ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, June 20, 2013

ಹುಚ್ಚು ಪ್ರೀತಿ

***********************************************************************************************

ನೀ ಬೇಡವೆಂದರೂ ನಿನ್ನ ಬಳಿ  
ಓಡಿ ಬರುವ ಮನಕೆ ನಾನೇನೆಂದು ಹೇಳಲಿ?
ಮರೆತಷ್ಟು ಕಾಡುವುದು ನಿನ್ನಯ  ನೆನಪು!
ಈ ಹುಚ್ಚು ಪ್ರೀತಿಯ ಹುಟ್ಟಡಗಿಸಲು ಸಾಧ್ಯವಿಲ್ಲವೇ?

ಇರುಳಿನ ಕನಸಾಗಿ ಬಂದು ಹೋಗದೆ 
ಬಾಳಿನ ಕನಸಾಗಿ ಏಕೆ ಬಂದೆ!
ಮೂಕವಾಗಿ ಒಳಹೊಕ್ಕು 
ಅಂತರಂಗದಿ ನನ್ನನೇಕೆ ಕೊಲ್ಲುತಿರುವೆ!
  
ಕನಸುಗಳು ಏಕೋ ಮರೆಯಾಗಿವೆ!
ಹೃದಯವೂ ತುಂಬಾ ಭಾರವಾಗಿದೆ!

ನೀ ದೂರ ಹೋದರೆ ನಾ ಉಳಿಯುವೆ!
ನಿನ್ನ ಮರೆತರೆ ಬದುಕಲಿ ನಾ ಗೆಲ್ಲುವೆ!

~ಜಿ.ಪಿ.ಗಣಿ ~ 
***********************************************************************************************


2 comments:

 1. ಮೌನವಾಗಿ ಪ್ರೀತಿಯಾಳಕ್ಕಿಳಿದು ಮತ್ತೆ ಮೇಲೆದ್ದು ಬರಬೇಕೆಂದರೆ ಸುಲಭವಾದ ಪ್ರಕ್ರಿಯೆಯಲ್ಲ. ಅಂತಹದ್ದೊಂದು ಸುಳಿಯಲ್ಲಿ ಹೆಪ್ಪುಗಟ್ಟಿದ ಭಾವಗಳು ಈ ಹಾಡಾಗಿದೆ! ಚೆನ್ನಾಗಿದೆ ಗಣಿ :)

  - ಪ್ರಸಾದ್.ಡಿ.ವಿ.

  ReplyDelete
 2. ನೆನಪುಗಳೇ ಹೀಗೆ ಬೇಡವೆಂದಷ್ಟು ನಮ್ಮಣ್ಣ ಅರಸಿ ವರಸಿ ಬರುತ್ತವೆ...
  ನೆನಪುಗಳು ದೂರಾಗಲಾರವು. ನೆನಪುಗಳೊಂದಿಗೆ ಬದುಕುವುದನ್ನು ಮಾತ್ರ ನಾವು ರೂಢಿಸಿಕೊಳ್ಳಬೇಕಷ್ಟೆ...

  -ರುಕ್ಮಿಣಿ ಎನ್.

  ReplyDelete