ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, February 21, 2015

ಬಚ್ಚಿಟ್ಟ ಪ್ರೀತಿಯನೆಂದಿಗೂ
ಹುಡುಕಲಾಗದು
ಪಡೆದ ಜ್ಞಾನವನು
ಹಂಚದಿರದು
ಮಸ್ತಕದೋಳ್ 
ಜೀರ್ಣವಾಗದು!
ಕಿಸೆಯಲ್ಲಿ ಕಾಸಿರಲು
ಹೋಟೆಲಿನಲಿ ಶೋಕಿಯ ಅಮಲಿರಲು
ಮಾಡಿಟ್ಟ ಅನ್ನವು ಮನೆಯಲಿ
ಹಳಸುತ್ತಿರುವುದು...
ಜೇಬು ಬರಿದಾಗಿ
ನಾರುವ ಅನ್ನದ ಅಗುಳಿಗೂ
ಕಚ್ಚಾಟ ನಡೆದಿದೆ
ಬೀದಿ ನಾಯಿಗಳೊಡನೆ!
ತಿಂದ ಅನ್ನವಾಗಲೀ
ಕುಡಿದ ನೀರಾಗಲೀ
ಸೇವಿಸುವ ಗಾಳಿಯಾಗಲಿ
ಹೊರ ಬರುವವು
ಮತ್ತೊಂದು
ಜನ್ಮವ ತಳೆದು
ಹೊಸ ರೂಪವ ಪಡೆದು ...
~ಜಿ.ಪಿ.ಗಣಿ~

Thursday, February 19, 2015

ನನ್ನ ಪ್ರೀತಿಯಲಿ
ನೀ ತಾವರೆಯಂತೆ
ನಾ ಕೆಸರಿನಂತೆ
ನನ್ನ-ನಿನ್ನ ನಡುವಿನಂತರ
ತಿಳಿ ನೀರು!
ನಿನ್ನಂದಕೆ ಮತ್ತಷ್ಟು
ಹಸಿರೆಲೆ ಸೀರೆಯ
ಹೊದಿಕೆಯನೊದಿಸಿ
ನಿನ್ನಯ ಉಸಿರಿನ ಬೇರನು
ಬಿಗಿಯಿಡಿದಿಡುವೆ
ನನ್ನೊಡಲ ಕಡಲೊಳಗೆ...
ನೀ ಯಾರದೋ ಮುಡಿಯನೇರಿದರೂ
ಮತ್ತೆ ಮತ್ತೆ ಚಿಗುರುವೆ
ಎನ್ನೊಡಲ ಕೆಸರಿನಿಂದ
ಅದರೊಳಗಿನ ನಿನ್ನಯ
ನೆನಪಿನ ಹಸಿರಿನಿಂದ..
ಪ್ರೀತಿಯು ಹೊರ ಸಿಗುವ
ಫಲ-ಪುಷ್ಪಗಳಲ್ಲಿಲ್ಲ
ಅದನೆತ್ತು ಹೊತ್ತ ಹೃದಯದ
ತಾಯ ಬೇರಿನಲಿಹುದು...
~ಜಿ.ಪಿ.ಗಣಿ

Sunday, February 1, 2015

ಪ್ರೇಮ ಕೃಷಿ


ಎನ್ನೆದೆಯ ಹೊಲವು
ಪಾಳು ಬಿದ್ದಿತ್ತು!
ಪ್ರೀತಿಯ ನೇಗಿಲಲಿ
ಉಳುವವರಿಲ್ಲದೇ ...
ಬೆಳೆದ್ದಿದ್ದವು ಅದೆಷ್ಟೋ
ರೋಗದ ಗಿಡಗಳು
ಹಾಳ-ಹೆಸರಿಲ್ಲದೇ...
ನಿನ್ನಯ ಪ್ರೇಮದ ನೇಗಿಲ
ಹರಿತದಿಂದ
ಈ ಜಡ ಮನವು
ಸಡಿಲಗೊಂಡು
ನಿನ್ನಯ
ಮಮತೆಯ
ಮಳೆ ಹನಿಗಾಗಿ
ಕಾದು ಕುಳಿತಿಹುದು...
ಆವ ಸಸಿಯ
ಬೀಜವಿಹುದೋ ನಿನ್ನಾತ್ಮದಲಿ
ನಾನರಿಯೆನು...
ನನಗೊಂದು ಆಸೆಯಿಹುದು!!
ನೀ ತುಳಸಿಯಾಗಿ
ಜನ್ಮವನು ತಳೆದು
ಬೆಳೆದು ನಿಲ್ಲು
ಎನ್ನೊಡಲ ಕಣ ಕಣದೊಳಗೆ...
ಎನ್ನ ಚಿತ್ತಕ್ಕೆ ಹಾರವಾಗಿ
ಚಿತೆಗೆ ಧೂಪವಾಗಿ
ಪರಮಾತ್ಮ-ಹುತಾತ್ಮರ
ಕೊರಳೆದೆಯಲ್ಲಿ ಅನಂತವಾಗಿ...
~ಜಿ.ಪಿ.ಗಣಿ~

Wednesday, January 21, 2015

High BP

___
ದಿನವೂ ಮಿಡಿಯುವ
ಎನ್ನಂತರಗಂಗೆಯೊಳಗಿನ ಸದ್ದನು 
ನಾನಿಂದಿನವರೆಗೂ ಕೇಳದಾಗಿದ್ದೆ!!
ನಿನ್ನ ಸೆರೆಹಿಡಿದ ಕಣ್ಣ ಮಸೂರವು
ಎದೆಯೊಳಗಿನ ಒಂದೊಂದು
ಬಡಿತವನೂ ಕೇಳಲು
ಲಂಚವನು ಬೇಡುತ್ತಿವೆ
ಲಂಚವ ಭರಿಸಲು
ಕಲ್ಪನೆಯ ಸಮಯವನು
ಲೂಟಿ ಹೊಡೆಯುತಿರುವೆ
ನಿನ್ನಾವರಿಸಲಿರುವ ತುಡಿತಕ್ಕಾಗಿ!!

