ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, July 12, 2013

"ಪ್ರೀತಿಯೆಂಬ ತಾಯಿ" (ಪ್ರೀತಿ ಕೇವಲ ಪ್ರೀತಿಯಲ್ಲ ಅದು ತಾಯಿಯ ಅಂಶ!)

***********************************************************************************************
ನೀ ಬೇಡವೆಂದರೂ; 
ನನ್ನ ಮನವು ಕೇಳದು!
ನೀ ದೂರ ಹೋಗೆಂದರೂ; 
ಈ ಹೃದಯ ಬಾರದು!

ನೀನು ಮರೆಯಾದರೂ;
ನಿನಗೆ ನೋವಾದರೂ 
ಮರುಗುವುದು ಈ ನನ್ನ 
ಪ್ರೀತಿಯೆಂಬ ಪುಟ್ಟ ತಾಯಿ!

ಈ ಪ್ರೀತಿಯೆಂಬ ತಾಯ
ನೀ ನೋಯಿಸಬೇಡ!
ಇದರ ಮಮತೆ ನೀ ಅರಿಯದೆ
ದೂರ ದೂಡಬೇಡ!

ನಿನಗೂ ಬರುವುದೊಮ್ಮೆ ನೋವು
ನೆನೆಯುವೆಯಾಗ ಅಮ್ಮ ಎಂದು;
ಆಗ ಆ ಪ್ರೀತಿಯೆಂಬ ತಾಯಿ ಇರಳು!
ಮರುಗಿ ಬಂತೇನು ಸುಖ;
ಕೇವಲ ಮೌನ! ಕೊರಗುವ ಮನ!
ಭಾವವೆಲ್ಲವೂ ನಿಶ್ಯಬ್ದ!

~ಜಿ.ಪಿ.ಗಣಿ~

***********************************************************************************************

1 comment:

  1. ಹೇಳಲೇನೂ ತೋಚುತ್ತಿಲ್ಲ... ನಾನೀಗ ಮೌನಿ.. ಭಾವವೆಲ್ಲವೂ ನಿಶ್ಯಬ್ದ!

    ReplyDelete