ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, June 18, 2013

ಹೀಗೊಂಚೂರು!

***********************************************************************************************
ನಿನ್ನ ಮೌನ ಸಾಕು ಮನದ ಗಡಿಯಾರದ ಸದ್ದು ಕೇಳಲು!
ನಿನ್ನ ಮಾತು ಸಾಕು ಮನೆಯ ಗಡಿಯಾರದ ಸಮಯ ಮರೆಯಲು!

ಪ್ರೇಮದಮಲಿನಲಿ ಎನ್ನ ನೀನೆಂದೂ ಕಾಡದಿರು 
ಮನವೆಂಬ ವಾನರನ ನಿನ್ನ ಪ್ರೇಮದಿ ಎಂದೂ ಕೆಣಕದಿರು!

ದೂರ ಹೋಗುವ ಮುನ್ನ ನೀ ತುಸು ಯೋಚಿಸು 
ಈ ಆತ್ಮ ಪ್ರೇತಾತ್ಮವಾದರೆ ದೇವರ ದಯೆ ಯಾಚಿಸು!

ಬಣ್ಣ-ಬಣ್ಣದ ಕನಸುಗಳ ನೀ ಕಾಣಬೇಡ!
ಕಪ್ಪು-ಬಿಳುಪು ವಾಸ್ತವವ ಕಂಡು ನೀ ಮರುಗಬೇಡ!


~ಜಿ.ಪಿ.ಗಣಿ~ 
***********************************************************************************************

No comments:

Post a Comment