ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, April 2, 2015

ಬಣ್ಣದ ಬದುಕು!!!

***********************************************************************************************
ತಿಳಿ ಕೋಮಲ ಶುಭ್ರ 
ನೀರ ಆತ್ಮ ದೊಳಿಹವು
ರಂಗು ರಂಗಿನ ಭಾವನೆಗಳು
ಒಮ್ಮೊಮ್ಮೆ ಕಡು ಕಪ್ಪು
ಭಾವನೆಗಳ ತೀವ್ರತೆಯಿಂದ!!
ಕಾಣಲಾಗದ ಬಿಂಬವದು
ಕಗ್ಗತ್ತಲೆಯ ಕವಚದಿಂದ!!
ಹರುಷದೋಕುಳಿಯು
ಭಾವನೆಗಳು
ನಿತ್ಯವೂ ಬದುಕುವ
ಜೀವದಾಸೆಯ ಉಳಿಸಿರೆ!!
ಬಣ್ಣವನೆರಚುವವನಿರುವಾಗ
ನಾವಾರು, ಇಲ್ಲಿ?
ಊಹಿಸಲು!!
ಅಳುವುದು...
ನಗುವುದು...
ನಮ್ಮ ಅರಿವಿಗಭೇದ್ಯವು!!!
ಬೆದಕಿದಷ್ಟು ಅತೀ ಆಳವು!
ಬಣ್ಣ ಬಣ್ಣಗಳ ನಡುವಿನ
ಮದುವೆಯ ಆಟ!
ಹೆರುವ ಕೂಸಿಗೆ
ಅಂತ್ಯವಿಲ್ಲದ ಕಾದಾಟ!
ಕೊನೆಗುಳಿವುದೊಂದೇ
ಇದ್ದರೂ ಇರದ ಹಾಗೆ
ಕದಕಿದೆಡೆ
ಅಲೆ ನಿಲ್ಲುವೆಡೆಗೆ...
ಆದಿ ಅಂತ್ಯವಿಲ್ಲದ ತಿಳಿ
ಸಾಗರವೀ ಬದುಕು...!!
@ಜಿ.ಪಿ.ಗಣಿ@
***********************************************************************************************

No comments:

Post a Comment