ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, August 10, 2013

ಪ್ರೀತಿ ಮಧುರ, ತ್ಯಾಗ ಅಮರ!

***********************************************************************************************
ನೀರಿನಂತಿದ್ದ ನನ್ನ ಹೃದಯಕೆ
ತಿಳಿ ಹಾಲಿನ ಹಾಗೆ
ನೀನು ಬಂದೆ
ನನ್ನೊಳಗೇ ಮಿಂದು
ಬೆರೆತುಹೋದೆ!

ನೀ ಬರುವ ತನಕ
ನನ್ನ ಬಾಳಲಿ ಎಲ್ಲವೂ ನನ್ನ
ಕಣ್ಣಿಗೆ ಗೋಚರವಾಗುತಿತ್ತು!
ನೀ ಬಂದ ಮೇಲೆ
ಎನಗೆ ನೀನಲ್ಲದೆ ಬೇರೇನೂ
ಕಾಣದೆ ಹೋಯ್ತು!

ಎಷ್ಟು ಶ್ರಮವಿತ್ತರೂ
ನಿನ್ನಲಿ, ನನ್ನನು ನಾ
ಹುಡುಕಲಾಗುತ್ತಿಲ್ಲ, ಕಾರಣ
ನಾನೆಲ್ಲವೂ ನೀನೇ ಆಗಿರುವೆ!

ಜಗದ ಕೆಲ ಕಾರಣಕೆ
ನೀ ನನ್ನ ಮರೆತುಬಿಡು ಎಂದರೂ
ನಾ ನಿನ್ನ ಮರೆಯಲಾಗದು!
ನಮ್ಮಿಬ್ಬರ ಆತ್ಮದ ಮಿಲನವ
ಬೇರ್ಪಡಿಸಲೆಂದಿಗೂ ಆಗದು!

ನಾವು ಸತ್ತರೂ ಉಳಿಯುವವು
ನಮ್ಮ ಆತ್ಮಸಂಬಂಧದ
ಪಳೆಯುಳಿಕೆಗಳು!
ಅದುವೇ ದೈವ ಬರೆದ
ವಿಧಿ ಲಿಖಿತಗಳು!

ನಿನಗಾಗಿ ನಾನೇ ದೂರ ಹೋಗಲಿರುವೆ
ಅದಕೆ ಬೇಕು, ನೋವೆಂಬ ಶಾಖ
ಆ ನೋವೆಂಬ ಶಾಖಧಿ, ನಿನ್ನ ಉಳಿಸಿ
ನಾನೇ ಮೊದಲು ಹೊರಡುವೆ
ಕಣ್ಣ ಹನಿಗಳಾಗಿ, ಕರಗಿ ಆವಿಯಾಗಿ
ಸದಾ ನಿನ್ನ ನೆನಪಿನ ಗಾಳಿಗೆ
ತಾಳ ಹಾಕುವ, ತಿಳಿ ಹಾಲಿನ ಮೋಡವಾಗಿ
ಕೇವಲ ನೀನಾಗಿ, ನಿನ್ನ ನೆನಪಲಿ ಅಮರವಾಗಿ!

~ಜಿ.ಪಿ.ಗಣಿ~

***********************************************************************************************

1 comment: