ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, March 10, 2015

ಅಸ್ತಿತ್ವ?
____
ಹುಟ್ಟುವಾಗ ಕರುಳ ಬಳ್ಳಿಯ ಕಿತ್ತು
ನೋವ ಮುದ್ರೆಯನು ಹೊಕ್ಕುಳಲಿ ಹೊತ್ತು
ನಿರಂತರ ಸಾಗಿದೆ ಈ ಬದುಕು!
ಬಿತ್ತುವ ಬೆಳೆಯು ಮಳೆಯ ಸೊತ್ತು
ಬೆಳೆದ ಫಸಲಿಗೆ ಮಧ್ಯವರ್ತಿಯ ತಾಕೀತು
ಬೆವರ ಹನಿಗೆ ಬೆಲೆಯಿಲ್ಲದೇ
ಉದರ ನಲುಗಿದೆ
ಮುದ್ರೆ ಅಳುತಿದೆ
ಮತ್ತೆ ಸೋತು ಸೋತು!!

ಬೆಳೆವ ಪೈರಿಗೆ ಗೊಬ್ಬರದ ಕೊರತೆ
ಉತ್ತುವ ಮಣ್ಣಿಗೆ ಕಳೆಯ ಒರತೆ
ಆಂತರ್ಯದ ಶಕ್ತಿಯು ಕುಂದಿಹುದು
ಆರದೋ ಅಸ್ತಿತ್ವದ ಬೇಗೆಯಿಂದ
ದುಡ್ಡಿನ ಮರಕಿಂದು ವಸಂತ ಕಾಲ
ತಿನ್ನುವ ಕೂಳಿಗೆ ಬರುತ್ತಿದೆ ಬರಗಾಲ

ಬಿತ್ತುವ ಭೂಮಿಯ ಸ್ವಾತಂತ್ರ್ಯವನು
ಉತ್ತುವ ರೈತನ ಹೃದಯವನು
ಕನಿಕರವಿಲ್ಲದೇ ಚರ್ಮವ ಸುಲಿದು
ಇಂಚಿಂಚು ಕೊಚ್ಚಿ ರಕ್ತವ ಹೀರುತಿಹರಿಲ್ಲಿ
ನರರಕ್ಕಸರು

ಆರದೋ ತೀಟೆಗೆ ಬಿತ್ತಿದ
ಬೀಜವಾಗಿ
ಬೆಳೆದು ಮರವಾಗಿ
ಅಳಿಯುವ ಬದುಕಿಗೆ
ಯಾಕಿಷ್ಟು ವ್ಯಾಮೋಹ?

~ಜಿ.ಪಿ.ಗಣಿ~

2 comments:

 1. ಅದೇ ನನ್ನದೂ ಪ್ರಶ್ನೆ! :-(
  ಬೇಡಿತ್ತು ಇಲ್ಲಿ ಜನನ, ಮಾಡದ ತಪ್ಪಿಗೆ ತಲೆ ದಂಡವಾಗುತ್ತ, ತಗ್ಗಿ ತಗ್ಗಿಯೇ ತೆಗ್ಗವಾಗಿದೆ ಬಾಳ್ಮೆ!
  ನೇಗಿಲ ಯೋಗಿಯು ಪಾಪ ಶಾಪಗ್ರಸ್ತ. ಮಂಡಿ ವರ್ತಕನವ ಅಭಿನವ ದೇವೇಂದ್ರ!

  ಥತ್... ಯಾರಿಗೆ ಬೇಕು ಈ ಲೋಕ?

  ReplyDelete
 2. vaasthavada chaaye.......... kelave saalugalalli kanna munde sulidaadithu

  ReplyDelete