ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, February 19, 2015

ನನ್ನ ಪ್ರೀತಿಯಲಿ
ನೀ ತಾವರೆಯಂತೆ
ನಾ ಕೆಸರಿನಂತೆ
ನನ್ನ-ನಿನ್ನ ನಡುವಿನಂತರ
ತಿಳಿ ನೀರು!
ನಿನ್ನಂದಕೆ ಮತ್ತಷ್ಟು
ಹಸಿರೆಲೆ ಸೀರೆಯ
ಹೊದಿಕೆಯನೊದಿಸಿ
ನಿನ್ನಯ ಉಸಿರಿನ ಬೇರನು
ಬಿಗಿಯಿಡಿದಿಡುವೆ
ನನ್ನೊಡಲ ಕಡಲೊಳಗೆ...
ನೀ ಯಾರದೋ ಮುಡಿಯನೇರಿದರೂ
ಮತ್ತೆ ಮತ್ತೆ ಚಿಗುರುವೆ
ಎನ್ನೊಡಲ ಕೆಸರಿನಿಂದ
ಅದರೊಳಗಿನ ನಿನ್ನಯ
ನೆನಪಿನ ಹಸಿರಿನಿಂದ..
ಪ್ರೀತಿಯು ಹೊರ ಸಿಗುವ
ಫಲ-ಪುಷ್ಪಗಳಲ್ಲಿಲ್ಲ
ಅದನೆತ್ತು ಹೊತ್ತ ಹೃದಯದ
ತಾಯ ಬೇರಿನಲಿಹುದು...
~ಜಿ.ಪಿ.ಗಣಿ

1 comment:

  1. ಮತ್ತದನ್ನು ಗುರುತಿಸಿ ಗೌರವಿಸಿದಾಗಲೇ ಹೆತ್ತ ಹಿಂಸೆಗೂ ಪೊರೆದ ಹೆಮ್ಮೆಗೂ ಸರಿಯಾದ ಬೆಲೆ ತೆತ್ತಂತೆ. ಋಣ ಕಳೆದಂತೆ...
    ಮಾತೃ ದೇವೋಭವ.

    ReplyDelete