ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, April 20, 2012

ಸ್ನೇಹನಾ?=ಪ್ರೇಮನಾ? >ದ್ವಂದದಲಿ < ಬರೀ ನೋವೆನಾ?

***********************************************************************************************

ಕಾಣದ ಪ್ರೀತಿಯ ನಾ ಹುಡುಕ ಹೊರಟಿದ್ದೆ ,

ವಿಧಿಯ ಮಾಯೆಯೋ ನೀ ನನಗೆ ದೊರಕಿದ್ದೆ,

ಕಲಿಗಾಲದ ಮೇಘ-ಸಂದೇಶವ ಮೊಬೈಲ್ನಲ್ಲಿ ನಾ ಕಳುಹುಸಿದ್ದೆ,

ನಿನ್ನ ಪ್ರತ್ಯುತ್ತರ ಕಂಡು ಮನ ಕುಣಿದು ನನ್ನ ಬಯೋಡೇಟಾ ಬಿಚ್ಚಿಟ್ಟಿದ್ದೆ ,

ನಿನ್ನ ಸ್ನೇಹಕಾಗಿ ಹಂಬಲದಿ ನಿನ್ನ ಮನ್ನಣೆಗೆಂದು ಕಾದು ಕುಳಿತಿದ್ದೆ ,

ನೀನಿತ್ತ ಹಸಿರು ನಿಶಾನೆಯಿಂದ ಹರ್ಷೋದ್ಗಾರದಿ ಕುಣಿದು ನಲಿದಿದ್ದೆ ,

ಯಾರೇ ನೀ ಚೆಲುವೆ ಚಿತ್ರದ ಪರಿಯ ನೆನಪು ಮಾಡಿದ್ದೆ ,

ನನ್ನ ಪ್ರೀತಿಯ ಮಾತುಗಳಿಂದ ನಿನ್ನ ಆಕರ್ಷಿಸಿದ್ದೆ,

ಸ್ನೇಹದ ಸೆಲೆಯಲ್ಲಿ ನಿನ್ನ ನಾ ಬಂಧಿಸಿದ್ದೆ ,

ಸ್ನೇಹಮಯ ಪ್ರೀತಿಯ ಕಂಡು ನೀ ಮಾರುಹೋಗಿದ್ದೆ ,

ಒಮ್ಮೊಮ್ಮೆ ನೀ ಕೋಪಗೊಂಡಾಗ ತಾಯಂತೆ ನಿನ್ನ ಲಾಲಿಸಿದ್ದೆ , ಪಾಲಿಸಿದ್ದೆ ,

ಮತ್ಯಾವ  ಮಾಯಯೋ  ಏನೋ ನಾನಿನ್ನ ಪ್ರೇಮಿಸಲು ಶುರು ಮಾಡಿದ್ದೆ ,

ಸ್ನೇಹವೋ -ಪ್ರೇಮವೋ ನಾನರಿಯದೇ ನಿನ್ನ ಗುಂಗಲ್ಲಿ ಕಳೆದು ಹೋಗಿದ್ದೆ ,

ಓದುವ ಹವ್ಯಾಸ ನಾ ಬದಿಗಿತ್ತು ಉದಾಸೀನ ಮಾಡಿಬಿಟ್ಟಿದ್ದೆ ,

ನಿನ್ನ ಒಂದು ಸಂದೇಶದ ಬರುವಿಕೆಗೆ ಹತ್ತು ಸಂದೇಶವ ಕಳುಹಿಸುತಿದ್ದೆ ,

ಅದೇನೂ ಕಾಣೆ ನನ್ನ ಸಂದೇಶದ ಸಾಗರದಲ್ಲಿ ನಿನ್ನ ತೇಲಿಸಿದ್ದೆ ,

ತಾಯಿ-ತಂದೆ ಮಮತೆ ತಿಳಿಯದೆ ನಾ ಸೋಮಾರಿಯಾಗಿದ್ದೆ ,

ಅರಿವಿಲ್ಲದೆ ನಾ ತೋಡಿರುವ ಗುಂಡಿಗೆ ನಾನೆ ಬೀಳಲು ಹೊರಟಿದ್ದೆ ,

ಹೃದಯದ ನೆಂಟು ಕಂಡು ನನ್ನ ಕಾಣಬೇಕೆಂಬ ತವಕ ನೀ ಹೆಚ್ಚಿಸಿಕೊಂಡಿದ್ದೆ ,

ಸ್ನೇಹವ ಕಳೆದುಕೊಳ್ಳುವೆನೆಂಬ ಭೀತಿಯಿಂದ ಪ್ರೇಮವ ಮರೆಯಲು ನಾ ಯತ್ನಿಸಿದ್ದೆ ,

ನಾ ಹಾಕಿಕೊಂಡ ಸ್ನೇಹದ ಬಂಧದಿ ತಾಯಿಯಗುಣವನೇನೆಂದು ಅರಿತುಕೊಂಡಿದ್ದೆ ,

