ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, February 21, 2013

ಸಮರ್ಪಣೆ

***********************************************************************************************
ಮನದೊಳಗಿನ ಆಸೆಯೆಂ
ದಮನಗೊಳಿಸೈ
ಪರಮಾತ್ಮನೇ !
ಆಸೆಯ ಕೆಂಡವಂ ಹೊಸೆದು
ಅದರ ಬೂದಿಯೊಳ್
ಮಜ್ಜನಗೈದು
ನಿನ್ನ ನಾಮವೆಂಬ ಭಕ್ತಿಯೊಳ್
ಜ್ಞಾನದ ಜ್ಯೋತಿಯಂ ಉರಿಸೈ
ಜಗದೋದ್ದಾರಕನೆ !
ಅರೆಗಳಿಗೆಯ ಸುಖಕಿಮ್
ತಿಲಾಂಜಲಿಯನಿತ್ತು
ನಿನ್ನ ಜಪಿಸುತ ಆರಾಧಿಸುವೆ
ಸ್ವೀಕರಿಸೈ ಎನ್ ಅಂತರಂಗದ ದೇಗುಲವನು !

~ಜಿ.ಪಿ.ಗಣಿ~
***********************************************************************************************

1 comment:

  1. ಆತ್ಮ ನಿವೇದನೆ ಅತ್ಯಂತ ಇಂಪಾಗಿದೆ.ಮನವು ಹೀಗೆ ಅರಳಿ ಘಮಘಮಿಸಬೇಕು.ಅಂತರಂಗದ ದೇಗುಲವ ಪಾವನಗೊಳಿಸಲು ಸಮರ್ಪಣೆಯ ಭಾವವೇ ಶ್ರೇಷ್ಠ ಅನುಸಂಧಾನ.ಧ್ಯಾನಗೊಂಡು ಪಕ್ವತೆಯಿಂದ ರಚಿತವಾಗಿದೆ ಗಣಿ.ಶುಭವಾಗಲಿ.

    ReplyDelete