ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, December 20, 2015

ಮುಂಗುರುಳ ಮೌನ!


***********************************************************************************************
ಎಲ್ಲಿದ್ದೆಯೋ ಓ ಒಲವೆ
ಹೆಂಗರುಳನೊಲಿಸಿದೆ
ಮನದ ಹೆಬ್ಬಾಗಿಲಲಿ
ನಿನ್ನಯ ಮುಂಗುರುಳೆ ತೋರಣ
ಹೃದಯಂಗಳದಿ ಮಗುವಂತೆ
ಆಡುವಾ ನಿನ್ನಯ ಮುದ್ದಾದ
ಮೊಗಕೆ ಏನೆಂದು ಹೆಸರಿಡಲಿ...
ಭಾವನೆಯ ಸಾಗರದಲೆಗಳು
ಅದೆಷ್ಟು ಎತ್ತರಕೆ ಜಿಗಿದಿಹವೋ...
ಪೊರೆ ಕಳಚಿ ಹೊರ ಬರುವ
ಚಿಟ್ಟೆಯಂತೆ ಜೀವನೋತ್ಸಾಹ
ನಿನ್ನೊಂದೊಂದು ಪಟಗಳಲೂ!!!


~ಜಿ.ಪಿ.ಗಣಿ~
***********************************************************************************************

1 comment: