***********************************************************************************************
ನಿನ್ನಯ ಮನವೆಂಬ ಪ್ರೀತಿಯ ಸಾಗರದಲ್ಲಿ
ತೇಲುವ ಪುಟ್ಟ ನೌಕೆ ನಾನು /
ಜೋಪಾನವಾಗಿ ದಡವ ಸೇರಿಸೆನ್ನನು /
ನಿನ್ನಲೆಯ ಅಬ್ಬರಕೆ ನನ್ನಲ್ಲಿ ಉಂಟಾಗುವುದು ಆಗಾಗ ಏರಿಳಿತ /
ಕೃಪೆ ತೋರಿ ಕಡಿತಗೊಳಿಸುವೆಯಾ ನಿನ್ನಯ ಕುತೂಹಲದೊರೆತ /
ಒಮ್ಮೊಮ್ಮೆ, ನಿನ್ನೊಳಗೆ ಮುಳುಗುವ ಆಸೆ
ಆದರೆ ನಾ ಸ್ಥಿರವಾಗುವೆ /
ನಾ ನೀನಾಗುವೆ /
ನನಗದು ಸಲ್ಲ ಓ ಮುದ್ದು ಗಿಣಿಯೆ...
ಬಾಳ ಹಾದಿಯಲಿ ನಿನ್ನೊಡನೆ
ನಿರಂತರ ಚಲಿಸುವ ಆಸೆ /
ಆ ಹಾದಿಯ ನಡುವೆ ಸಿಕ್ಕ
ಪ್ರೀತಿಯ ಮಾರ್ಗ ನೀನು /
ಆ ಮಾರ್ಗವ ದಾಟಿ
ದಡವ ಸೇರಲು ಬಂದವನು ನಾನು /
ನಿನ್ನೊಡನೆ ಕಳೆದ ಈ ಕ್ಷಣಗಳು
ಇನ್ನಷ್ಟು ಇಮ್ಮಡಿಯಾಗಿಸಿವೆ
ನಿನ್ನೊಡನೆ ಆಟವಾಡಲು
ಬಾಳ ಪಯಣ ಮುಂದುವರೆಸಲು...
ದಡವಿರದ ಹಾದಿಯ ಕಾಣುತಿರುವೆನು
ಹಾಗೊಮ್ಮೆ ದಡವಿದ್ದರೆ ಅದು ನಮ್ಮಿಬ್ಬರ
ಸಮ್ಮಿಲನವಾಗಿರಲೆನ್ನ ಗಿಣಿಯೆ
ನಾ ತಟಸ್ಥ / ನೀನೂ ತಟಸ್ಥ /
ಅದುವೇ ನಮ್ಮಯ ಅಂತ್ಯ //
---ಜಿ.ಪಿ.ಗಣಿ---
***********************************************************************************************
ಗಣಿಯು ಗಿಣಿಗೆ ಬರೆದುಕೊಟ್ಟ ನಿವೇದನಾ ಕವಿತೆ ಮೆಚ್ಚುಗೆಯಾಯಿತು. ಅಸ್ತು ಎಂದರು ದೇವತೆಗಳೂ
ReplyDelete