ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, March 6, 2012

ಅಮ್ಮ ( ಅನಂತ ಮಮತೆ )

***********************************************************************************************
ಈ ಪ್ರಯತ್ನ ನನ್ನ ಜನುಮದಾತೆಯಿಂದಲೇ ಪ್ರಾರಂಭಿಸಬೇಕೆಂಬ ಹುಚ್ಚು ಬಯಕೆ. ಆಕೆಯ ಅನಂತಾನಂತ ಮಮತೆಯಲಿ ಬೆಂದು , ಕರಗಿ ನೀರಾಗಿ , ಕಣ್ಣೀರ ಧಾರೆಯ ಹರಿಸಿ , ಆನಂದವ ಪಟ್ಟವನು ನಾನು.ನೋವುಗಳಿಂದ ಹೊರಬರಲು ಪಟ್ಟ ಹರಸಾಹಸದ ಒಂದು ಸಣ್ಣ ತುಣುಕು ಈ ಕವಿತೆ.ಅಮ್ಮ ಎಂಬ ಹೆಸರಿನಲ್ಲೇ ಇರುವ ಆ ಎರಡಕ್ಷರದ ವಿಸ್ತರಣೆಯೇ ನಾನಿಟ್ಟಿರುವ ಶೀರ್ಷಿಕೆ "ಅನಂತ ಮಮತೆ" :


ನಿನ್ನ ಆಸರೆಯಲ್ಲಿ ಹುದುಗಿ
ಕುಳಿತ ಪುಟ್ಟ ಕಂದ ನಾನು!
ನಿನ್ನ ನೋವಿನಲಿ ನನ್ನ ನಲಿಸಿದ
ಮಹಾನ್ ಸಾದ್ವಿ ನೀನು !
ಪುಟ್ಟ ಶರೀರವನಿತ್ತೆ
ನಿನ್ನ ನೆತ್ತರ ಕೊಟ್ಟೆ
ಬೇಡವೆಂದರೂ ಮಮತೆಯ ಸೆಲೆಯಲ್ಲಿ
ಎನ್ನ ಬಂದಿಸಿ ಪ್ರೀತಿಯನಿತ್ತೆ !
ಅಮ್ಮ ನಿನಗೆ ನೀನೇ ಸಾಟಿ !!


ಪ್ರೀತಿಯ ಸೆಲೆಯಲ್ಲಿ ನಾ ಬೆಂದು
ಬಸವಳಿದೆ , ತಿಳಿಯದೆ ನಾ ಸೋಮಾರಿಯಾದೆ !
ಮರೆತು ಮತ್ತೆಲ್ಲೋ ಪ್ರೀತಿಯ ಬಲೆಯ ಬೀಸಲು ಹೋದೆ
ಬಲೆಗೆ ಪ್ರೀತಿ ಸಿಗದೇ ನಾನೇ ಸಿಲುಕಿ
ಮರುಗಿ , ಕಂಗಾಲಾಗಿ ಹೋದೆ !
ಅದೆಲ್ಲೋ ಕೂಗಿತು ನಿನ್ನ ಕರುಳಿನ ಕೂಗು
ಮತ್ತೆ ನಾನಾದೆ ನಿನ್ನ ಪ್ರೀತಿಯ ಮಗು
ಆ ಬಲೆಗೆ ನಾನೆಂದೆ ನೀ ಎನ್ನ ಬಿಟ್ಟು ತೊಲಗು!
ಅಮ್ಮ ನಿನಗೆ ನೀನೇ ಸಾಟಿ !!


ಸಾಯುತಿದ್ದವನ ನೀ ಪಾರುಮಾಡಿಬಿಟ್ಟೆ
ಬದುಕುವ ಹಂಬಲ ನೀ ಹೆಚ್ಚಿಸಿಕೊಟ್ಟೆ
ಕಾಣದ ದಾರಿಯ ನೀ ತೋರಿಕೊಟ್ಟೆ
ನಿನ್ನ ಪ್ರೀತಿಯ ಮಮತೆಯಲಿ
ನನ್ನ ನಾ ಮರೆತುಬಿಟ್ಟೆ
ನನಗಾಗಿ ನಿನ್ನ ಉಸಿರು ಬಿಗಿದಿಟ್ಟೆ
ನನ್ನ ಆಶಾಕಿರಣದ ಜೀವನದ
ಜ್ಯೋತಿಯ ನೀ ಹೊತ್ತಿಸಿಬಿಟ್ಟೆ
ಅಮ್ಮ ನಿನಗೆ ನೀನೇ ಸಾಟಿ !!


