______________
ಮಲಗಿರುವ ಅದೆಷ್ಟೋ ಕನಸಿನ
ಬಾವಲಿಗಳಿಗೆ ಕತ್ತಲಲಿ ಅರುಚಬೇಕಿದೆ
ಭಯದಿ ಅವಿತುಕೊಳ್ಳುವ ಆಮೆಯಂತಹ
ಮನಕೆ ಧೈರ್ಯ ತುಂಬಬೇಕಿದೆ
ಗೂಬೆಯಂತಹ ಸೋಮಾರಿ ದೇಹಕೆ
ಬೇತಾಳನ ಕಾಟ ಬೇಕಿದೆ
ಬಂಧಿಸಿಟ್ಟ ಉಸಿರ ಹಕ್ಕಿಗೆ
ಗರಿಬಿಚ್ಚಿ ಹಾರಬೇಕೆನಿಸಿದೆ
ನೆನ್ನೆ ನಾಳೆಗಳ ತೆವಲಿಗೆ
ಇಂದು ನಾಂದಿ ಹಾಡಬೇಕಿದೆ
ಸುತ್ತಲ ಜಗದ ತಪ್ಪಿಗೆ ಊಸರವಳ್ಳಿಯಾಗದೆ
ಮಧುರ ರಸವ ಹೀರಿ ಪತಂಗವಾಗಬೇಕಿದೆ
ಏನಾದರಾಗಲೀ ನಾನಿನ್ನೂ ಮಾಗಬೇಕಿದೆ!!
~ ಜಿ.ಪಿ.ಗಣಿ ~
No comments:
Post a Comment