ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, June 1, 2015

ಕನಸು

***********************************************************************************************
ಆರದೋ ಮುಖದ ನಗುವಾಗುವಾಸೆ
ನಗುವಿನೊಳಗಿನ ಮಗುವಾಗುವಾಸೆ
ದುಃಖ ತುಂಬಿದ ಮೋಡದ ನಡುವಿನೊಳು
ಬರುವ ಬೆಳಕಿನ ಕಾಮನಬಿಲ್ಲಾಗುವ ಆಸೆ
ನಾನು ನಾನಾಗದೆ ಉಸಿರಿಗೆ ಉಸಿರ ಕೊಡುವ ಗಾಳಿಯಾಗುವಾಸೆ
ಸಾವಿನಂಚಲಿರುವ ಬಾಯಿಗೆ ಬೀಳುವ ಗಂಗಾಜಲವಾಗುವಾಸೆ
ಕತ್ತಲಲಿ ಚಂದ್ರನಾಗಿ ಬೆಳದಿಂಗಳ ಬೀರುವಾಸೆ
ಸೂರ್ಯನಂತೆ ಪ್ರಜ್ವಲಿಸುತಲಿ
ಲೋಕದ ಅಂದವನೆಚ್ಚಿಸುವಾಸೆ...


***********************************************************************************************

No comments:

Post a Comment