ಕಣ್ಣ ಅಣೆಕಟ್ಟನೊಡೆದು ಬರುವ ದುಃಖದ ನೀರಿನಲಿ ನಿನ್ನ ಮೇಲಿನ ಪ್ರೀತಿಯ ಹೆಸರಿತ್ತು. ಆ ಹೆಸರಲಿ ಉಪ್ಪು ಇದೆಯೇ ಎಂಬ ಗುಮಾನಿಯಿಂದ ಸವೆದರೆ, ಅದೇಕೋ ಬಲು ಖಾರವಾಗಿತ್ತು,!!
Tuesday, March 10, 2015
ಅಸ್ತಿತ್ವ?
____
ಹುಟ್ಟುವಾಗ ಕರುಳ ಬಳ್ಳಿಯ ಕಿತ್ತು
ನೋವ ಮುದ್ರೆಯನು ಹೊಕ್ಕುಳಲಿ ಹೊತ್ತು
ನಿರಂತರ ಸಾಗಿದೆ ಈ ಬದುಕು!
ಬಿತ್ತುವ ಬೆಳೆಯು ಮಳೆಯ ಸೊತ್ತು
ಬೆಳೆದ ಫಸಲಿಗೆ ಮಧ್ಯವರ್ತಿಯ ತಾಕೀತು
ಬೆವರ ಹನಿಗೆ ಬೆಲೆಯಿಲ್ಲದೇ
ಉದರ ನಲುಗಿದೆ
ಮುದ್ರೆ ಅಳುತಿದೆ
ಮತ್ತೆ ಸೋತು ಸೋತು!!
ಬೆಳೆವ ಪೈರಿಗೆ ಗೊಬ್ಬರದ ಕೊರತೆ
ಉತ್ತುವ ಮಣ್ಣಿಗೆ ಕಳೆಯ ಒರತೆ
ಆಂತರ್ಯದ ಶಕ್ತಿಯು ಕುಂದಿಹುದು
ಆರದೋ ಅಸ್ತಿತ್ವದ ಬೇಗೆಯಿಂದ
ದುಡ್ಡಿನ ಮರಕಿಂದು ವಸಂತ ಕಾಲ
ತಿನ್ನುವ ಕೂಳಿಗೆ ಬರುತ್ತಿದೆ ಬರಗಾಲ
ಹುಳುಕು ಹಲ್ಲು!! _________ ಸಿಹಿಯೆಂದು ಸವಿನೆನಪಿನ ಚಾಕ್ಲೇಟು ಜಗಿದು-ಜಗಿದು ಹಲ್ಲು ಹುಳುಕಾಗಿ ನೋವು ಹೆಚ್ಚಾಗಿ ಅದೆಷ್ಟು ದಿನ ಬಳಲಿದೆನೋ... ಮತ್ತೆ ಆ ಸವಿನೆನಪಿನ ಚಾಕ್ಲೇಟನಗಿಯಲು ಹಲ್ಲೇ ಇಲ್ಲದಂತಾಯ್ತೆ!! ಅತಿಯಾದರೆಲ್ಲವೂ ಹುಳುಕೆ ??