ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, January 2, 2014

ಆಸೆಯ ಚಿಗುರೆಲೆ

***********************************************************************************************
ಚಿಗುರಿ ಸಸಿಯಾಗಿ
ಬೆಳೆಯುವ ತನಕ
ತಿಳಿದಿರಲಿಲ್ಲವೆನಗೆ
ನನ್ನೊಳಿನ ಆಸೆಯೆಂಬ
ಹಸಿರೆಲೆಗೆ ಸಾವಿದೆಯೆಂದು

ಆಸೆಯ ಚಿಗುರೆಲೆ ಜನುಮ
ತಳೆದಾಗ ಇದ್ದದ್ದು, ತಿಳಿ ಹಸಿರು
ಅದೇ ಕನಸೆಂಬ ಉಸಿರು
ಕನಸು ನನಸಾದೆಡೆ
ಮನಸಿಗೆ ಉಲ್ಲಾಸದ ಪಸಿರು
ಅದೇ ಕಡು ಹಸಿರು

ನನಸಾಗದೇ ಅಳಿದವು
ಎಷ್ಟೋ ಕನಸುಗಳು
ಮತ್ತೆ ಚಿಗುರುವ ಆಸೆ
ಕಡು ಹಸಿರಾಗುವ ಆಸೆ

ಕಾಯುತಿರುವೆನು
ವಸಂತ ಮಾಸಕೆ
ಹೊಸ ವರುಷಕೆ
ಹೊಸ ಹರುಷಕೆ

ಬೆಳೆಯುತ್ತಿರುವುದೀ ದೇಹವು
ನಿತ್ಯವೂ ಒಣಗುತ್ತಾ
ಮತ್ತಷ್ಟು ತೊಗಟೆಯೆಂಬ
ಪೊರೆಯ ಕಳಚುತ್ತಾ
ಇರುವ ಆಸೆಯೆಂಬ
ಎಲೆಗಳನೆಲ್ಲಾ ಉದುರಿಸುತ್ತಾ
ಆದರೂ, ನಾನು ಮರೆತಿಲ್ಲ
ಮತ್ತೆ ಮತ್ತೆ ಚಿಗುರುವುದನು...

ಛಲದಿಂ ನಿಲ್ಲುವೆ ಆಸೆಗಳಿರುವತನಕ
ಉಸಿರು ಬಸಿರಲಿ ಬೆಳೆಯುವತನಕ
ಹಸಿರು, ಕಂದಾಗಿ ಅಳಿಯುವತನಕ


~ಜಿ.ಪಿ.ಗಣಿ~

*********************************************************************************************** 

1 comment:

  1. ಚಿಗುರುವ ಆಶಯವೇ ಬದುಕಿಸಿಬಿಡುತ್ತದೆ. ತುಂಬಾ ಒಳ್ಳೆಯ ಕವನ.

    ReplyDelete