ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, June 14, 2013

ತಪೋ ಭಂಗ!

***********************************************************************************************
ಕದ್ದು ಮುಚ್ಚಿ ನೋಡುವ ನಿನ್ನ ನೋಟ 
ಹುಟ್ಟಿಸಿದೆ ನನ್ನಲ್ಲಿ ಸುಂದರವಾದ ಭಾವ!

ಮಾತು ಶುರುವಾಯಿತು ಕಣ್ಣಲ್ಲೇ 
ಅದರೊಳಗೆ ನೂರೆಂಟು ಹಾವ-ಭಾವ!

ನಿನ್ನ ಕಣ್ಣ ಸೆರೆಯಲ್ಲಿದ್ದೆನೆಗೆ ತಿಳಿಯಲಿಲ್ಲ 
ಪಕ್ಕದಲ್ಲೇ  ಕುಳಿತಿದ್ದ ನನ್ನ ಮಾವ!

ಸುಮ್ಮನೆ ಕುಳಿತಿದ್ದ ಮಾವ ಆಗಲೇ 
ಕೊಡಬೇಕ ಮಗಳಿಗೆ ಹಾಲ್ಕೋವ!

ಯಾರ ಬಳಿ ಹೇಳಲಿ; ಕಣ್ಣ ಮಿಲನದ ಏಕಾಂತ 
ಭಂಗವಾದಾಗ ಆಗುವ ನೋವ!

~ಜಿ.ಪಿ.ಗಣಿ~ 
***********************************************************************************************

No comments:

Post a Comment