ತಂದೆಯ ಮೂಕವೇದನೆಯ ನಾ ಹರಗಿಸಿಕೊಂಡಿದ್ದೆ ,

ಓದುವುದರಲ್ಲಿ ಮುಂದಿದ್ದ ನಾನು ಕಾಣಲಾರದಷ್ಟು ಹಿಂದೆ ಸರಿದಿದ್ದೆ,

ಜೀವನದ ಪ್ರಮುಖ ಪಾಠವ ನೀ ಕಲಿಸಿಕೊಟ್ಟಿದ್ದೆ ,

ನಾನು ನೊಂದರೂ ಪರರ ನೋಯಿಸದ ಸಹೃದಯಿಯಾಗಲು ನಾ ತೀರ್ಮಾನಿಸಿದ್ದೆ

ಮೌನಿಯಾಗದೆ ನನಗೆ ಬೇರೆ ದಾರಿಯಿಲ್ಲದಂತೆ ಮಾಡಿದ್ದೆ ,

ನಿನ್ನ ಸ್ನೇಹವಲ್ಲದೆ ಮತ್ತೇನು ಬೇಡವೆಂದು ನಿರ್ಧರಿಸಿದ್ದೆ ,

ಆ ದ್ವಂದದಿಂದ ಹೊರಬರುವಷ್ಟರಲಿ ನೀ ನನ್ನ ಸ್ನೇಹವ ಬಿಟ್ಟು ಮೂಕವಾಗಿಬಿಟ್ಟಿದ್ದೆ,

ಮತ್ತೆ ನೋವೆ ಎಂದು ನನ್ನ ಮನದಲ್ಲಿ ಮರುಕ ಹುಟ್ಟಿಸಿ ನೀ ದೂರವಾಗಿದ್ದೆ.


                                                    -ಗಣಿ


ಗಂಡು-ಹೆಣ್ಣ ನಡುವೆ ಸ್ನೇಹವು ಸದಾಕಾಲವಿರುವುದಿಲ್ಲವೇ , ನೀ ನೋಡುವ ಪರಿಯ ಒಮ್ಮೆ ತಿದ್ದಿ ಮತ್ತೆ ನನ್ನ ನೋಡುವ ಪ್ರಯತ್ನ ಮಾಡು, ಸ್ನೇಹವೇನೆಂದು ನಾ ಅರಿತೆ , ಮೋಹಕ್ಕೆ ಆಹ್ವಾನವಿತ್ತು ಪ್ರೇಮದ ಬಂಧನಕ್ಕೆ ಒಳಗಾದೆ ಈ ಹುಚ್ಚು ಪ್ರೀತಿಯೇ ಹೀಗೆ , ಸಿಕ್ಕಷ್ಟು ,, ಮತ್ತಷ್ಟು ,ಮಗದಷ್ಟು ಎನ್ನುವ ಜಾಯಮಾನವ ಹೊಂದಿರುವುದು . ಗೆಳೆತನ ಗಂಡು-ಗಂಡುವಿನ ನಡುವೆ ಪ್ರಭಲವಾಗಿರದೆ , ಗಂಡು-ಹೆಣ್ಣಿನಲ್ಲೂ ಅಪ್ರತಿಮವಾಗಿರುತ್ತದೆಯಂದು ನಿರೂಪಿಸುವ ಕಾರ್ಯದಲಿ ತೊಡಗುವಂತೆ ನನ್ನ ನಾ ಬದಲಿಸಿಕೊಂಡೆ.


ಬರೀ ಸುತ್ತಾಡಿಸಿ , ಹೊಗಳಿ , ನಿನ್ನ ವೈಯಾರಕೆ ಮಾರು ಹೋಗುವ ದಾಸ ನಾನಲ್ಲ , ನನಗೆ ಬೇಕಾದ ಸ್ನೇಹವು ಅದಲ್ಲ. ಕಣ್ಣಿಗೆ ಕಾಣುವ ಶಾರೀರವು ಬರೀ ಆಕರ್ಷಣೆಗಷ್ಟೇ ಹೊರತು ಮನಸ್ಸಿನ ಹೊಂದಾಣಿಕೆಗಲ್ಲ. ಹಾಗಾದರೆ ಅದು ಸ್ನೇಹವೋ- ಮೋಹವೋ  ನೀನೆ ನಿರ್ಧರಿಸು. ನಿಷ್ಕಲ್ಮಶ ಪ್ರೀತಿಯು ಈ ಜಗದಲ್ಲಿ ಇನ್ನು ಉಳಿದಿದೆಯಲ್ಲ ಅದ ನೀನೇಕೆ ತಿಳಿಯುತ್ತಿಲ್ಲ!


ಸ್ನೇಹನಾ?=ಪ್ರೇಮನಾ? >ದ್ವಂದದಲಿ < ಬರೀ ನೋವೆನಾ?
***********************************************************************************************

No comments:

Post a Comment