ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, April 15, 2013

ಸಮರದೋಳ್ ಇಚ್ಚಾಶಕ್ತಿಯ ಕೆಣಕಿ ಉಳಿದವರಿಲ್ಲ !!

***********************************************************************************************
ಆಗುವುದಿಲ್ಲವೆಂದು ಹಿಂದೆ ಹೋಗುವುದಿಲ್ಲ 
ಕಷ್ಟವೆಂದು ಸುಮ್ಮನೆ ಕೂರುವುದಿಲ್ಲ 
ಆದದ್ದು ಆಗಲಿ ಹೋದದ್ದು ಹೋಗಲಿ 
ಸಾರುವೆ ನಿನ್ನೆದುರು ಸಮರವ !
ತೋರುವೆ ನನ್ನಯ ಬಲವ !

ನಾಚಿ ನೀ ದೂರ ಓಡಬೇಕು !
ನನ್ನ ಒಂದೊಂದು ಬೆಳವಣಿಗೆಯ 
ಕಂಡು ನೀ ಹೆದರಿ ಮರೆಯಾಗಬೇಕು !

ನೋಡಿಯೇ ಬಿಡುವ ಬಾ ಚಿಂತೆಯೇ
ನೀನಾ ! ನಾನ !

~ ಜಿ.ಪಿ. ಗಣಿ ~

***********************************************************************************************

2 comments:

  1. ಕೆಣಕಿದವರಿಗೆ ಸರಿಯುತ್ತರಿಸೋ "ಸಮರದೋಳ್ ಇಚ್ಚಾಶಕ್ತಿಯ ಕೆಣಕಿ ಉಳಿದವರಿಲ್ಲ !!" ಎನ್ನುವ ಕವಿವಾಣಿ ನಮಗೂ ಸಂಕ್ರಮಿಸಲಿ...
    http://badari-poems.blogspot.in

    ReplyDelete
  2. ತುಂಬಾ ಅರ್ಥಗರ್ಭಿತವಾದ ರಚನೆ ಇದು.ಸಕಾರಾತ್ಮಕ ಚಿಂತನೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ಬದುಕಿನ ಪ್ರೀತಿಯನ್ನು ಮೆರೆಸುತ್ತದೆ.ಕಷ್ಟಗಳಿಗಂಜಿ ಪೇಲವಗೊಂಡರೆ ಯಶಸ್ಸು ತನ್ನರಸಿ ಬರುವುದುಂಟೇ? ಅಳುಕದೇ ಅಂಜದೇ ಗೆದ್ದೇ ಗೆಲ್ಲುವೆ ಒಂದು ದಿನ ಎಂಬ ಆದಮ್ಯವಾದ ವಿಶ್ವಾಸದಿಂದ ಮುನ್ನುಗ್ಗಿದಾಗಲೇ ಜಯದ ಮಾಲೆ ಕೊರಳಿಗೆ ಬೀಳುವುದು.ಭರವಸೆ ತುಂಬುವ ಇಂಥ ರಚನೆಗಳಿಗೆ ನಾನು ಮಾರುಹೋಗುತ್ತೇನೆ ಪ್ರೀತಿಯ ಗಣಿ.ಇಷ್ಟವಾಯಿತು.

    ReplyDelete