ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, August 26, 2013

ದುಷ್ಟಸಂಹಾರ!

***********************************************************************************************
ಹೆಣ್ಣೆಂದರೆ ಮರುಗುವುದೇಕೋ
ಈ ಹುಚ್ಚು ಮನವು
ಎದೆಯಾಲನುಂಡು
ವಾತ್ಸಲ್ಯದಿ ಬೆಳೆದು
ತಪ್ಪೊಪ್ಪುಗಳ ಬದಿಗಿರಿಸಿ
ಹರಸುವ ಕೈಗಳ
ವರವೋ- ಶಾಪವೋ
ನಾ ಅರಿಯೆ!

ನೇರ ದೇಹವ
ಸೀಳಿದೆರಡು ಭಾಗದಿ
ಕಾಣದ ಹೃದಯವ
ಸರಿದೂಗಲೆಂದಿತ್ತ
ದೇವರ ನಾಕವೋ
ಅದನೂ ನಾ ತಿಳಿಯೆ!

ಯೌವ್ವನದ ಮದ ಶಿರಕ್ಕೇರಿ
ಆಕರ್ಷಣೆಯ ಅಡಿಯಾಳಾಗಿ
ಬಲಿಯಾಗಲು ಹೊರಟಿರುವ
ಜೊಲ್ಲೊತ್ತ ನಾಯಿಯೇ
ಹೇಗೆ ಹೇಳಲಿ ನಿನ್ನಂತರಂಗ
ತೊಳಲಾಟವನು
ವ್ಯಾಮೋಹದ ಗಾಳಿಯು
ಬೀಸಿದಂತಿದೆ
ನಿನ್ನ ಮನ ಹೊಕ್ಕು
ಹೊಗೆಯಾಡಿ ಉರಿದು
ಕಾಮದ ಜಮದಗ್ನಿಯ ಹೊತ್ತಿಸಿ
ಹೆಚ್ಚಿಸಿ ಮನದ ಕೌತುಕಗಳಿಗೆ
ಪುಷ್ಟಿ ನೀಡಿದಂತಿದೆ!

ತಡೆಯಿಲ್ಲದ ನಡೆಯಿಂದಾಗಿ
ಕೊರಗುತ್ತಿವೆ ಹೆಂಗರುಳುಗಳು!
ದಾನವನಾಗಿ ಮೃಗದಂತೆ
ಎರಗುವದನೇಕೆ ಕಲಿತೆ!
ಹೆತ್ತ ತಾಯ ಮಮತೆಯು
ನಿನ್ನ ಕಣ್ಣಿಗೆ ಕಾಣಲಿಲ್ಲವೇ!
ಅಕ್ಕ ತಂಗಿಯ ಪ್ರೀತಿಯು
ನಿನ್ನರಿವಿಗೆ ಬಾರಲಿಲ್ಲವೇ!

ಕಾಮಾಲೆ ಕಣ್ಣಿಗೆ
ಕಾಣುವುದೆಲ್ಲ ಹಳದಿಯಂತೆ
ಕಾಮಾಲೆ ರೋಗವು ನಿನ್ನ ಬಿಡದೆ
ನೀ ಮನುಜನಾಗುವುದಿಲ್ಲ
ಎರಡು ತೊಟ್ಟು ಹಸಿವಿಗಾಗಿ
ನರಭಕ್ಷಕನಾಗಿಹೋದೆಯಲ್ಲೋ
ನಾ ಕಾಳಿಯವತಾರ ತಾಳುವವರೆಗೂ
ನಿನ್ನಾಟಕೆ ಕೊನೆಯೇ ಇಲ್ಲ!

~ಜಿ.ಪಿ.ಗಣಿ~
***********************************************************************************************

Thursday, August 22, 2013

ರಕ್ಷಾ ಬಂಧನ!

***********************************************************************************************
ಹುಟ್ಟು ಅಕ್ಕ ತಂಗಿಯರ ಕೂಡಿ ಬಾಳಲಾಗಲಿಲ್ಲ 
ಆದರೆ ಬದುಕು ಆ ಕೊರೆತೆಯ ನನಗೆ ಉಳಿಸಲಿಲ್ಲ 
ಪೀಡಿಸುವಾಗವಳು ನನಗೆ ಅಕ್ಕರೆಯ ಅಕ್ಕನಂತೆ 
ಮುದ್ದಿಸುವಾಗವಳು ನನಗೆ ಮುದ್ದಾದ ತಂಗಿಯಂತೆ 
ಈ ಎಲ್ಲವ ಕರುಣಿಸುವ ಆ ತಾಯೆಂಬ ಹೆಂಗರುಳಿರಲು
ನನಗೆಂತಾದರೂ ಚಿಂತೆಯುಂಟೆ!

