***********************************************************************************************
ಹುಟ್ಟೆಂಬುದು ಹಸಿರು
ಹುಟ್ಟೆಂಬುದು ಹಸಿರು
ಸಾವೆಂಬುದು ಕೆಂಪು
ನಡುವಿನ ಜೀವನ ನೀಲಿ
ಬರೆಯುವ ಲೇಖನಿ ಪೂರ್ತಿ ಖಾಲಿ
ಅದಕೆ ಬಣ್ಣ ತುಂಬಿಸುವುದೇ ಬದುಕಿನ ಕಯಾಲಿ
ಹುಟ್ಟು ಹೇಗೆ ಬಂತೆಂಬ ಪ್ರಶ್ನೆ
ಹಸಿರು ನೀಲಿ ಸೇರಿ ಬೆಳಗಿನ ಜಾವದ ಆಕಾಶ!
ಸಾವು ಬಂದರೆ ಹೇಗೆಂಬ ಕುತೂಹಲ
ಕೆಂಪು ನೀಲಿ ಹಸಿರು ಸೇರಿ ಬಿಳಿಯ ಮೋಡ!
ಶುರುವಿನಿಂದ ಅಂತ್ಯದವರೆಗೂ
ನಡೆಯುತ್ತಲಿರುವುದು
ಈ ಬಣ್ಣಗಳ ಹೋಳಿ!
ಯಾವ ಬಣ್ಣ ಎಂದು
ಬರುವುದೆಂಬುದೇ
ತಿಳಿಯಲಾಗದ ಸುಳಿ!
ಅನುಭವಿಸುವುದು ಒಂದೇ
ಅದುವೇ ಕಾಮನಬಿಲ್ಲು!
ಆ ಸಿಗುವ ಎರಡು ನಿಮಿಷದ ಸುಖಕೆ
ತೆತ್ತಬೇಕು ಸಮಯವೆಂಬ ಜೀವನದ ಬಿಲ್ಲು!
ಎಲ್ಲದಕೂ ಕಾರಣನವನೊಬ್ಬನೇ
ಅವ ಚಿಕ್ಕ ಅಣುವು!
ಅದು ಮತ್ಯಾವುದೂ ಅಲ್ಲ
ಅದೇ ದೇವ ಮಾತ್ರ ಕಣವು!
~ ಜಿ.ಪಿ.ಗಣಿ~
***********************************************************************************************
***********************************************************************************************
ಮೊದಲು ನನಗೆ ಇಷ್ಟವಾದದ್ದು ನಾವು ಛಾಯಾಗ್ರಾಹಕರು ಬಳಸುವ Primary Color Ring ನಿಮ್ಮ ಕವನಕ್ಕೆ ಬಳಸಿದ್ದು.
ReplyDeleteದೇವ ಕಣ ಮತ್ತು ಮಾನವನ ಬದುಕಿನ ಜೊತೆ ಬಣ್ಣಗಳ ಸಮೀಕರಣ ನನಗೆ ನೆಚ್ಚಿಗೆಯಾಯಿತು.
http://badari-poems.blogspot.in/