ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, January 9, 2014

ಗಾಳಿಯಿಲ್ಲದೆ ಹೊಗೆಯಾಡದು


***********************************************************************************************
ಕಣ್ಣು ನಾನಾದರೆ /
ಅದರೊಳಗಿನ ದೃಷ್ಟಿ ನೀನು //

ಚರ್ಮ ನಾನಾದರೆ /
ಅದಕೆ ಜೀವ ತುಂಬುವ ಸ್ಪರ್ಶ ನೀನು//

ಕಿವಿ ನಾನಾದರೆ /
ಅದರೊಳಗಿರುವ ತಮಟೆ ನೀನು //

ಮೂಗು ನಾನಾದರೆ /
ಅದನು ಅನುಭವಿಸುವ ಸುಗಂಧ ನೀನು //

ಬಾಯಿ ನಾನಾದರೆ /
ಅದರಿಂದ ಹೊರ ಬರುವ ಮಾತು ನೀನು //

ದೇಹ ನಾನಾದರೆ /
ಅದರೊಳಗಿನ ಆತ್ಮ ನೀನು //

ಹೃದಯ ನಾನಾದರೆ /
ಅದರೊಳಗಿನ ಉಸಿರು ನೀನು //

ನೀನಿರುವವರೆಗೂ ನಾ
ಸಜೀವ /
ನೀನಿಲ್ಲದ ನಾನು, ಕೇವಲ
ನಿರ್ಜೀವ //

---@ - ಜಿ.ಪಿ.ಗಣಿ -@--


*********************************************************************************************** 

No comments:

Post a Comment