ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, September 30, 2014

ಎಲ್ಲವೂ ಅಯೋಮಯ!

***********************************************************************************************
ಕಳೆಯಂತೆ ಇದ್ದ ಹಸಿರ ಪೈರಲಿ
ಜೊಳ್ಳು ದೇಹವ ತ್ಯಜಿಸಿ ಅಕ್ಕಿಯಾಗಿ
ನಾ ಹೊರ ಬಂದೆ 
ನಿನ್ನಯ ಹಸಿವ ನೀಗಿಸಲು...
ನಾ ಸೂಕ್ಷ್ಮ ಕಣವಾದೆ,
ನಿನಗೆ ಬೇಕಾದ ಆಕಾರದಿ
ಕರಗಿ... ಬೆಂದು
ಇಡ್ಲಿಯಾದೆ, ದೋಸೆಯಾದೆ
ಒಮ್ಮೊಮ್ಮೆ ನೀ ಕೊಟ್ಟ ಏಟಿಗೆ
ಸೀದು ಕರಕಲು ರೊಟ್ಟಿಯಾದೆ...
ನಿತ್ಯವೂ ನಿನಗಾಗಿ
ಅನ್ನವಾಗಿ ಬರುವೆ
ನಿನ್ನಲ್ಲಿ ಬೆರೆವೆ
ನನ್ನ ನಾ ಮರೆವೆ
ನನ್ನೊಳಗಿನ ನನ್ನಲಿ
ಸದಾ ನಿನ್ನನೇ ಕಾಣುವೆ!
ಏಕೋ ತಿಳಿಯುತ್ತಿಲ್ಲ!
ನಾ ಹುಟ್ಟಿದ್ದು...
ನನಗಾಗಿಯೋ?
ನಿನಗಾಗಿಯೋ?
ಪೈರು ಮೊದಲ?
ಭತ್ತ ಮೊದಲ?
ಅಕ್ಕಿಯಾಗಿ ಹೊರ ಬಂದ
ನಾ ಮೊದಲ?
ನಿನಗೆ ತೋಚಿದಂತೆ ಆಡಿಸುತಿರುವ
ನೀ ಮೊದಲ?

~ಜಿ.ಪಿ.ಗಣಿ~

***********************************************************************************************

1 comment:

  1. ಅದೇ ಮೂಲ ಪ್ರಶ್ನೆ!
    ತೆಲುಗಿನ ಅಮರ ಗೀತೆ:
    ’ದೇವುಡು ಚೇಸಿನ ಮನುಷುಲ್ಲಾರ...
    ಮನುಷುಲು ಚೇಸಿನ ದೇವುಳ್ಳಾರ...’
    ಎನ್ನುವಂತಿದೆ!

    ReplyDelete