ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, June 30, 2015

ನೆರಳಿಗೂ ಆಸೆಯಂತೆ!!!


***********************************************************************************************
ನನ್ನದೇ ನೆರಳಿಗೆ 
ಇತ್ತೀಚೆಗೆ ಬಣ್ಣದ ಬದುಕಿಗೆ
ಸೇರುವ ಆಸೆ
ಹುಚ್ಚು ಕಪ್ಪಿಗೇಕೋ
ವ್ಯಾಮೋಹವಂತೆ
ಈ ಶರೀರದಾಕಾರವ ಪಡೆಯಲು
ಒಮ್ಮೊಮ್ಮೆ ನಗುತ್ತದೆ
ಕತ್ತಲಲಿ ನೀ ನನ್ನದೇ ಬಣ್ಣ
ಬೆಳಕಿರೆ ಮಾತ್ರದಿ ನಮ್ಮಿಬ್ಬರ
ಇರುವಿಕೆಯ ಸುಳಿವು
ಇಲ್ಲದಿರೆ ನೀ ಶೂನ್ಯವೆಂದು...
ನಾ ಅನಂತ!
ಆದರೂ ಒಮ್ಮೆ ನೀನಾಗುವ ಆಸೆ
ಆ ಜಡ ಶರೀರದಲಿ ನೆಲಸುವಾಸೆ

~ಜಿ.ಪಿ.ಗಣಿ~
***********************************************************************************************

No comments:

Post a Comment