***********************************************************************************************
ಇನ್ನಾದರೂ ನಿನ್ನುಸಿರಿಗೆ ಉಸಿರನು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು
ನಿರಂತರ ಗುಡುಗುವ ಹೃದಯವು
ಇತ್ತೀಚಿಗೆ ಕಂಪಿಸುತ್ತಿದೆ
ಭಾರವೆನಿಸುತಿದೆ
ಓಟದ ಆಟ ಸಾಕಾಗಿಹೋಗಿದೆ
ಕಾಣದ ಮಿಡಿತ ಮರುಗಿ ಕಂಬನಿಗರೆದು
ಸಾಂತ್ವನಕಾಗಿ ಹಂಬಲಿಸುತಿದೆ
ಮಿಡಿತಕ್ಕೆ ಹಿಡಿತವ ತರುವ
ವೈದ್ಯನ ಪೋಷಣೆ ಬೇಕಾಗಿದೆ
ಅಳಲು ತೋಡಿಕೊಳ್ಳಲು ತಾಯಿಯಂತಹ
ಮಮತೆಗಾಗಿ ಕಾಯುತ್ತಿದೆ
ಬದುಕ ಮುನ್ನಡೆಸಲು ತಂದೆಯಂತಹ
ಅಧಿಪತಿಗಾಗಿ ಹಪಹಪಿಸುತ್ತಿದೆ.
ಇನ್ನಾದರೂ ನಿನ್ನ ಬದುಕ ಬದುಕೆಂದು
ಸಾರಿ ಸಾರಿ ಚೀರುತ್ತಿದೆ
ಜೀವಕೆ ಜೀವವಾಗುವ ಹೊತ್ತಿಗೆ
ನಿರ್ಜೀವವಾಗುವ ಘಟ್ಟ
ನಾಲ್ಕು ಜನರು ಕಾಯುತ್ತಿರುವರು
ಹೊತ್ತೊಯ್ಯಲು ನಿನ್ನ ಚಟ್ಟ
ಇನ್ನಾದರೂ ನಿನ್ನುಸಿರಿಗೆ ಉಸಿರು ನೀ ಬೆರೆಸು
ನಿನ್ನ ದೇಹಾತ್ಮದ ಮುಕ್ತಿಯ ಇಲ್ಲೇ ಸದಾ ಹರಸು
ಮನಸಿನೊಳು ಬರುವುದು ಅರಿವಿನ ಸೊಗಸು
ಇದೇ ಸ್ವರ್ಗ!! ಇದೇ ಸ್ವರ್ಗ!!
~ಜಿ.ಪಿ.ಗಣಿ~
***********************************************************************************************
’ವೈದ್ಯನ ಪೋಷಣೆ ಬೇಕಾಗಿದೆ
ReplyDeleteಅಳಲು ತೋಡಿಕೊಳ್ಳಲು ತಾಯಿಯಂತಹ
ಮಮತೆಗಾಗಿ ಕಾಯುತ್ತಿದೆ
ಬದುಕ ಮುನ್ನಡೆಸಲು ತಂದೆಯಂತಹ
ಅಧಿಪತಿಗಾಗಿ ಹಪಹಪಿಸುತ್ತಿದೆ.’
ಎಂತಹ ಉತ್ತಮ ನಿರೀಕ್ಷೇ.