ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, August 10, 2012

ದ್ವಂದ್ವ ಮನಸ್ಸಿನ ಆಟವೇ ಬದುಕಿನ ಮೂಲ ಪಾಠ!!

***********************************************************************************************
           ಭಾವನೆಯ ಬೆನ್ನೇರಿ, ಜಿಜ್ಞಾಸೆಗೆ ಒತ್ತುಕೊಟ್ಟು ,ಈ ವಿಷಯದ ಆಳಕ್ಕಿಳಿದು ಸ್ವಲ್ಪ ಇದರ ಬೇರು ಹೇಗಿರಬಹುದೆಂಬ ಪ್ರಯತ್ನ ಮಾಡಿದೆ, ಅದೆಷ್ಟರಮಟ್ಟಿಗೆ ನಿಮಗೆ ಹಿಡಿಸುವುದೋ ನೋಡಬೇಕು!! ತಪ್ಪಿದ್ದರೆ ಕ್ಷಮಿಸಿ , ಇದು ಕೇವಲ ನನ್ನ ಮನದ ಆಂತರ್ಯದ ಮಾತುಗಳಷ್ಟೇ . ಸರಿ, ಬರೀ ಪೀಟಿಕೆಯೇ ಆಯ್ತು ಲೇಖನ ಶುರುವಾಗಲಿ ಎನ್ನುವಿರಾ ? ಬನ್ನಿ ಮತ್ತೆ ಹಿಂಗೋಗಿ ಹಾಂಗ್ ಓದಿ ಬಂದ್ಬುಡುವ !!

