***********************************************************************************************
ಗತಿಯಿಲ್ಲದ ಮನವ
ಹಿಡಿತವಿಲ್ಲದ ನಲಿವ
ಹೊತ್ತು ತಂದೆ ನೀನು !
ಪ್ರತಿಯೊಂದು ನಿಮಿಷವೂ
ನಿನ್ನ ನಗುವ ಕಂಡೆ !
ಒಳಗಿನ ಮಗುವು ಅರಳಿ
ಕರಗಿತ್ತು ಎನ್ನ ಮನಸ್ಸೆಂಬ ಹೆಬ್ಬಂಡೆ !
ಅಂತರಂಗದಿ ಸುರಿಯುತಿದೆ ಸಂತಸದ ಜಡಿಮಳೆ
ಸೂರ್ಯನಂತೆ ನಿನ್ನ ಮೊಗವ ಕಾಣಲೆನೆಗೆ
ಕಾಮನಬಿಲ್ಲಂತೆ ಗರಿಗೆದರಿದವು
ಬಣ್ಣ ಬಣ್ಣದ ಆಸೆಗಳ ಸುರಿಮಳೆ !
ನಿನ್ನ ಪಿಸು ಮಾತು ಕೇಳುವಾಕ್ಷಣ ....
ಕಳೆದು ಹೋದೆ ನನ್ನೇ ನಾ !
ನೀ ಮೌನವಾದಾಗ ಹುಡುಕುತಿದ್ದೆ
ನಿನ್ನೊಳಗೆ ನನ್ನೇ ನಾ ! ನನ್ನೇ ನಾ !
~ಜಿ.ಪಿ.ಗಣಿ~
***********************************************************************************************
ಗತಿಯಿಲ್ಲದ ಮನವ
ಹಿಡಿತವಿಲ್ಲದ ನಲಿವ
ಹೊತ್ತು ತಂದೆ ನೀನು !
ಪ್ರತಿಯೊಂದು ನಿಮಿಷವೂ
ನಿನ್ನ ನಗುವ ಕಂಡೆ !
ಒಳಗಿನ ಮಗುವು ಅರಳಿ
ಕರಗಿತ್ತು ಎನ್ನ ಮನಸ್ಸೆಂಬ ಹೆಬ್ಬಂಡೆ !
ಅಂತರಂಗದಿ ಸುರಿಯುತಿದೆ ಸಂತಸದ ಜಡಿಮಳೆ
ಸೂರ್ಯನಂತೆ ನಿನ್ನ ಮೊಗವ ಕಾಣಲೆನೆಗೆ
ಕಾಮನಬಿಲ್ಲಂತೆ ಗರಿಗೆದರಿದವು
ಬಣ್ಣ ಬಣ್ಣದ ಆಸೆಗಳ ಸುರಿಮಳೆ !
ನಿನ್ನ ಪಿಸು ಮಾತು ಕೇಳುವಾಕ್ಷಣ ....
ಕಳೆದು ಹೋದೆ ನನ್ನೇ ನಾ !
ನೀ ಮೌನವಾದಾಗ ಹುಡುಕುತಿದ್ದೆ
ನಿನ್ನೊಳಗೆ ನನ್ನೇ ನಾ ! ನನ್ನೇ ನಾ !
~ಜಿ.ಪಿ.ಗಣಿ~
***********************************************************************************************
ಅಂತರ್ ಅನ್ವೇಷಕ ಕವನವಿದು.
ReplyDeletehttp://badari-poems.blogspot.in
ನಿನ್ನೊಳಗಿನ ಪದ್ಯ ಕಟ್ಟುವ ಕುಶಲತೆಯನ್ನು ನಾನಿಲ್ಲಿ ನೋಡುತ್ತಿದ್ದೇನೆ. ಚೆಂದದ ಕವನ ಗಣಿ. ನಿನ್ನ ಗದ್ಯಗಳನ್ನು ಚಪ್ಪರಿಸುತ್ತಿದ್ದ ನಾನು, ಪದ್ಯವನ್ನು ಆಸ್ವಾದಿಸಿಕೊಂಡೆ. ಒಬ್ಬ ಪ್ರೇಮಿಯೊಬ್ಬನ ಮನದೊಳಗಿನ ಭಾವಗಳನ್ನು ಅನುಭವಿಸಿ ಅರವಿದಂತಿದೆ :)
ReplyDelete