ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, August 5, 2015

ಉಪ್ಪು-(ಉಳಿ-ಕಾರ)


***********************************************************************************************

ಉಪ್ಪು ಉಳಿ ಕಾರ
ಮೂರಿಹುದು ಪಾಕದಲಿ
ಎಲ್ಲವೂ ನಿಂತಿಹವು ಕದನದೊಳು
ನಾ ಮೇಲು-ತಾ ಮೇಲು! ಎಂದು.
ಬಲಿಪಶುವು ಅತಿಥಿ
ಮೂರು ಮುಕ್ತಾಯವಂತೆ...
ರುಚಿಗೆ ರಮಿಸಿ ಅಸ್ತಿತ್ವಕೆ
ಬೆಲೆ ತೆತ್ತಬೇಕಂತೆ!
ಕಾರ ಗಂಡನಂತೆ,
ಹೆಚ್ಚಿದೆಡೆ ಎಲ್ಲಕಡೆ ಉರಿತ!
ಉಳಿ ಮಡದಿಯಂತೆ,
ಹೆಚ್ಚಿದೆಡೆ ಮನವು ಒಡೆತ!
ಉಪ್ಪು ಕೂಸಂತೆ.,
ಇಲ್ಲವಾದೆಡೆ ಬಂಜೆತನದ ಬಂಜರು
ಹೆಚ್ಚಾದೆಡೆ ಆಭಾಸ...
ಇರಲಿ ರುಚಿಗೆ ತಕ್ಕಷ್ಟು
ಇದೇ ಸಂಸಾರದ ಪಾಕಶಾಸ್ತ್ರ!


~ಜಿ.ಪಿ.ಗಣಿ~
***********************************************************************************************

No comments:

Post a Comment