ಜೀವನದ ಪ್ರಮುಖ ಮತ್ತು ತಿಳಿಯಲು  ಸದಾ ಹಾತೊರೆಯುವ ವಿಷಯವೆಂದರೆ ಅದೇ ದ್ವಂದ್ವತೆ .ಪ್ರತಿಯೊಂದು ಕರ್ಮದಲ್ಲೂ ಸರಿ -ತಪ್ಪು , ಒಳಿತು -ಕೆಡುಕು ,ಸೋಲು -ಗೆಲುವು  ಹೀಗೆ ಹೇಳುತ್ತಾ ಹೋದರೆ ನಮಗೆ  ತಿಳಿಯದಂತೆ ವಿರುದ್ದ ಪದಗಳ ಜೋಡಣೆ ಮಾಡಿ ಮೂಟೆ ಕಟ್ಟಿಹಾಕಿದಂತಾಗುತ್ತದೆ ಅದು ಹಾಗೆ ಇರಲಿ ಬಿಡಿ . ಆದರೆ ಇಲ್ಲಿ ನಮಗೆ  ಕಾಡುತ್ತಿರುವ ದ್ವಿಮುಖ ಹೊಂದಿರುವ ಏಕೈಕ ವಸ್ತು ದ್ವಂದ್ವ ಅಲ್ಲವೇ ? ಒಮ್ಮೊಮ್ಮೆ ಅನಿಸಿರಬಹುದು ,ಇದು ನಮಗೆ  ದೈವ ಇತ್ತ ಶಾಪವೋ -ವರವೋ ಎಂದು . ಅರೆ ಮತ್ತೆ ಏನಿದು ವಿಷಯದ ಸಾರ ಹೇಳ ಹೊರಡುತ್ತಲೇ ಮತ್ತದೇ ದ್ವಂದ್ವ ಪದಗಳ ಬಳಕೆ ಎನ್ನುವಿರಾ ? ಅದೇ ಹೇಳಲು ಒದ್ದಾಡುತ್ತಿರುವುದು . ಯಾವ ವಿಷಯವಾಗಲಿ ಅದರ ವಿಮರ್ಶೆ ಅಥವಾ ಚರ್ಚೆಗೆ ಗ್ರಾಸವಾದರೆ ಎರಡು ಉತ್ತರಗಳು , ಎರಡು ಯೋಜನೆಗಳು ಹೊರ ಬರುವುದಲ್ಲವೇ ? ಹಾಗೆಯೇ ಪ್ರತಿಯೊಂದು ಚಲನ-ವಲನದಲ್ಲೂ ದ್ವಂದ್ವ ಇದ್ದೆ ಇರುತ್ತದೆ . ಅದೇ ಅಲ್ಲವೇ ಇದರೊಳಗಿನ ರಹಸ್ಯ !
                ದ್ವಂದ್ವತೆಯ ಮಹತ್ವ ತಿಳಿಯಲು ಒಂದು ಸಣ್ಣ ಕಲ್ಪನೆಯ ಮಾಡಿಕೊಳ್ಳುವ ಬನ್ನಿ . ಮತ್ತೆಲ್ಲೋ ಕಲ್ಪನೆಯ ಆಗರ ಕಟ್ಟುವುದು ಬೇಡ ನಮ್ಮ ದೇಹವೇ ತೆಗೆದುಕೊಳ್ಳುವ ಬನ್ನಿ . ರುಂಡ, ಮುಂಡ, ಕೈ ಕಾಲು ಎಂದು ವಿಂಗಡಿಸಿರುವ  ಈ ಶರೀರವ ನೇರವಾಗಿ ಸೀಳಿದರೆ ಸಮ್ಮಿತಿಯಂತೆ  ಕಾಣುವುದಲ್ಲವೇ !! ಆದರೆ ಅವೆರಡು ಭಾಗಗಳು ಸಮನಾಗಿರುವವೇ ಎಂದು ಎಂದಾದರೂ ಯೋಚಿಸಿದ್ದೀರಾ ? ಅವುಗಳಲ್ಲಿ ಸಣ್ಣ ಕೊರತೆಗಳು ಇದ್ದೆ ಇರುತ್ತವೆ. ಮತ್ತೊಂದು ಎಂದರೆ ಪ್ರಪಂಚದಲ್ಲಿ ಸಂಪೂರ್ಣ  ಸಿಧ್ಧಿ ಸಿಗುವುದು ಅಸಾಧ್ಯ !! ಮತ್ತೆ ಈ ಶರೀರಕ್ಕೆ ಬಂದರೆ ಮುಖ್ಯ ಅಂಗಗಳಾದ ಹೃದಯ ಮತ್ತು ಮೆದುಳು ಒಂದು ರೀತಿಯ ರಾಜ -ಮಂತ್ರಿಯರಿದ್ದ ಹಾಗೆ, ಇಬ್ಬರ ವಿಚಾರಗಳು ಸೇರಿ ಒಂದು ನಿರ್ಧಾರಕ್ಕೆ  ಬಂದರೆ ಆ ಕೆಲಸ  ಸಾಫಲ್ಯ. ಮೆದುಳು ಕೂಡ ಎರಡು ಭಾಗವೇ ಏಕೆಂದರೆ ಈಗಾಗಲೇ ಶರೀರವ ಸೀಳಿ ಆಗಿದೆ . ಒಮ್ಮೆ ಈ ಸೀಳಿದ ಶರೀರದ ಎಡ ಭಾಗವ ಒಮ್ಮೆ ಕನ್ನಡಿಯಲ್ಲಿ ಅಂಟಿಕೊಂಡಂತೆ  ಹಿಡಿದು ನೋಡಿ ಸಂಪೂರ್ಣ ಶರೀರ ಭಾಸವಾಗುವುದು. 
                    ಈಗ ನೋಡಿ ನಿಜವಾದ ದ್ವಂದ್ವಕ್ಕೆ ಸರಿಯಾದ ಉತ್ತರ ಸಿಗುವುದು.ನಾವು ಹೊಂದಿರುವ ಹೃದಯ ಒಂದೇ ಆದರೆ ಕನ್ನಡಿಯಲ್ಲಿ ಮತ್ತೊಂದು ಹೃದಯ ಕಾಣಿಸುತ್ತಿದೆ .ಆದರೆ ಅದು ವಾಸ್ತವದಲ್ಲಿ ಬಲಭಾಗದಲ್ಲಿ ಇಲ್ಲ , ಕೇವಲ ಅದರ ಬಿಂಬ ಹಾಗೆಯೇ ಈ ಬದುಕಿನ ಪಯಣದಲ್ಲಿ ,ಇಂತಹ ಎರಡು ವಿರುದ್ದ ದಿಕ್ಕಿನ ಅಂಗಾಗಳ ಜೋಡಿಸಿ ಎಡಕ್ಕೆ ಹೃದಯವಿತ್ತು ಪರಮಾತ್ಮ ನಮ್ಮನ್ನು ಸದಾ ಕಾಪಾಡುವ, ಆದರೆ ಬಲಕ್ಕೆ ಕಾಣದ ಹೃದಯವ ನಾವುಗಳೇ ಹುಡುಕುತ್ತ ದಿಕ್ಕು ತಪ್ಪುತ್ತೇವೆ. ಆದರೂ ಪಕ್ಕದಲ್ಲಿರುವ ಪರಮಾತ್ಮ ನಮಗೇ ಗೋಚರವಾಗುವುದೇ ಇಲ್ಲ .ಇದೆ ಅಲ್ಲವೇ ದ್ವಂದ್ವತೆ .
