ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, February 20, 2013

ಅಂಧಕಾರ

***********************************************************************************************
ಸಿಡಿಲು-ಗುಡುಗು ಬಡಿಯುವ
ಮನದೊಳಗಿನ ನೋವೆಂಬ ಮೋಡಕೆ 
ಕೇವಲ ಕಣ್ಣೀರೆಂಬ ಮಳೆ ಸುರಿಸುವುದಷ್ಟೇ ಗೊತ್ತು !
ಆ ಮೋಡವೂ ಬತ್ತಿ ಹೋದೆಡೆ 
ಮನದೊಳಗಿನ ಅಳುಕ ಅರಿಯುವುದೆಂತೋ ?
ಮೋಡ ಬಿತ್ತನೆ ಮಾಡಿ 
ಮಳೆ ತರಿಸುವ ಸಾಹಸ ಎಲ್ಲಿಯವರೆಗೋ ?
ಕಣ್ಣಿಗೆ ಗೋಚರಿಸುವ 
ಭಾಷೆಯ ತಿಳಿಯದ ಮೂಢ ಮನವೇ 
ಕಾಣದ ನೋವನು ಹೇಗೆ ಅರಿಯುವೆ ?
ಮನುಷ್ಯ ರೂಪದ ಕ್ರೂರ ಮೃಗವೇ 
ಮನುಷ್ಯತ್ವವ ಮರೆತ ಮನುಷ್ಯನಾಗಿ 
ಎಲ್ಲಿಯತನಕ ಬದುಕುವೇ ?

~ಜಿ.ಪಿ.ಗಣಿ~
***********************************************************************************************

1 comment:

  1. ಹೊಗಳಲು ಪದಗಳನ್ನು ಹುಡುಕುತ್ತಿದ್ದೇನೆ, ಗಣೇಶೂ ಸಿಕ್ಕ ಒಡನೆಯೇ ಬಿಟ್ಟುತ್ತೇನೆ ಕಾಮೆಂಟು ಮಳೆ...
    http://www.badari-poems.blogspot.in/

    ReplyDelete