Tuesday, January 13, 2015

ಸ್ವಾಮಿ ವಿವೇಕಾನಂದ

ಜಗದಿ ಆಧ್ಯಾತ್ಮದ ಹಸಿವನ್ ಹೊತ್ತಿಸಿ
ಸಕಲ ಜೀವರಾಶಿಯೊಳಗನು ದಿಟ್ಟಿಸಿ
ಪರದೇಶವ ಸುತ್ತಿ ಸುತ್ತಿ
ಎಲ್ಲರ ಮತವೊಂದೇ,
ಎಲ್ಲರ ಧರ್ಮವೊಂದೆಂದು
ಹೇಳಿದರು ತಮ್ಮ ಭಾಷಣದಿ
ಒತ್ತಿ ಒತ್ತಿ II
ವಿವಿಧ ಧರ್ಮಕೆ ಸಂಬಂಧವನು ಬೆಸೆದು
ಸ್ವಧರ್ಮದ ಹಿರಿಮೆಯನ್
ಗಿರಿ-ಶಿಖರದತ್ತೋಯ್ದ
ಮಹಾನ್ ಸಂತರಿವರು II
ಮಾತಿನ ತರಂಗಗಳಲಿ
ಎಲ್ಲರಾತ್ಮಬಲವನ್ ಅವರವರ
ಮುಷ್ಠಿಯೊಳಗಿರಿಸಿದವರು...
ದೇಹವನು ತ್ಯಜಿಸಿದರೂ
ಎಲ್ಲರಾತ್ಮದಲಿ ನೆಲೆಸಿದವರು
ಒಂದೊಂದು ನುಡಿಗಳಲದೆಷ್ಟು
ವಿದ್ಯುತ್ ಶಕ್ತಿಯು..
ಮೆದುಳ ನರಗಳನು
ಹೃದಯದಿ ಬಡಿತವನು
ಬಡಿದೆಬ್ಬಿಸುವ ಗುರುಯಿವರು
ಸಾಗರದಷ್ಟು ವಿವೇಕವನು ಹೊತ್ತು
ಅನಂದದೆಲ್ಲರ ಮನವನು
ಗೆದ್ದವರಿವರೇ
ನಮ್ಮ ನಿಮ್ಮೆಲ್ಲರ ಸ್ವಾಮಿ
ವಿವೇಕಾನಂದರು II
~ ಜಿ.ಪಿ.ಗಣಿ ~

Thursday, January 8, 2015

ನಾನಿನ್ನೂ ಮಾಗಬೇಕಿದೆ


______________
ಮಲಗಿರುವ ಅದೆಷ್ಟೋ ಕನಸಿನ
ಬಾವಲಿಗಳಿಗೆ ಕತ್ತಲಲಿ ಅರುಚಬೇಕಿದೆ
ಭಯದಿ ಅವಿತುಕೊಳ್ಳುವ ಆಮೆಯಂತಹ
ಮನಕೆ ಧೈರ್ಯ ತುಂಬಬೇಕಿದೆ
ಗೂಬೆಯಂತಹ ಸೋಮಾರಿ ದೇಹಕೆ
ಬೇತಾಳನ ಕಾಟ ಬೇಕಿದೆ
ಬಂಧಿಸಿಟ್ಟ ಉಸಿರ ಹಕ್ಕಿಗೆ
ಗರಿಬಿಚ್ಚಿ ಹಾರಬೇಕೆನಿಸಿದೆ
ನೆನ್ನೆ ನಾಳೆಗಳ ತೆವಲಿಗೆ
ಇಂದು ನಾಂದಿ ಹಾಡಬೇಕಿದೆ
ಸುತ್ತಲ ಜಗದ ತಪ್ಪಿಗೆ ಊಸರವಳ್ಳಿಯಾಗದೆ
ಮಧುರ ರಸವ ಹೀರಿ ಪತಂಗವಾಗಬೇಕಿದೆ
ಏನಾದರಾಗಲೀ ನಾನಿನ್ನೂ ಮಾಗಬೇಕಿದೆ!!
~ ಜಿ.ಪಿ.ಗಣಿ ~

Thursday, December 25, 2014

ಕಲ್ಲಿನೊಳಿನ ಮೆದು ಮನಸು


_________________
ರಾಗಿ ಕಾಳ ಕಲ್ಲಿನಂತಿದ್ದ
ನನ್ನೀ ಮನವನು
ಅರೆದು ಪುಡಿ ಪುಡಿ ಮಾಡಿ
ಬಿಸಿ ನೀರ ಪ್ರೀತಿಯನೋಯ್ದು
ನಿನ್ನ ಕಣ್ಣ ಕೋಲಲಿ
ಮೆದುವಾಗಿ ತಿರುವೆನ್ನನು
ಮುದ್ದು ಮಾಡಿ
ಆವ ಗಂಟಿಲ್ಲದೇ
ರಾಗಿ ಮುದ್ದೆಯಾಗಿಸಿದ
ನಿನ್ನ ಪ್ರೇಮಕೆ ಶರಣು!
~ ಜಿ.ಪಿ.ಗಣಿ~