ನನಗಾಗಿ ಎಲ್ಲ ನಿನಗೇನೂ ಇಲ್ಲ
ಹಗಲಲ್ಲ , ಇರುಳಲ್ಲ , ನಿನ್ನ ಮಮತೆಗೆ
ನನ್ನ ಕರುಳು ಹಿಗ್ಗಿ ಹೋಯಿತಲ್ಲ
ನಿನ್ನ ಜೀವವ ವತ್ತೆ ಇಟ್ಟೆ, ನಾ ಹೊರ
ಬರಲು , ನೀ ಅತ್ತು ನುಡಿದೆ
ಈ ಜೀವವೇ ನಿನಗಿರಲು
ಮರುಗಿದೆ ಈ ಎನ್ನ ಒಡಲು
ನನ್ನ ನೆತ್ತರಲ್ಲಿ ಬಂತು ನೀನಿತ್ತ ಹಾಲ್ಗಡಲು
ಅಮ್ಮ ನಿನಗೆ ನೀನೇ ಸಾಟಿ !!

-@(-ಗಣಿ -)@-

ಅಮ್ಮನ ಮಮತೆ ನಾಲ್ಕು ಸಾಲುಗಲ್ಲಿ ವರ್ಣಿಸಲು ಅಸಾಧ್ಯ , ಆದರೆ ಇಲ್ಲಿಯವರೆಗಿನ ನನ್ನ ಬದುಕಿನ ಅನುಭವವ ಹೇಳುವ ಒಂದು ಪ್ರಯತ್ನ ಅಷ್ಟೇ.
***********************************************************************************************

2 comments:

 1. ಬ್ಲಾಗಂಗಳಕ್ಕೆ ನೀನು ಕಾಲಿಟ್ಟಿದ್ದು ಕಂಡು ಸಂತಸವಾಯ್ತು ಗಣೀ..:))) ಬರಹಗಾರರಿಗೆ ತಾಯಿ, ಪ್ರೀತಿ, ನಿಸರ್ಗ ಮತ್ತು ಹಸಿವುಗಳು ಯಥೇಚ್ಚವಾಗಿ ಸರಕನ್ನೊದಗಿಸುತ್ತವೆ.. ಅಂತಹದ್ದೇ ಒಂದು ಪರಿಣಾಮಕಾರಿ ವಸ್ತುವಿನ ಹಿಂದೆ ಬಿದ್ದು ಭಾವಗಳನ್ನು ಅನುಭವದಲ್ಲಿ ಅದ್ದಿ ತೆಗೆದು ಚಿತ್ತಾರ ಬರೆದ ಪರಿ ಚೆನ್ನಾಗಿ ಮೂಡಿ ಬಂದಿದೆ.. ಆದರೆ ಪ್ರೀತಿಯಿಂದ ಒಂದು ಸಲಹೆ ಕವಿತೆಯಲ್ಲಿ ಭಾವಗಳನ್ನು ತೆರೆದಿಟ್ಟಷ್ಟೇ ಸರಾಗವಾಗಿ ಕವಿತೆ ಹರಿಯಬೇಕು ಎಂದರೆ ಲಯ ಕೂರಬೇಕು.. ಕೆಲವೊಂದು ಕಡೆ ಕವಿತೆ ವ್ಯಾಚ್ಯಾರ್ಥವಾಯ್ತೇನೋ ಎನಿಸುತ್ತದೆ..
  ಉದಾಹರಣೆಗೆ: ಸಾಯುವ ಬಯಕೆ ಬದಿಗಿತ್ತಿಸಿಬಿಟ್ಟೆ
  ಬದುಕುವ ಹಂಬಲ ನೀ ಹೆಚ್ಚಿಸಿಕೊಟ್ಟೆ
  ಈ ಸಾಲುಗಳಲ್ಲಿ ಬದಿಗಿತ್ತಿಸಿಟ್ಟೆ ಎಂಬ ಪದದ ಪ್ರಯೋಗ ಸರಿಯಾದುದಲ್ಲ.. ಬದಿಗೆ ಸರಿಸಿಟ್ಟೆ ಎಂಬ ಪದ ಪ್ರಯೋಗ ಲಯಕ್ಕೆ ಧಕ್ಕೆ ತರುತ್ತದೆ.. ಕಾವ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿದ್ದರೆ ಈ ಸಲಹೆಗಳ ಬಗ್ಗೆ ಗಮನ ಹರಿಸು, ಇಲ್ಲವೇ ಒಮ್ಮೆ ನಕ್ಕು ಸುಮ್ಮನಾಗಿಬಿಡು..;-)

  ReplyDelete
 2. ಅರ್ಥಬದ್ಧ ಸಲಹೆ ಪುಟ್ಟ , ಹೃದಯಪೂರ್ವಕ ಧನ್ಯವಾದಗಳು. ಕಿರಿಯವ ಹೇಳಿದನೆಂದು ವಾದಿಸುವ ಜಾಯಮಾನವನಲ್ಲ ನಂದು , ಕಿರಿಯರಾಗಲಿ -ಹಿರಿಯರಾಗಲಿ , ಕೊಡುವ ಒಂದೊಂದು ಮಾರ್ಗದರ್ಶನದಲ್ಲೂ ಒಳಿತಿರುತ್ತದೆ , ಅದನ್ನು ವಿಮರ್ಶಿಸುವ ತಾಳ್ಮೆ ನಮ್ಮದಾಗಬೇಕು :)

  ReplyDelete