                      ಎಲ್ಲೋ ಉತ್ತರ ಹುಡುಕುವುದು ವ್ಯರ್ಥ ಪಯತ್ನ ಸುಮ್ಮನೆ ಏಕೆ ಧೃತಿಗೆಡುವಿರಿ. ಒಳಿತು -ಕೆಡುಕು ,ಸರಿ-ತಪ್ಪು , ಸೋಲು-ಗೆಲುವು , ಹುಟ್ಟು -ಸಾವು ಇನ್ನು ಹತ್ತು ಹಲವೂ ,ಇವೆಲ್ಲವೂ  ಒಂದೇ ನಾಣ್ಯದ ಎರಡು ಮುಖಗಳು ಮತ್ತು ದ್ವಂದ್ವತೆಯ ಮೂಲ ಮಂತ್ರಗಳು, ಇವು ಇರುವುದು ಮಾತ್ರ ವಿರುದ್ದ ದಿಕ್ಕಿನಲ್ಲಿ ಆದರೆ ಅವುಗಳ ನಡೆಗಳು ಮಾತ್ರ ಅನಂತ . ಆದರೆ ಅವೆರಡರ ಸಮಾನ ತಕ್ಕಡಿ ಹಿಡಿದು ಜ್ಞಾನವೆಂಬ ಜ್ಯೋತಿಗೆ ಬುದ್ದಿಯ  ಕೊಟ್ಟು ನಡೆಸಬೇಕು . ಉದಾಹರೆಣೆಗೆ ಹೇಳುತ್ತೇನೆ( ಅನಂತ.......  -4,-3,-2.-1.0,1,2.3.4......ಅನಂತ )ಎಷ್ಟು ಧನಾತ್ಮಕ ಮತ್ತು ಋಣಾತ್ಮಕ ಯೋಚನೆಗಳೇ ಆಗಲಿ ಅದಕ್ಕೆ ಒಂದು ಉತ್ತರ ಇದ್ದೆ ಇರುತ್ತದೆ. ಮತ್ತೊಂದು ತಲೆಯಲ್ಲಿರಲಿ ನಾವು  ಶೂನ್ಯ  ಎಂದು  .  ಬದುಕು ನಮ್ಮ ದ್ವಂದ್ವತೆಯಿಂದ ಹೊರಬರುವ ಉತ್ತರದ  ಅಡಿಪಾಯದ ಮೇಲೆ ನಿಂತಿದೆ . ಒಂದು ರೀತಿಯ ಇಕ್ಕಟ್ಟು ಅಲ್ಲವೇ!! ಹೌದು ಆದರೂ ಹೇಳುತ್ತೇನೆ . ದ್ವಂದ್ವತೆ ದೈವ ಇತ್ತ ವರ. ಎಲ್ಲ ಹಾದಿಯೂ  ಸುಗಮವಾಗಿ ಇದ್ದರೆ ಜೀವನ  ಬೇಸರವೆನಿಸುವುದು. ಅದಕ್ಕೆ ಹಿಟ್ಲರ್ ಹೇಳಿರುವ ಒಂದು ನುಡಿ ಜ್ಞಾಪಕಕ್ಕೆ ಬರುತ್ತಿದೆ . ಕೆಡುಕು ಯೋಚನೆ ನಮ್ಮ ಸುರಕ್ಷಿತಗೆ ಆದರೆ ಒಳ್ಳೆಯ ಯೋಚನೆ ನಮ್ಮ ಯೋಜನೆಯ ಸಾಕಾರಕ್ಕೆ ಎಂದು . ಹಗಲಾದ ಮೇಲೆ ಇರುಳಿನ ಹಾಗೆ ಒಂದಾದ ನಂತರ ಮತ್ತೊಂದು  ಬಂದೇ  ಬರುತ್ತದೆ. ಅದಕ್ಕಾಗಿ ದೃಡಕಾಯ ಮನವಿರಬೇಕು. ಒಟ್ಟಿನಲ್ಲಿ ದ್ವಂದ್ವತೆಗೆ ಸಾವಿಲ್ಲ ,ಅದು ಬದುಕಿನ ಒಂದು  ಅವಿಭಾಜ್ಯ ಅಂಗ ಮತ್ತು ಅತ್ಯವಶ್ಯಕ . ಎದ್ದಾಗ ಹಿಗ್ಗದೆ ಬಿದ್ದಾಗ ಕುಗ್ಗದೆ ...ಈ ಏಳು -ಬೀಳಿನ ನಡುವೆ ಮನಸ್ಸನು  ತಟಸ್ಥಗೊಳಿಸಿ ಸರಿಯಾದ ಹಾದಿಯ ಹುಡುಕೋಣ.
                ಕೊನೆಯಲ್ಲಿ ಸಣ್ಣ ಕಿವಿ-ಮಾತು : ಪ್ರತಿಯೊಂದು ವಿಷಯದಲ್ಲೂ ಚಲನವಲನದಲ್ಲೂ ಎರಡು ನಿರ್ಧಾರಗಳು ಇದ್ದೆ ಇರುತ್ತವೆ ಅದೇ ದ್ವಂದ್ವ ಅದಕ್ಕಾಗಿ ಒಂದು ಸರಿಯಾದ ನಮ್ಮ ಆತ್ಮಕ್ಕೆ ಸ್ಪಷ್ಟವಿರುವ ದಾರಿ ಹಿಡಿದು ಮುನ್ನಡೆಯಬೇಕು. ಒಮ್ಮೆ ಅತ್ತ ನಡೆಯಲು ಪ್ರಾರಂಬಿಸಿದ ಮೇಲೆ ಹಿಂದುರುಗುವ ಮಾತು ಬರಬಾರದು ಅದು ಎಂತಹ ಪರಿಸ್ತಿತಿಯಾದರೂ ಸರಿ. ಏಕೆಂದರೆ ಮತ್ತೆ ಹಿಡಿದ ಹಾದಿಯಲ್ಲಿ ಮತ್ತಷ್ಟು ದ್ವಂದ್ವ ನಿರ್ಧಾರಗಳು ಕಾಯುತ್ತಿರುತ್ತವೆ . ಅದು ನಮ್ಮ ಜೊತೆಯಲ್ಲಿ ನಿತ್ಯ- ನಿರಂತರವಾಗಿ ಸಾಗುತ್ತಿರುತ್ತದೆ. ಎಲ್ಲವೂ ನಿಮ್ಮ ನಿಮ್ಮ ನಿರ್ಧಾರಗಳ ಮೇಲೆ ನಿಮ್ಮ ಬದುಕಿನ ಒಳಿತು -ಕೇಡು ನಿಂತಿದೆ.

