ಒಂದಷ್ಟು ತೋಚಿದ್ದು-ಗೀಚಿದ್ದು

*********************************************************************************************** 
ಬದುಕಲಿಡುವ ಹೆಜ್ಜೆಯ ಸದಾ ಗಮನಿಸುತಿರು /
ತಪ್ಪಿದ ಹಾದಿಯನೋಡುತ ಕಾಲಹರಣವನೆಂದಿಗೂ ನೀ ಮಾಡದಿರು //

ಕಲಿತ ವಿದ್ಯೆಯನೆಂದಿಗೂ ಕಳೆಯದಿರು /
ಅದನು ಕಲಿಸಿದ ಗುರುವನೆಂದಿಗೂ ನೀ ಮರೆಯದಿರು //

ಹೆತ್ತ ಕರುಳನೆಂದಿಗೂ ನೋಯಿಸದಿರು /
ತಂದೆ ತಾಯಿಯರನು ಮನದಲಿ ಸದಾ ನೀ ನೆನೆಯುತಿರು //

ನಿತ್ಯವೂ ಸತ್ಯದ ಪಥವ ಕಾಣುತಿರು /
ದುಃಖ ತರಿಸದ ಮಿತ್ಯವ ನೀ ನುಡಿಯುತಿರು //


*********************************************************************************************** 

1 comment:

  1. ಒಳ್ಳೆಯ ಕಿವಿ ಮಾತು ನಿಮ್ಮ ಈ ಕವನ.Ganesh GP ಅವರೇ.

    ಈಗಷ್ಟೇ ಹೊಸದಾಗಿ ಕವಿ ಮಿತ್ರ ಗಣಿ, ತಮ್ಮ ಬ್ಲಾಗಿನಲ್ಲಿ ಹೊಸ updates ಹಾಕಿದ್ದಾರೆ, ಭೇಟಿ ಕೊಡಿ.

    ReplyDelete