ಕಲಿಸಿರುವವಳು ಈ ಮತಿಗೆ, ಹೆಣ್ಣೆಂಬ ಜ್ಯೋತಿಗೆ 
ಕೇವಲ ಪ್ರೀತಿಯೆಂಬ ತೈಲವಷ್ಟೇ ಸಾಕೆಂದು!

ಕಾಣದ ಕೈಗಳು ಆ ಅಕ್ಕರೆಯ
ಮಮತೆಯ ಇಟ್ಟವು,
ನೋವೆಂದಾಗ ಧೈರ್ಯ
ತುಂಬಲು ಮುಂದಾದವು!
ರಕ್ತ ಸಂಬಂಧವಿಲ್ಲದಿದ್ದರೂ
ಆತ್ಮ ಸಂಬಂಧವ ತೋರಿ
ಮನದಲಿ ಅಳಿಯದೆ ಹಾಗೆ ಉಳಿದವು!

~ಜಿ.ಪಿ.ಗಣಿ~
***********************************************************************************************

Sunday, August 18, 2013

ಮಮತೆಯ ಶಕ್ತಿ!

***********************************************************************************************
ಶಿರವೆಂಬ ಬ್ರಹ್ಮಾಂಡದೊಳು 
ಸಮಸ್ಯೆಗಳೆಂಬ ಉದ್ವೇಗ ಬಂದೆಡೆ 
ಮನದೊಳಗೇರುವುದು ಸರಿ ತಪ್ಪುಗಳ ಅಲೆಯು 
ನಿನ್ನ ಮಡಿಲೊರಗಿದೆಡೆ ಸಾಕು 
ಆ ಸರಿ ತಪ್ಪುಗಳ ಅಲೆಯ ತಿಳಿಯಾಗಿಸುವ 
ನಿನ್ನ ಪ್ರೀತಿಯ ಮಾಂತ್ರಿಕ ಸ್ಪರ್ಶಕೆ 
ನಾನೇನು ಹೇಳಲಿ, ಓ ನನ್ನ ಜನುಮದಾತೆ!

ಕಾಣದ ದೇವರ
ದಿನವೂ ಬೇಡುವೆವು!
ಕಣ್ಮುಂದಿರುವ ದೇವರ ಪ್ರತಿ
ನಿಮಿಷವೂ ಕಾಡುವೆವು!

ಬೇಕಿದ್ದ ಪಡೆಯಲು
ದೇವನೊಡನೆ
ನಡೆಸುವೆವು
ಕೊಟ್ಟು ತೆಗೆದುಕೊಳ್ಳುವ
ವ್ಯಾಪಾರ!
ಅದೇ ಪ್ರೀತಿಯ,
ಆ ತಾಯಿಗೆ ಇತ್ತರೆ
ಸಿಗುವುದು
ಮಮತೆಯ ಆಶೀರ್ವಾದ
ಅಪಾರ!

~ಜಿ.ಪಿ.ಗಣಿ~

***********************************************************************************************

Saturday, August 17, 2013

ಅರಿವು!

***********************************************************************************************
ಹರವಿದ ಆಸೆಗೆ 
ಮುಡಿಯುವ ಹೂವು 
ಕೂಡ ಬಾಡುವುದಂತೆ!
ಆಸೆಯೆಂಬುದು ನಿರಂತರ 
ತೃಪ್ತಿಯೆಂಬುದು ಸಾರ್ಥಕ್ಯ
ಅರಿತವನಿಗಷ್ಟೇ ದೊರೆಪುದು 
ಸಮಯವೆಂಬ ಮಾಣಿಕ್ಯ!

~ಜಿ.ಪಿ.ಗಣಿ~
***********************************************************************************************

Saturday, August 10, 2013

ಪ್ರೀತಿ ಮಧುರ, ತ್ಯಾಗ ಅಮರ!

***********************************************************************************************
ನೀರಿನಂತಿದ್ದ ನನ್ನ ಹೃದಯಕೆ
ತಿಳಿ ಹಾಲಿನ ಹಾಗೆ
ನೀನು ಬಂದೆ
ನನ್ನೊಳಗೇ ಮಿಂದು
ಬೆರೆತುಹೋದೆ!

