***********************************************************************************************
ಕಣ್ಣಂಚಲಿ ತುಂಬಿದೆ ನೂರಾರು ಆಸೆಗಳು
ಸಾಧಿಸಲು ಬೇಕಿದೆ ಮನಕೆ; ಹೊಸ ಹುರುಪುಗಳು!
ಕಮರಿಹೋದ ಬಾಳ ಪುಟಗಳ ಮತ್ತೆ ಸರಿಪಡಿಸಬೇಕೆಂಬ ಆಶಯ!
ಕೊರಗುವ ಎದೆಯಲ್ಲಿ ತುಂಬಿದೆ, ಹೊರಬರಲಾರದಷ್ಟು ಸಂಶಯ!
ಆಸಕ್ತಿಯೆಂಬ ಬೇಟೆಗಾರನಿಗೆ ದಾರಿಯಲಿ ಸಿಕ್ಕಿತೊಂದು ಪ್ರಾಣಿ!
ಅದರ ಬೇಕು-ಬೇಡ ತಿಳಿಯದೆ, ಬಾಣದ ಗುರಿ ತಪ್ಪಿ ಅವನಾದ ನಿತ್ರಾಣಿ!
ತುಮುಲಗಳ ಬಲೆಯೊಳಗೆ, ಆಲೋಚನೆಯ ಜೇಡವು ಹುಡುಕುತಿದೆ; ತನ್ನ ಸುರಕ್ಷತೆಯ!
ಹೇಗೆ ಹೇಳಲಿ ನಾ, ತಾನೆಣದಿರುವ ಬಲೆಯಲಿ ತಾ ಸಿಲುಕಿ ಬಳಲುತಿರುವದರ ವ್ಯಥೆಯ!
ಕಣ್ಣಂಚಲಿ ತುಂಬಿದೆ ನೂರಾರು ಆಸೆಗಳು!
...
ಕಾಲದ ಹಿಂದೋಡುವ ಆಸೆ ಕಾಲಹರಣ ಮಾಡುತ!
ಕಾಲವು ಹೇಳುತಿದೆ ಕಾಯದಿರು ನೀ ನನ್ನ ಹಿಂಬಾಲಿಸುತ!
ಸಾಧಿಸೇನಾದರು ನೀ ನನಗಿಂತ ಮುಂದೆ ಸಾಗುತ್ತ!
ನೆನ್ನೆ-ನಾಳೆಯ ನಡುವೆ ಶುರುವಾಗಿದೆ ಕಾದಾಟ
ಇವೆರಡರ ನಡುವಿನ 'ಇಂದಿ'ಗೆ ಬಂದಿದೆ ಪರದಾಟ
ಈ ಮೂರರ ಹಿಂದಿದೆ ಬಿಡಿಸಲಾರದ ನಂಟು
ಸಾಧಿಸಬೇಕಾದೆಡೆ ಬಿಡಿಸೋ ಅವುಗಳ ನಡುವಿನ ಒಗಟು!
ಕಣ್ಣಂಚಲಿ ತುಂಬಿದೆ ನೂರಾರು ಆಸೆಗಳು!
...
~ಜಿ.ಪಿ.ಗಣಿ~
***********************************************************************************************
***********************************************************************************************
ಜೀವನೋತ್ಸಾಹ ತುಂಬುವ ಇಂತ ಗೀತೆಗಳೆಂದರೆ ನಮಗೂ ಖುಷಿ,
ReplyDeleteಶಭಾಷ್ ಕವಿಯೇ:
ಕಾಲದ ಹಿಂದೋಡುವ ಆಸೆ ಕಾಲಹರಣ ಮಾಡುತ!
ಕಾಲವು ಹೇಳುತಿದೆ ಕಾಯದಿರು ನೀ ನನ್ನ ಹಿಂಬಾಲಿಸುತ!
ಸಾಧಿಸೇನಾದರು ನೀ ನನಗಿಂತ ಮುಂದೆ ಸಾಗುತ್ತ!