ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, April 20, 2012

ಮಧುರವಾದ ಮುಸ್ಸಂಜೆ ಕಾರ್ಮೋಡದ ಸಿಡಿಲಿಗೆ

***********************************************************************************************

ಆ ಒಂದು ಮುಸ್ಸಂಜೆಯಲಿ,
ತಂಪಾದ ಗಾಳಿಯಲಿ
ಜಿನುಗುತಿರುವ ಚಿಟಪಟ ಮಳೆಯಲಿ
ನನ್ನ ಪ್ರೇಮವು
ನನಗೆ ಸಿಕ್ಕ ಹರುಷದಲಿ
ನಾ ಮುಳುಗಿ ಹೋಗಿದ್ದೆ
ನನ್ನ ಪ್ರೀತಿಯ ಒಡನಾಟದಲಿ!

ಓ ಪ್ರೀತಿಯೇ ನೀನೆಷ್ಟು ಸುಂದರ

ಮರು ಮುಸ್ಸಂಜೆಯಲಿ ಮತ್ತೆ
ಸಾಗಿತ್ತು ನಮ್ಮಿಬ್ಬರ ಪ್ರೀತಿಯ ಒಡನಾಟ
ಅದು ಹಸಿದಿದ್ದ ಜನರ
ಬಾಯಿಗೆ ಆಗಿತ್ತು ಭೋಜನ ಕೂಟ
ನಮಗೆ ತಿಳಿಯದೆ ಜನರು
ನಡೆಸಿದ್ದರು ನಮ್ಮ ಜೀವನದಲ್ಲಿ ದೊಂಬರಾಟ
ನನಗರಿವಾಯಿತು ನಮ್ಮ ಪ್ರೀತಿಗೊಂದು
ದಿನ ಬೀಳುವುದು ಬಗುನೀ ಗೂಟ

ಓ ಪ್ರೀತಿಯೇ ನೀನೆಷ್ಟು ನಟಭಯಂಕರ

ಅದೇ ಆ ಮುಸ್ಸಂಜೆ
ನಾ ಹೊರಟಿದ್ದೆ ಎನ್ನ
ಪ್ರೇಯಸಿಯ ಕಾಣಲೆಂದು
ನನಗರಿಯದೆ ಪ್ರೇಯಸಿಯ ಅಣ್ಣನ
ಆಗಮನವಾಗಿತ್ತು ನನಗೆ
ಎಚ್ಚರಿಕೆಯ ಘಂಟೆ ಭಾರಿಸಲೆಂದು
ನಾನೆಂದೆ ! ನನಗೆ ಯಾವ
ಭಯವೂ ಇಲ್ಲವೆಂದು
ನಾ ಕೆಚ್ಚೆದೆಯ ಭಂಟನೆಂದು!

ಓ ಪ್ರೀತಿಯೇ ನೀನೆಷ್ಟು ಅಭಯಂಕರ
ಅದೊಂದು ಕಾಡಿದ ಮುಸ್ಸಂಜೆ ,
ನನ್ನ ನಾ ಕಳೆದುಹೋದೆ ಮರುಗುತ
ನಮ್ಮ ಪ್ರೇಮದ ಕೊಂಡಿಯ ಅಲುಗಾಡಿಸಿತ್ತು
ಜಾತಿಯೆಂಬ ಪಾರಂಗತ ,
ನಿನ್ನ ಪರಿವಾರ ನಿನ್ನ ಮಾಡಿತ್ತು ಭೂಗತ
ನಿನ್ನ ಕಳೆದುಕೊಂಡು ನಾನು ಅಸ್ತಂಗತ
ಓ ಪ್ರೀತಿಯೇ ನೀನೆಷ್ಟು ಮಾಯಾಂಕುರ

ಮತ್ತದೇ ಮುಸ್ಸಂಜೆ
ನಿನ್ನ ಕಳೆದುಕೊಂಡ ಒಂದು
ವರುಷದ ಮರುಕದಲಿ
ನನ್ನ ಮೈಯನು ಒಡ್ಡಿದೆ
ಭೋರ್ಗರೆವ ಆ ಮಳೆಯಲಿ
ಮತ್ತೆ ನನ್ನ ಮನವು ಮುಳುಗಿತು
ನಿನ್ನ ಮಾಸದ ಪ್ರೀತಿಯಲಿ
ಹೊರಹೊಮ್ಮಿತು ಪ್ರೇಮದ ಹನಿಗಳು
ನನ್ನ ಕಂಗಳಲಿ

