***********************************************************************************************
ಓ ಮಾಯೆಯೇ
ದೂರ ಹೋಗೆಂದರೂ
ಸನಿಹ ಬಂದೇಕೆ ಕಾಡುವೆ !
ಬೇಡವೆನ್ನುವ ಆಸೆಯ ಬೇಕೆಂದು
ಮನವನೇಕೆ ಕದಡುವೆ !
ಆತ್ಮಕೆ ಸಲ್ಲದ್ದು ; ದೇಹಕೆ ಸಲ್ಲುವುದು
ದೇಹಕೆ ಸಲ್ಲದ್ದು ; ಆತ್ಮಕೆ ಸಲ್ಲುವುದು
ಈ ದೇಹಾತ್ಮದ ತುಮುಲಗಳಿಗೆ
ಬಲಿಯಾಗಿ ಮರುಗುತಿರುವ
ಎನ್ನ ಜೀವದ ಸಂಕಟವನೇನೆಂದು ಅರುಹಲಿ ನಾನು !
ಸಂಕಟವೆಂಬ ಸಾಗರದ ಅಗಲವ
ತಿಳಿಯಲೊರಟಿಹೆನು... ನಾನು!
ಅಳೆಯಲೊರಡುತ್ತಲೇ ಮನಕೇಕೋ
ಜೀವನ ಸಾಕೆನಿಸುವಷ್ಟು ಬೇಸರ !
ಭಾವುಕತೆಯೆಂಬ ಅಲೆಯ ಆರ್ಭಟಕೆ
ಪ್ರಶ್ನೆಗಳು ಏಳುತ್ತಿವೆ ಸರಸರ !
ಮನಸ್ಸಿಗೆ ಎಲ್ಲದಕೂ
ಉತ್ತರ ಸಿಗಬೇಕೆಂಬ ಅವಸರ !
ಆ ಅವಸರದಿ ಆದ ಅವಘಡವ
ಕಂಡೆನಿಸಿತು, ಬದುಕೊಂದು
ಮೌಡ್ಯದೊಳಗಿನ ಮರ್ಮ !
ತಿಳಿಯಿತದುವೆ
ಭೇದಿಸಲಾಗದ ಕರ್ಮ !
ಈ ಅನಂತ ಬದುಕಿನ ಅನಂತ
ತೊಳಲಾಟದಿ ಏನನ್ನೂ ಅರ್ಥೈಸಿಕೊಳ್ಳಲಾಗದ
ಜೀವವಿದ್ದರೇನು !! ಸತ್ತರೇನು !!
~ಜಿ.ಪಿ.ಗಣಿ~
ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬದುಕನ್ನು ಸೂಕ್ಷ್ಮವಾಗಿ ಕಂಡು ಬಂದವರೇ ... ಆ ಸೂಕ್ಷ್ಮ ಸಮಯದಲ್ಲಿ ನಮ್ಮ ಆತ್ಮಕ್ಕೆ- ದೇಹ, ದೇಹಕ್ಕೆ - ಆತ್ಮ, ಒಟ್ಟಾರೆ ದೇಹಾತ್ಮದ ಜೀವಕ್ಕೆ ನಾವು ಹತ್ತಿರವಾಗುವ ಹುಮ್ಮಸ್ಸು ಬರುತ್ತದೆ ಹಾಗೆಯೇ ಬದುಕಬೇಕೆನ್ನುವ ತೇಜಸ್ಸನ್ನು ಕಳೆದುಕೊಳ್ಳುವ ನಿರ್ಧಾರವೂ ಬರಬಹುದು. ಒಟ್ಟಿನಲ್ಲಿ ನಮ್ಮ ಇಚ್ಚಾಶಕ್ತಿಯ ಮೇಲೆ ನಮ್ಮ ಬದುಕು ನಿಂತಿದೆ. ಅಂತಹ ನಮ್ಮ ಇಚ್ಚಾಶಕ್ತಿಯನ್ನು ಸದಾ ಕಾಲ ಸುಬಧ್ರವಾಗಿ ಇರಿಸಿಕೊಳ್ಳೋಣ... ಬದುಕು ಇರುವತನಕ ಎದೆಗುಂದದೆ ಬದುಕೋಣ.
"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"
***********************************************************************************************
ಅಬ್ಬ ಗೆಳೆಯ ತುಂಬಾ ಚೆನ್ನಾಗಿದೆ!
ReplyDelete