***********************************************************************************************
ಹಸಿರೆಲೆಗಳಿಂದೇರಿದ ಹನಿಯ ಮುತ್ತು ಆವಿಯಾಗಿಹುದೋ
ಕರಗಿ ಭುವಿಯನ್ ಸೇರಲ್ ಬಯಸಿತಿರ್ಪುದು
ಹಸಿವ ಬೇಗೆಯೋಳ್ ಹೃದಯವಂ ಹಿಸುಕಿದಂತಾದೆಡೆ
ಖಾಲಿಯಾಗಿಹ ಉದರವನ್ ಭರ್ತಿಯಾಗಿಪುದೇ
ಸೋಲೆಂಬ ಭಯಂ ಆತ್ಮದೊಳಗಿರಲ್
ಗೆಲುವೆಂಬ ಭಕ್ತಿಯನ್ ಆರಾಧಿಸಲಾಗಿಪುದೇ
ಆತ್ಮದೋಳ್ ಸಾವಿನ ಶಂಕೆಯನ್ ಹೊತ್ತು
ದೇಹವನ್ ದೂಶಿಸಿದೆಡೆ ಸ್ವರ್ಗವನ್ ಪಡೆಯಲಾಗಿಪುದೇ
ಚಿಂತೆಯೆಂಬಾ ಚಿತೆಯೋಳ್ ಹುದುಗಿ
ಜೀವ ಭಿಕ್ಷೆಯನ್ ಕೇಳಿದೆಡೆ
ಚಿತೆಯನ್ ಸುಡುವ ಬೆಂಕಿಯೋಳ್
ಆಲಾಪನೆಯೂ ಬೆಂದು ಬೂದಿಯಾಗದಿರ್ಪುದೇ
ತಳಮಳದಿಂ ಬಳಲ್ತಿರುವ ಮಸ್ತಕವನ್
ಅಡಗಿಸುವ ದಿಟ್ಟ ಧೀರತನಂ ನಿನ್ನಾತ್ಮದೊಳಲ್ಲದೇ
ಮತ್ತೆಲ್ಲೋ ಹುಡುಕಲಾಗಿಪುದೇ
ಮನಸು ಭಾರದೊಳಿರಲ್ ಕತ್ತಲಾವರಿಪುದು
ನಿಮಿಷ ನಿಮಿಷವನ್ ಪ್ರೀತಿಸಲ್ ಬದುಕು ಹಸನಾಗುವುದು

ಕರ್ಮವನ್ ನಡೆಸುತಲಿ ಫಲವನ್ ಅವನ ಪಾದಕರ್ಪಿಸಿದೆಡೆ
ಆತ್ಮಗರ್ಭದೋಳ್ ಆತನವತರಿಸುವನು
~ಜಿ.ಪಿ.ಗಣಿ~
***********************************************************************************************
***********************************************************************************************
ಹುಟ್ಟಿದ ಮೇಲೆ ಚರಾ ಚರಗಳಿಗೂ ಬದುಕಿನಲ್ಲಿ ಕರ್ತವ್ಯವು ಇದ್ದೇ ಇರುತ್ತದೆ.
ReplyDeleteಕರ್ತವ್ಯ ನಿರ್ವಹಣೆಯೊಂದೇ ನಮ್ಮ ಗಮ್ಯ ಮತ್ತು ಉದ್ದೇಶವಾಗಿರಬೇಕೆಂದು ಪ್ರೇರೇಪಿಸುವ ಕವನ.
ಬದುಕಿನ ಹಾದಿಯಲಿ, ಹಾಡು ಹೇಳಿದಂತೆ, ಸುಂದರ ಕವನ, (ಬದರಿನಾಥ ಸರ್ ಗೆ, ಇಂತಹ ಒಳ್ಳೆಯ ಬರಹಗಳನ್ನು ಆರಿಸಿ ಪರಿಚಯಿಸಿದ್ದಾಕ್ಕಾಗಿ ನಮನ )
ReplyDelete