  ನಿಮ್ಮ ನಲ್ಮೆಯ 
-@(ಜಿ.ಪಿ.ಗಣಿ)@-
***********************************************************************************************

6 comments:

 1. ಒಂದೊಳ್ಳೆಯ ಲೇಖನ. ತುಂಬಾ ಹಿಡಿಸಿತು ನನಗೆ.

  ReplyDelete
  Replies
  1. ಆತ್ಮೀಯ ಧನ್ಯವಾದಗಳು ಅಣ್ಣಯ್ಯ :))) ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನಾ ಆಭಾರಿ :))

   Delete
 2. ಬಾರ್ಲೆ ಗಣೇಶಣ್ಣ ಈ ವೀಕೆಂಡ್ ಗೆ ಒಂದು ಬಾಟಲ್ ರೆಡಿ ಮಾಡ್ಕೊಂಡು ಧನಾತ್ಮಕ ಅನಂತಕ್ಕೂ, ಋಣಾತ್ಮಕ ಅನಂತಕ್ಕೂ ಇರುವ ವ್ಯತ್ಯಾಸ ಕಂಡು ಹಿಡಿದುಬಿಡುವ..:-D (ಜೀವನದಲ್ಲಿ ಒಂದೇ ಒಂದು ಸಲ ಆ ಲೋಟ ಎತ್ತಿ ತುಟಿ ಮೇಲೆ ಇಟ್ಟಿಲ್ಲ ಇಬ್ಬರೂ ಆದರೂ ಇಂತಹ ಮಾತುಗಳಿಗೇನೂ ಕಮ್ಮಿ ಇಲ್ಲ! :-D )
  ಜೀವನದಲ್ಲಿ ದ್ವಂದ್ವಗಳ ಪರಿಣಾಮಗಳನ್ನು ಅಳತೆಗೋಲಿಟ್ಟು ಅಳೆದ ಲೇಖನ.. ಪ್ರತಿಯೊಬ್ಬನ ಜೀವನದಲ್ಲೂ ಅನುಭವಕ್ಕೆ ಬಂದಿರಬಹುದಾದ ಅಂಶಗಳನ್ನು ಸಾಕ್ಷೀಕರಿಸಿರುವ ನಿನ್ನ ಜಾಣ್ಮೆ ಮೆಚ್ಚತಕ್ಕದ್ದು ಗಣಿ.. ಹಿಡಿಸಿತು..:)))

  ReplyDelete
  Replies
  1. ಸರಿಲೇ ತಮ್ಮ :))) ಆದ್ರೆ ಬಾಟಲ್ ಬೀರು , ರಮ್ಮು ಎಲ್ಲ ಅಲ್ಲ :))) ಒಂದು ಗ್ಲಾಸ್ಸು ದ್ರಾಕ್ಷಿ ರಸ ಅದರ ಕಿಕ್ಕು ಚೆನ್ನಾಗಿರುತ್ತೆ :)))) ಮತ್ತೆ ನಿನ್ನ ಮೆಚ್ಚುಗೆಯ ನುಡಿಗೆ ನಾ ಆಭಾರಿ :)))

   Delete