ಓ ಪ್ರೀತಿಯೇ ನೀನೆಷ್ಟು ದುಃಖಕರ

ಅದು ಕೊನೆಯ ಮುಸ್ಸಂಜೆ
ನಾ ಚೀರಿದೆ, ಓ ಪ್ರೀತಿಯೇ
ನಿನಗೆ ಉಳಿಗಾಲವಿಲ್ಲವೆಂದು,
ಭುವಿಗೆ ರೋಷದಿ ಗುದ್ದಿದೆ,
ಪ್ರೇಯಸಿ , ನಿನ್ನ ಮರೆಯಲಾಗದೆಂದು!
ಆಗಸದಿ ಮೋಡವು ಗುಡುಗಿತು
ನೀ ನನಗೆ ಸಿಗಲಿಲ್ಲವೆಂದು ,
ನನ್ನ ನೋವಿನ ಆಕ್ರನಾದ ಮುಗಿಲು
ಮುಟ್ಟುತ ಹೇಳಿತು ಜಗದಲಿ
ಜಾತಿಯೇ ಇರಬಾರದಾಗಿತ್ತೆಂದು,
ಕಾರ್ಮೋಡದ ಸಿಡಿಲಿಗೆ ನನ್ನ
ಪ್ರಾಣಪಕ್ಷಿ ಹಾರಿ ಬರುತಿದೆ
ನಿನ್ನ ಸೇರಲೆಂದು!

ಓ ಪ್ರೀತಿಯೇ ನೀನೆಷ್ಟು ಕ್ರೂರಾಂಕುರ


-@(-ಗಣಿ -)@-

ಇದು ಕಥೆ-ಕಾವ್ಯವಾಣಿಗೆ ಸೇರದ ಒಂದು ಸಣ್ಣ ಕಾಲ್ಪನಿಕ ಹಾಗೂ ಭಾವುಕತೆಗೆ ಒತ್ತು ನೀಡಿ ಬರೆದಿರುವ ಸಾಕ್ಸ್ಯಚಿತ್ರ . ಪ್ರೀತಿಯ ಅಮಲಿನಲ್ಲಿ ಸಿಕ್ಕಿ ಪ್ರೀತಿಯಿಂದ ಲೋಕವನ್ನು ಮರೆತವನು ಕೊನೆಗೆ ವಿರಹಿಯಾದ ಪ್ರಿಯಕರನ ಗೋಳಿನ ವ್ಯಥೆ , ಪ್ರೀತಿಯ ಧಕ್ಕಿಸಿಕೊಳ್ಳಲಾಗದೆ ಜೀವನದುದ್ದಕ್ಕೂ ಮರುಗಿ ಪ್ರೀತಿಗಾಗಿ ಪ್ರಾಣ ಕಳೆದುಕೊಳ್ಳುವವರ , ಹತಾಷೆಯಿಂದು ಬೆಂದು ಬೆಂಗಾಡಿನ ಹಾದಿ ಹಿಡಿಯುವವರ , ಕಾದ ಎಣ್ಣೆಯಲಿ ಶರೀರವ ಅದ್ದಿದಾಗ ಆಗುವ ಸಂಕಟದಂತೆ ,ಪ್ರೀತಿಯ ನೋವಿನಲಿ ಮುಳುಗಿ ಅನುಭವಿಸುವ ಆ ಗೋಳಾಟವನ್ನು ಕಂಡು ಕೇಳಿರಬಹುದು . ಮನುಕುಲಕ್ಕಂಟಿರುವ ಈ ಜಾತೀಯತೆ ನಿರ್ಮೂಲನೆ ಮಾಡಿ ಲೋಕದಲ್ಲಿರುವುದೆರೆಡೇ ಜಾತಿ ಗಂಡು-ಹೆಣ್ಣು ಎಂಬುದು . ನಿಷಲ್ಮಶ ಪ್ರೀತಿಗೆ ಮುನ್ನುಡಿ ಬರೆದು ಅದಕ್ಕೊಂದು ಬುನಾದಿಯ ಹಾಕೋಣ .

***********************************************************************************************

No comments:

Post a Comment