ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, January 21, 2015

High BP

___
ದಿನವೂ ಮಿಡಿಯುವ
ಎನ್ನಂತರಗಂಗೆಯೊಳಗಿನ ಸದ್ದನು 
ನಾನಿಂದಿನವರೆಗೂ ಕೇಳದಾಗಿದ್ದೆ!!
ನಿನ್ನ ಸೆರೆಹಿಡಿದ ಕಣ್ಣ ಮಸೂರವು
ಎದೆಯೊಳಗಿನ ಒಂದೊಂದು
ಬಡಿತವನೂ ಕೇಳಲು
ಲಂಚವನು ಬೇಡುತ್ತಿವೆ
ಲಂಚವ ಭರಿಸಲು
ಕಲ್ಪನೆಯ ಸಮಯವನು
ಲೂಟಿ ಹೊಡೆಯುತಿರುವೆ
ನಿನ್ನಾವರಿಸಲಿರುವ ತುಡಿತಕ್ಕಾಗಿ!!

Tuesday, January 13, 2015

ಸ್ವಾಮಿ ವಿವೇಕಾನಂದ

ಜಗದಿ ಆಧ್ಯಾತ್ಮದ ಹಸಿವನ್ ಹೊತ್ತಿಸಿ
ಸಕಲ ಜೀವರಾಶಿಯೊಳಗನು ದಿಟ್ಟಿಸಿ
ಪರದೇಶವ ಸುತ್ತಿ ಸುತ್ತಿ
ಎಲ್ಲರ ಮತವೊಂದೇ,
ಎಲ್ಲರ ಧರ್ಮವೊಂದೆಂದು
ಹೇಳಿದರು ತಮ್ಮ ಭಾಷಣದಿ
ಒತ್ತಿ ಒತ್ತಿ II
ವಿವಿಧ ಧರ್ಮಕೆ ಸಂಬಂಧವನು ಬೆಸೆದು
ಸ್ವಧರ್ಮದ ಹಿರಿಮೆಯನ್
ಗಿರಿ-ಶಿಖರದತ್ತೋಯ್ದ
ಮಹಾನ್ ಸಂತರಿವರು II
ಮಾತಿನ ತರಂಗಗಳಲಿ
ಎಲ್ಲರಾತ್ಮಬಲವನ್ ಅವರವರ
ಮುಷ್ಠಿಯೊಳಗಿರಿಸಿದವರು...
ದೇಹವನು ತ್ಯಜಿಸಿದರೂ
ಎಲ್ಲರಾತ್ಮದಲಿ ನೆಲೆಸಿದವರು
ಒಂದೊಂದು ನುಡಿಗಳಲದೆಷ್ಟು
ವಿದ್ಯುತ್ ಶಕ್ತಿಯು..
ಮೆದುಳ ನರಗಳನು
ಹೃದಯದಿ ಬಡಿತವನು
ಬಡಿದೆಬ್ಬಿಸುವ ಗುರುಯಿವರು
ಸಾಗರದಷ್ಟು ವಿವೇಕವನು ಹೊತ್ತು
ಅನಂದದೆಲ್ಲರ ಮನವನು
ಗೆದ್ದವರಿವರೇ
ನಮ್ಮ ನಿಮ್ಮೆಲ್ಲರ ಸ್ವಾಮಿ
ವಿವೇಕಾನಂದರು II
~ ಜಿ.ಪಿ.ಗಣಿ ~

Thursday, January 8, 2015

ನಾನಿನ್ನೂ ಮಾಗಬೇಕಿದೆ


______________
ಮಲಗಿರುವ ಅದೆಷ್ಟೋ ಕನಸಿನ
ಬಾವಲಿಗಳಿಗೆ ಕತ್ತಲಲಿ ಅರುಚಬೇಕಿದೆ
ಭಯದಿ ಅವಿತುಕೊಳ್ಳುವ ಆಮೆಯಂತಹ
ಮನಕೆ ಧೈರ್ಯ ತುಂಬಬೇಕಿದೆ
ಗೂಬೆಯಂತಹ ಸೋಮಾರಿ ದೇಹಕೆ
ಬೇತಾಳನ ಕಾಟ ಬೇಕಿದೆ
ಬಂಧಿಸಿಟ್ಟ ಉಸಿರ ಹಕ್ಕಿಗೆ
ಗರಿಬಿಚ್ಚಿ ಹಾರಬೇಕೆನಿಸಿದೆ
ನೆನ್ನೆ ನಾಳೆಗಳ ತೆವಲಿಗೆ
ಇಂದು ನಾಂದಿ ಹಾಡಬೇಕಿದೆ
ಸುತ್ತಲ ಜಗದ ತಪ್ಪಿಗೆ ಊಸರವಳ್ಳಿಯಾಗದೆ
ಮಧುರ ರಸವ ಹೀರಿ ಪತಂಗವಾಗಬೇಕಿದೆ
ಏನಾದರಾಗಲೀ ನಾನಿನ್ನೂ ಮಾಗಬೇಕಿದೆ!!
~ ಜಿ.ಪಿ.ಗಣಿ ~