ನೀ ಬರುವ ತನಕ
ನನ್ನ ಬಾಳಲಿ ಎಲ್ಲವೂ ನನ್ನ
ಕಣ್ಣಿಗೆ ಗೋಚರವಾಗುತಿತ್ತು!
ನೀ ಬಂದ ಮೇಲೆ
ಎನಗೆ ನೀನಲ್ಲದೆ ಬೇರೇನೂ
ಕಾಣದೆ ಹೋಯ್ತು!

ಎಷ್ಟು ಶ್ರಮವಿತ್ತರೂ
ನಿನ್ನಲಿ, ನನ್ನನು ನಾ
ಹುಡುಕಲಾಗುತ್ತಿಲ್ಲ, ಕಾರಣ
ನಾನೆಲ್ಲವೂ ನೀನೇ ಆಗಿರುವೆ!

ಜಗದ ಕೆಲ ಕಾರಣಕೆ
ನೀ ನನ್ನ ಮರೆತುಬಿಡು ಎಂದರೂ
ನಾ ನಿನ್ನ ಮರೆಯಲಾಗದು!
ನಮ್ಮಿಬ್ಬರ ಆತ್ಮದ ಮಿಲನವ
ಬೇರ್ಪಡಿಸಲೆಂದಿಗೂ ಆಗದು!

ನಾವು ಸತ್ತರೂ ಉಳಿಯುವವು
ನಮ್ಮ ಆತ್ಮಸಂಬಂಧದ
ಪಳೆಯುಳಿಕೆಗಳು!
ಅದುವೇ ದೈವ ಬರೆದ
ವಿಧಿ ಲಿಖಿತಗಳು!

ನಿನಗಾಗಿ ನಾನೇ ದೂರ ಹೋಗಲಿರುವೆ
ಅದಕೆ ಬೇಕು, ನೋವೆಂಬ ಶಾಖ
ಆ ನೋವೆಂಬ ಶಾಖಧಿ, ನಿನ್ನ ಉಳಿಸಿ
ನಾನೇ ಮೊದಲು ಹೊರಡುವೆ
ಕಣ್ಣ ಹನಿಗಳಾಗಿ, ಕರಗಿ ಆವಿಯಾಗಿ
ಸದಾ ನಿನ್ನ ನೆನಪಿನ ಗಾಳಿಗೆ
ತಾಳ ಹಾಕುವ, ತಿಳಿ ಹಾಲಿನ ಮೋಡವಾಗಿ
ಕೇವಲ ನೀನಾಗಿ, ನಿನ್ನ ನೆನಪಲಿ ಅಮರವಾಗಿ!

~ಜಿ.ಪಿ.ಗಣಿ~

***********************************************************************************************

Friday, August 2, 2013

ಪ್ರೇಮ ಪಕ್ಷಿ ಹಾರಿದಾಗ!

***********************************************************************************************
ನನ್ನ ಹೃದಯವೆಂಬ 
ಪ್ರೇಮ ಪಾರಿವಾಳ 
ನಿನ್ನಲ್ಲಿ ಬೆಳೆದು; 
ನನ್ನಲ್ಲಿಗೆ ಬಂದು, 
ಸದಾ ನಿನಗಿಷ್ಟವಾದ 
ಒಲವಿನ ಓಲೆಯ 
ಬರೆಸುತ್ತಲಿರುತ್ತದೆ!

ಜಿ.ಪಿ.ಗಣಿ
***********************************************************************************************

ರಾಗ-ರೋಗ!

***********************************************************************************************
ತಿನ್ನಲು ಆಸೆಯಿತ್ತು 
ಕಂಡಿತು ಒಂದು ಮಾಗಿದ ಹಣ್ಣು 
ಚಾಕುವಿನಿಂದ ಕೊಯ್ದರೆ 
ಒಳಗೆ ಕಂಡದ್ದು ಬರೀ ಹುಳುಕು!

ಯೋಚನೆ ಶುರುವಾಯ್ತು 
ಕೆಲವೊಮ್ಮೆ ಬೇಕೆಂದಾಗಲೇ 
ಈ ರೀತಿ ಆಗುವುದು
ಕಾರಣ ಏನಿರಬಹುದೆಂದು
ತಿಳಿಯಿತು ಅದರ ಆಯಸ್ಸು
ಮುಗಿದಿತ್ತೆಂದು ಆದರೆ ಜೀವ
ಹೊರಡಲು ಇನ್ನೂ ಸೆಣಸಾಡುತ್ತಿದೆಯೆಂದು!

***********************************************************************************************