ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, February 1, 2015

ಪ್ರೇಮ ಕೃಷಿ


ಎನ್ನೆದೆಯ ಹೊಲವು
ಪಾಳು ಬಿದ್ದಿತ್ತು!
ಪ್ರೀತಿಯ ನೇಗಿಲಲಿ
ಉಳುವವರಿಲ್ಲದೇ ...
ಬೆಳೆದ್ದಿದ್ದವು ಅದೆಷ್ಟೋ
ರೋಗದ ಗಿಡಗಳು
ಹಾಳ-ಹೆಸರಿಲ್ಲದೇ...
ನಿನ್ನಯ ಪ್ರೇಮದ ನೇಗಿಲ
ಹರಿತದಿಂದ
ಈ ಜಡ ಮನವು
ಸಡಿಲಗೊಂಡು
ನಿನ್ನಯ
ಮಮತೆಯ
ಮಳೆ ಹನಿಗಾಗಿ
ಕಾದು ಕುಳಿತಿಹುದು...
ಆವ ಸಸಿಯ
ಬೀಜವಿಹುದೋ ನಿನ್ನಾತ್ಮದಲಿ
ನಾನರಿಯೆನು...
ನನಗೊಂದು ಆಸೆಯಿಹುದು!!
ನೀ ತುಳಸಿಯಾಗಿ
ಜನ್ಮವನು ತಳೆದು
ಬೆಳೆದು ನಿಲ್ಲು
ಎನ್ನೊಡಲ ಕಣ ಕಣದೊಳಗೆ...
ಎನ್ನ ಚಿತ್ತಕ್ಕೆ ಹಾರವಾಗಿ
ಚಿತೆಗೆ ಧೂಪವಾಗಿ
ಪರಮಾತ್ಮ-ಹುತಾತ್ಮರ
ಕೊರಳೆದೆಯಲ್ಲಿ ಅನಂತವಾಗಿ...
~ಜಿ.ಪಿ.ಗಣಿ~

1 comment:

  1. ಬಹು ಉಪಯೋಗಿಯು ತುಳಸಿ. ಅದು ಹುಟ್ಟಿನಿಂದಲಿ ಸಾವಿನಾಚೆಗೂ ಬಳಸಬಹುದಾದ ಸೃಷ್ಟಿ.
    ಪ್ರೇಮ ಕೃಷಿಗಾಗಿ ತುಳಸಿಯನು ಆಯ್ದುಕೊಂಡ ತಮಗೆ ಶರಣು.

    ReplyDelete