***********************************************************************************************
1. ತುಮುಲ !
ನಿನ್ನ ಈ ಮೌನ
ನನ್ನಲ್ಲಿ ಶುರುವಾಯಿತು ಬಿಗುಮಾನ !
2. ಕಣ್ಣ ಮುಚ್ಚಾಲೆ !
ನಿನ್ನ ಮರೆಯಾಗುವಿಕೆ
ನನ್ನಲ್ಲಿ ಏನೋ ಚಡಪಡಿಕೆ !
3. ಭಾವಸ್ಪರ್ಶ !
ನಿನ್ನ ನೆನೆಪೆಂಬ ಪ್ರೀತಿಯ ಚುಂಬನ
ನನ್ನ ಮನದೊಳಗೇಕೋ ಕಂಪನ !
4. ಗುಳಿಗೆ !
ನಿನ್ನ ತುಟಿಯಿಂದ ಬಂದರೆ ಒಂದು ಮಾತು
ನನಗೆ ತರಿಸುವುದು ಮತ್ತು !
5. ಹಬ್ಬ !
ನಿನ್ನ ಮುದ್ದಾದ ಒಂದು ನಗು
ಅಂತರಂಗಕೆ ಹಬ್ಬದ ಸೊಬಗು !
6. ಸ್ವರ್ಗ !
ನಿನ್ನಯ ನೆನೆಪಿನ ಕಲ್ಪನೆಯ ಲೋಕ
ನನ್ನ ಜೀವಕೆ ಸಂತೃಪ್ತಿಯನೀಯುವ ಸುಂದರ ನಾಕ !
7. ಅರಗಿಣಿ !
ಮೌನದ ಲೋಕಕೆ ನೀನೆ ಚಿನ್ನದ ಗಣಿ
ಆ ಮೌನದಿ ಮಾತನಾಡಿಸುವ ನೀನೆ ನನ್ನ ಭಾವದರಗಿಣಿ !
8. ತುಂಟಾಟ !
ನಿನ್ನ ಸಿಡುಕು ಮೂತಿಯ ಕಾಣಲೆನೆಗೆ ಅದೆಲ್ಲಿಲ್ಲದ ಸಂತೋಷ
ಪೀಡಿಸಿ ಪೀಡಿಸಿ ನಿನ್ನ ಮುದ್ದಾದ ಕೈಗಳಿಂದ ತಿವಿಸಿಕೊಳ್ಳಲು ಆಹಾ ಎಂತಸ ಉಲ್ಲಾಸ !
9. ತ್ಯಾಗಮಯ ಪ್ರೀತಿ !
ನಿನ್ನೊಡನೆ ಪಂದ್ಯ ಕಟ್ಟುವ ಆಸೆ
ಪಂದ್ಯದಲ್ಲಿ ಸೋತು ನಿನ್ನ ಗೆಲ್ಲುವ ಮಹದಾಸೆ !
10. ಮುಗ್ದತೆ !
ನಿನ್ನ ಮುದ್ದಾದ ಚಂದಿರನಂತ ಮೊಗವ ನೋಡುತ
ನಿನ್ನ ಮಡಿಲಲ್ಲಿ ಮಗುವಂತೆ ಮಲಗುವಾಸೆ !
11. ಲೀನ !
ನಿನ್ನ ಕಣ್ಣಲಿ ನಾ ಬೆರೆತು ನನ್ನ ಕಣ್ಣಲಿ ನೀ ಬೆರೆತು
ನಾ ನೀನಾಗುವ ಆಸೆ ನೀ ನಾನಾಗುವ ಆಸೆ !
12. ಮುದ್ದು !
ನಿನ್ನ ಪ್ರೀತಿಯ ಕೈಗಳಿಂದ ಎನ್ನ ಗಲ್ಲವ ಚಿವುಟಿ
ತಲೆಗೆ ಮೊಟಕಿಸಿಕೊಳ್ಳುವ ಆಸೆ !
13. ಅಮೃತ !
ನಿನ್ನ ಪ್ರೀತಿಯೆಂಬ ಪಾನಕವ ಎನಗೆ ಕುಡಿಸಿ
ಎನ್ನೊಳಗಿನ ಮೂಕ ಭಾವದ ಗಿಣಿಗೆ ಮಾತು ಕಲಿಸಿದೆ !
14. ಸ್ಪಂದನೆ / ತಾಳ ಮೇಳ :
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ
ಎನ್ನ ಹೃದಯದ ಬಡಿತ ತಾಳ ಹಾಕುತಿದೆ !
***********************************************************************************************
No comments:
Post a Comment